ಬಿಜೆಪಿ ಪ್ರಣಾಳಿಕೆ ಮೋದಿ ಫೋಟೋ ಆಲ್ಬಂನಂತಿದೆ, ಯಾವುದೇ ಸ್ಪಷ್ಟತೆ ಇಲ್ಲ: ಪ್ರಿಯಾಂಕ್ ಖರ್ಗೆ

Public TV
5 Min Read
Priyank Kharge

ಕಲಬುರಗಿ: ಬಿಜೆಪಿ ಪ್ರಣಾಳಿಕೆ (BJP Manifesto) ಘೋಷಣೆಗಳ ಪುಸ್ತಕದಂತಿದ್ದು, ಮೋದಿ (Narendra Modi) ಫೋಟೋ ಆಲ್ಬಮ್ ತರ ಇದೆ. ಅವರ ಪಿಕ್‌ನಿಕ್‌ನ ವಿಭಿನ್ನ ಫೋಟೋಗಳು ಬಿಟ್ಟರೆ ಯುವಕರಿಗೆ, ಮಹಿಳೆಯರಿಗೆ, ರೈತರಿಗೆ, ಬಡವರಿಗೆ, ಶ್ರಮಿಕರಿಗೆ, ನಿರ್ಗತಿಕರಿಗೆ ಉಪಯೋಗವಾಗುವಂತಹ ಯಾವುದೇ ಅಂಶಗಳಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kahrge) ತೀವ್ರ ವಾಗ್ದಾಳಿ ನಡೆಸಿದರು.

ಕಲಬುರಗಿ (Kalaburagi) ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆ ಈ ಹಿಂದಿನ ಅಚ್ಛೇದಿನ್‌ನಿಂದ ಹಿಡಿದು ಈಗಿನ ಮೋದಿ ಕೀ ಗ್ಯಾರಂಟಿವರೆಗೆ ಬಂದಿದೆ. ಈ ಹಿಂದಿನ ಹತ್ತು ವರ್ಷಗಳ ಗ್ಯಾರಂಟಿಗಳು ಯಾರ ಗ್ಯಾರಂಟಿಗಳಾಗಿದ್ದವು? ಅವರದೇ ಗ್ಯಾರಂಟಿಗಳಾದ ಅಚ್ಛೇದಿನ್, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, 100 ಸ್ಮಾರ್ಟ್ ಸಿಟಿಗಳು, 2 ಕೋಟಿ ಉದ್ಯೋಗ ಸೃಷ್ಟಿಯ ಗ್ಯಾರಂಟಿಗಳು ಏನಾದವು? ಯಾವ ಗ್ಯಾರಂಟಿಗಳು ಅನುಷ್ಠಾನಗೊಂಡಿವೆ? ಅವರ ಗ್ಯಾರಂಟಿಗಳಿಗೆ ವಾರೆಂಟಿಯೇ ಇಲ್ಲ. ಹಾಗಾಗಿ ಜನರು ಅವರ ಗ್ಯಾರಂಟಿಗಳನ್ನು ನಂಬುವುದಿಲ್ಲ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನೇ ಅವರು ಕಾಪಿ ಮಾಡಿಕೊಂಡಿದ್ದಾರೆ. ಯಾಕೆಂದರೆ ನಮ್ಮ ಗ್ಯಾರಂಟಿಗಳಿಗೆ ಖರ್ಗೆ ಸಾಹೇಬರ, ಸಿದ್ದರಾಮಯ್ಯನವರ ಹಾಗೂ ಡಿಕೆ ಶಿವಕುಮಾರ್ ಅವರ ಸಾಕ್ಷಿ ಇದೆ ಎಂದರು. ಇದನ್ನೂ ಓದಿ: ಭಾರತದಲ್ಲಿ ದಾಖಲೆ – ಚುನಾವಣೆ ನಡೆಯುವ ಮೊದಲೇ ನಗದು, ಮದ್ಯ ಸೇರಿ ಒಟ್ಟು 4,658 ಕೋಟಿ ಮೌಲ್ಯದ ವಸ್ತುಗಳು ವಶ

ಯುವಕರ ಬಗ್ಗೆ ಮೋದಿಯ ಗ್ಯಾರಂಟಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಾಯಿದೆ ತರಲಾಗುವುದು ಎಂದಿದೆ. ಅವರದೇ ಪಕ್ಷ ಇಲ್ಲಿ ಅಧಿಕಾರದಲ್ಲಿದ್ದಾಗ ಪರೀಕ್ಷೆಗಳಲ್ಲಿ ಅವಾಂತರ ನಡೆದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಪರೀಕ್ಷೆಗಳ ಅಕ್ರಮ ತಡೆಗೆ ಬಿಲ್ ಪಾಸ್ ಮಾಡಿ ಅದನ್ನು ರಾಜ್ಯಪಾಲರ ಸಹಿಗೆ ಕಳುಹಿಸಲಾಗಿತ್ತು. ಆದರೆ ಬಿಲ್ ವಾಪಸ್ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಮಿಸ್ಟರ್ ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ – ಏಕವಚನದಲ್ಲೇ ಹರಿಹಾಯ್ದ ಡಿಕೆಶಿ

