ನವದೆಹಲಿ: ಕೇಂದ್ರ ಸರ್ಕಾರದ ಮಹಿಳಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಬಿಜೆಪಿ ರಾಷ್ಟ್ರೀಯ ಮಹಿಳಾ ಘಟಕದಿಂದ (BJP Mahila Morcha) ‘ಕಮಲ್ ಮಿತ್ರ’ (Kamal Mitra) ಹೆಸರಿನಲ್ಲಿ ಹೊಸ ಅಭಿಯಾನ ಆರಂಭಿಸಿದ್ದು, ಎಪ್ರಿಲ್‌ನಿಂದ ಇದು ಕಾರ್ಯಾರಂಭವಾಗಲಿದೆ. ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಶನಿವಾರ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಮಹಿಳಾ ಕೇಂದ್ರಿತ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸುವ ನಿಟ್ಟಿನಲ್ಲಿ ಅಭಿಯಾನ ಕೆಲಸ ಮಾಡಲಿದ್ದು, ವಕೀಲರು, ವಿದ್ವಾಂಸರು, ಪ್ರಾಧ್ಯಾಪಕರು ಸೇರಿದಂತೆ ವಿವಿಧ ವಲಯಗಳ ವೃತ್ತಿಪರರು ಇಂದು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಮೋದಿ ಭದ್ರತೆಗೆ 2,000 ಪೊಲೀಸರ ನಿಯೋಜನೆ – ಐವರು ಎಸ್‌ಪಿಗಳು ಸ್ಥಳದಲ್ಲೇ ಮೊಕ್ಕಾಂ
ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಮಹಿಳೆಯರಿಗೆ ಮೋದಿ ಸರ್ಕಾರ ಮಹಿಳೆಯರಿಗಾಗಿ ಜಾರಿ ಮಾಡಿರುವ ಯೋಜನೆಗಳು, ಅದರ ಲಾಭಗಳನ್ನು ವಿವರಿಸಿ, ತಳಮಟ್ಟದ ಮಹಿಳೆಯರಿಗೆ ಜಾಗೃತಿ ಮೂಡಿಸುವ ಬಗ್ಗೆ ತಿಳಿಸಲಾಯಿತು.
ಯೋಜನೆಯ ಲಾಭ ಪಡೆಯದ ಮಹಿಳೆಯರಿಗೆ ಅರ್ಜಿ ಸಲ್ಲಿಸಿ ಯೋಜನೆ ಲಾಭ ಪಡೆಯುವ ಬಗ್ಗೆ ತರಬೇತಿ ನೀಡಲು ಸಮಾಲೋಚನೆ ನಡೆಸಲಾಯಿತು. ಎಪ್ರಿಲ್‌ನಿಂದ ಬಿಜೆಪಿ ರಾಷ್ಟ್ರೀಯ ಮಹಿಳಾ ಘಟಕ, ರಾಜ್ಯ ಘಟಕಗಳ ಮೂಲಕ ಎಲ್ಲ ರಾಜ್ಯಗಳಲ್ಲೂ ಜಾಗೃತಿ ಆರಂಭಿಸಲಿದೆ. 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ಅಭಿಯಾನ ಆರಂಭಿಸಲಾಗಿದೆ. ಇದನ್ನೂ ಓದಿ: ಧಾರವಾಡ ಜಿಲ್ಲಾಡಳಿತದಿಂದ ಪ್ರಧಾನಿ ಮೋದಿಗೆ ತೊಟ್ಟಿಲು ಗಿಫ್ಟ್