ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ದ ಪಕ್ಷದಲ್ಲೇ ಪರ -ವಿರೋಧ ಚರ್ಚೆ ಶುರುವಾಗಿದೆ. ಸಚಿವರ ವಿವಾದಿತ ಹೇಳಿಕೆಗಳಿಂದ ಪಕ್ಷಕ್ಕೆ, ಸರ್ಕಾರಕ್ಕೆ ದೊಡ್ಡ ಮುಜುಗರ ಉಂಟಾಗಿದೆ. ಸಚಿವರ ಮುಜುಗರ ಹೇಳಿಕೆಗಳ ಬಗ್ಗೆ ಪಕ್ಷದಲ್ಲಿ ಕೆಲವರಿಂದ ಅಪಸ್ವರ ಕೇಳಿಬಂದಿದೆ.
ಇಷ್ಟ ಇಲ್ಲದ ಇಲಾಖೆ ಕೊಟ್ಟಿದ್ದೇಕೆ ಅಂತ ಚರ್ಚೆಯಾಗುತ್ತಿದೆ. ಒಲ್ಲದ ಮನಸ್ಸಿಂದ ಪಡೆದ ಖಾತೆ ನಿಭಾಯಿಸೋದ್ರಲ್ಲಿ ಅರಗ ಜ್ಞಾನೇಂದ್ರ ಅವರು ಸೂಕ್ಷ್ಮತೆ ಮರೆತ್ರಾ ಅನ್ನೋ ಪ್ರಶ್ನೆ ಎದುರಾಗಿದೆ. ಕ್ಯಾಬಿನೆಟ್ ವಿಸ್ತರಣೆ ವೇಳೆ ಖಾತೆಯಿಂದ ಗೃಹ ಸಚಿವರು ಮುಕ್ತಿ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ ಕಡೇ ವಾರದಲ್ಲಿ ಗೃಹ ಸಚಿವರ ಸ್ಥಾನ ಬದಲಾವಣೆ ಆಗುತ್ತಾ?, ಅಷ್ಟಕ್ಕೂ ಪಕ್ಷದಲ್ಲೆ ಗೃಹ ಸಚಿವ ಕಾರ್ಯವೈಖರಿಗೆ ಅಪಸ್ವರಕ್ಕೆ ಕಾರಣ ಏನು ಎಂಬುದನ್ನು ನೊಡೋಣ. ಇದನ್ನೂ ಓದಿ: ಮುಸ್ಲಿಮರನ್ನ ಮದುವೆಯಾದ್ರೆ SSK ಸಮಾಜದಿಂದ ಬಹಿಷ್ಕರಿಸಿ: ನಾಗೇಶ್
ಗೃಹ ಖಾತೆ ಬಗ್ಗೆ ಅರಗ ಜ್ಞಾನೇಂದ್ರ ಅವರಿಗೆ ಒಲವು ಇರಲಿಲ್ಲ. ಆದರೂ ಅವರಿಗೆ ಖಾತೆ ಕೊಟ್ಟಿದ್ದು ಎಡವಟ್ಟಿಗೆ ಕಾರಣವಾಗಿದ್ದು. ಗೃಹ ಸಚಿವರು ಹಲವು ವಿಚಾರಗಳಲ್ಲಿ ಸೂಕ್ಷ್ಮತೆ ಮರೆತು ಹೇಳಿಕೆ ಕೊಟ್ಟಿರೋದು ಮುಜುಗರಕ್ಕೆ ಕಾರಣವಾಗಿದೆ. ಮೈಸೂರು ಯುವತಿ ಅತ್ಯಾಚಾರ ಕೇಸ್ ನಲ್ಲಿ ಸಚಿವರ ಹೇಳಿಕೆ ವಿವಾದ ಆಗಿತ್ತು. ಗೃಹ ಸಚಿವರಾಗಿ ಪೊಲೀಸರ ಬಗ್ಗೆ ಮಾತನಾಡಿದ ವಿಚಾರವೂ ವಿವಾದ ಆಗಿತ್ತು.
ಮೊನ್ನೆ ಚಂದ್ರು ವಿಚಾರದಲ್ಲಿ ಕೊಟ್ಟ ಹೇಳಿಕೆಯೂ ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ಪದೇ ಪದೇ ಸಚಿವರ ಹೇಳಿಕೆಗಳು ಪಕ್ಷದಲ್ಲಿ ಅನೇಕರ ವಿರೋಧಕ್ಕೆ ಕಾರಣವಾಗಿದೆ. ಹೀಗಾಗಿ ಸಚಿವರ ಖಾತೆ ಬದಲಾವಣೆ ಆಗುತ್ತೆ ಅನ್ನೋ ಚರ್ಚೆಯೂ ಶುರುವಾಗಿದೆ.