bjp manifesto modi guarantee

ಕೇಂದ್ರದ ಅಂಕಿ ಅಂಶಗಳ ಪ್ರಕಾರ, ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಕೇಂದ್ರದ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ 9.64 ಲಕ್ಷ ಹುದ್ದೆಗಳು ಹಣಕಾಸು ಇಲಾಖೆಯಲ್ಲಿ, 3 ಲಕ್ಷ ಹುದ್ದೆಗಳು ರೈಲ್ವೆ ಇಲಾಖೆಯಲ್ಲಿ, 2.2 ಲಕ್ಷ ಹುದ್ದೆಗಳು ಸೇನೆಯ ಸಿವಿಲ್ ವಿಭಾಗದಲ್ಲಿ, 1.20 ಲಕ್ಷ ಹುದ್ದೆಗಳು ಅಂಚೆ ಇಲಾಖೆಯಲ್ಲಿ, 74,000 ಹುದ್ದೆಗಳು ಕಂದಾಯ ಇಲಾಖೆಯಲ್ಲಿ ಖಾಲಿ ಇವೆ. ಈ ಎಲ್ಲಾ ಹುದ್ದೆ ತುಂಬಲು ಯಾವ ಕ್ರಮ ಕೈಗೊಳ್ಳಲಾಗುವುದು ಎನ್ನುವ ಕುರಿತು ಬಿಜೆಪಿ ಪ್ರಣಾಳಿಕೆಯಲ್ಲಿ ಇಲ್ಲ. ಐಒಎಲ್ ವರದಿ ಪ್ರಕಾರ 83% ಯುವಕರು ನಿರುದ್ಯೋಗಿಗಳಾಗಿದ್ದಾರೆ. ಲೋಕನೀತಿ ಸರ್ವೆ ಪ್ರಕಾರ, 79% ಯುವಕರಿಗೆ ಉದ್ಯೋಗ ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಸಮಾವೇಶ ನಡೆದ ಜಾಗದಲ್ಲಿ ಕಸ ತೆಗೆದ ಯದುವೀರ್‌ ಒಡೆಯರ್‌

ಬಿಜೆಪಿಯವರು ಸ್ಕಿಲ್ ಇಂಡಿಯಾ ಯೋಜನೆಯಡಿಯಲ್ಲಿ 2022ರ ಒಳಗಾಗಿ 40 ಕೋಟಿ ಯುವಕರಿಗೆ ತರಬೇತಿ ನೀಡುವುದಾಗಿ ಹೇಳಿದ್ದು, ಈ ಗುರಿಯಲ್ಲಿ ಇದುವರೆಗೆ ಕೇವಲ 3.51% (1.40 ಕೋಟಿ) ಜನರಿಗೆ ತರಬೇತಿ ನೀಡಿದ್ದಾರೆ ಹೊರತು ಉದ್ಯೋಗ ನೀಡಿಲ್ಲ. ಈ 3.51% ರಲ್ಲಿ 80% ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. 20% ಯುವಕರು ಈ ಯೋಜನೆ ಉಪಯೋಗ ಇಲ್ಲ ಎಂದು ಬಿಟ್ಟು ಹೋಗಿದ್ದಾರೆ ಎಂದು ಅಂಕಿ ಅಂಶ ನೀಡಿ ವಿವರಿಸಿದರು. ಇದನ್ನೂ ಓದಿ: ಮಹಿಳೆಯರನ್ನ ಅವಮಾನಿಸಿಲ್ಲ – ಹೆಣ್ಣುಮಕ್ಕಳ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ

bjp manifesto 2024

ಕಳೆದ ಸಲ ಬಂದಾಗ ಮೈಸೂರು, ಹಂಪಿ, ಅಂಜನಾದ್ರಿ ಅಭಿವೃದ್ಧಿ ಮಾಡುವುದಾಗಿ ಮೋದಿ ಹೇಳಿದ್ದರು. ಅವೆಲ್ಲ ಏನಾಯ್ತು? ಈಗ ಮತ್ತೆ ಭಾನುವಾರ ಅದೇ ಮಾತನ್ನೇ ಹೇಳಿದ್ದಾರೆ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿದ್ದ ಬರ ಪರಿಹಾರ, ತೆರಿಗೆ ಪರಿಹಾರ ಕುರಿತು ಮಾತೇ ಆಡಿಲ್ಲ. ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಪಕ್ಕ ಕೂರಿಸಿಕೊಂಡು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಚಾರದ ಬಗ್ಗೆ ಮಾತನಾಡುತ್ತಾರೆ. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ ಎಂದು ತಾನೆ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದು? ಯಡಿಯೂರಪ್ಪ ವಿಜಯೇಂದ್ರ ಅವರದ್ದು ಕುಟುಂಬ ರಾಜಕಾರಣವಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: `ಲೋಕ’ ಅಖಾಡದಲ್ಲಿ ಮತ್ತೆ ಮೋದಿ-ಗೌಡರ ಜೋಡಿ ಕಮಾಲ್ – ಏ.20ಕ್ಕೆ ದೇವನಹಳ್ಳಿಯಲ್ಲಿ ಬೃಹತ್‌ ಮೈತ್ರಿ ಸಮಾವೇಶ

ಮಹಿಳೆಯರಿಗೆ ಅನುಕೂಲವಾಗಲೆಂದು ನಮ್ಮ ಸರ್ಕಾರ ಶಕ್ತಿ, ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್‌ನ ಕುಮಾರಸ್ವಾಮಿ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹಗುರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಮೋದಿ, ವಿಜಯೇಂದ್ರ, ಅಶೋಕ್ ಸ್ಪಷ್ಟನೆ ನೀಡಲಿ. ಕುಮಾರಸ್ವಾಮಿ ವೆಸ್ಟೆಂಡ್‌ನಲ್ಲಿ ಹಾಗೂ ತೋಟದ ಮನೆಯಲ್ಲಿ ಇದ್ದರೆ ಜನರ ಕಷ್ಟ ಅರ್ಥವಾಗುವುದಿಲ್ಲ. ಹೊರಗಡೆ ಬಂದು ನೋಡಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮೋದಿ ಬಂದರೂ ಪ್ರತಿಷ್ಠೆ ಬಿಡದ ಪ್ರೀತಂಗೌಡ, ಪ್ರಜ್ವಲ್!

Lok Sabha Election 2024 BJP to release its poll manifesto tomorrow
2019ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವ ನರೇಂದ್ರ ಮೋದಿ, ಅಮಿತ್‌ ಶಾ

ಯುಪಿಎ ಸರ್ಕಾರ ಇದ್ದಾಗ 34% ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರೆ, ಈಗ ಕೇವಲ 24% ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಅದಕ್ಕಾಗಿಯೇ ರಾಜ್ಯದಲಿ ಇದುವರೆಗೆ 4,000 ಕೂಸಿನ ಮನೆಗಳನ್ನು ಸ್ಥಾಪಿಸಲಾಗಿದೆ ಎಂದರು. ಇದನ್ನೂ ಓದಿ: ಗಡಿ ದಾಟುವ ಮೊದಲೇ ಇರಾನ್‌ ಕ್ಷಿಪಣಿಗಳನ್ನಹೊಡೆದುರುಳಿಸಿದ ಇಸ್ರೇಲ್‌ – ಅರಬ್‌ ರಾಷ್ಟ್ರಗಳಿಂದಲೂ ತಡೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ನೀಡಿರುವ ಅವಹೇಳನಕಾರಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ, ಬಿಜೆಪಿಯವರು ಇನ್ನೂ ಚಾತುರ್ವರ್ಣದಲ್ಲಿದ್ದಾರೆ. ಮಹಿಳೆಯರು ಮುಖ್ಯವಾಹಿನಿಗೆ ಬರುವುದು ಅವರಿಗೆ ಇಷ್ಟವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಇಸ್ರೆಲ್, ಇರಾನ್ ಉದ್ವಿಗ್ನತೆ – ಟೆಲ್ ಅವೀವ್‍ಗೆ ಏರ್ ಇಂಡಿಯಾ ಹಾರಾಟ ಸ್ಥಗಿತ

ಅಬ್ ಕೀ ಬಾರ್ ಚಾರ್ ಸೌ ಪಾರ್ ಅಲ್ಲ, ಅಬ್ ಕೀ ಬಾರ್ ಬಿಜೆಪಿ ಸಂಸತ್ ಕೇ ಬಾಹರ್ ಆಗುತ್ತದೆ. ಕರ್ನಾಟಕದಿಂದ ನೂರು ಕೋಟಿ ಹಣ ದೇಶದ ಚುನಾವಣೆಗೆ ಬಳಕೆಯಾಗುತ್ತಿದೆ ಎಂದು ಪ್ರಧಾನಿ ಹೇಳಿರುವುದು ಹಾಸ್ಯಾಸ್ಪದ. ಕೇಂದ್ರದ ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇವೆ. ತನಿಖೆ ನಡೆಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆ ಸುಳ್ಳಿನಿಂದ ತುಂಬಿದೆ, ವಿಶ್ವಾಸಾರ್ಹವಲ್ಲ: ಕಾಂಗ್ರೆಸ್ ಆರೋಪ

ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಪಕ್ಷ ಸೇರ್ಪಡೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಗುತ್ತೇದಾರ್ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಬಂದಿದ್ದಾರೆ. ಆದರೆ ಅಂತಹ ಯಾವುದೇ ಪ್ರಸ್ತಾವನೆ ಸದ್ಯ ಪಕ್ಷದ ಮುಂದಿಲ್ಲ. ಆದರೂ ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ತಮ್ಮ ಕುಟುಂಬ ಬದ್ಧವಾಗಿರುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: 3 ಕೋಟಿ ಬಡವರಿಗೆ ಮನೆ, ದೇಶದ 4 ದಿಕ್ಕುಗಳಿಗೂ ಬುಲೆಟ್‌ ಟ್ರೈನ್‌: ಮೋದಿ ಗ್ಯಾರಂಟಿ

Share This Article