ಬೆಂಗಳೂರು: ಪಾಕಿಸ್ತಾನ (Pakistan) ಜೊತೆ ಮ್ಯಾಚ್ ಆಡಿದ ಬಗ್ಗೆ ಬಿಜೆಪಿ (BJP) ನಾಯಕರು ಬಾಯಿಬಿಟ್ಟು ಮಾತಾಡಲಿ. ಬಿಜೆಪಿಯವರಿಗೆ ನಾಚಿಕೆ, ಮಾನ-ಮರ್ಯಾದೆ ಇಲ್ಲ ಎಂದು ಸಚಿವ ಸಂತೋಷ ಲಾಡ್ (Santosh Lad) ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಮತಾಂತರ ಆದವರಿಗೆ ಮೂಲ ಜಾತಿ ಜೊತೆ ಧರ್ಮ ನಮೂದು ಮಾಡುವ ಬಗ್ಗೆ ಕಾಲಂ ಇರುವ ಬಗ್ಗೆ ಬಿಜೆಪಿ ವಿರೋಧ ಮಾಡುತ್ತಿರುವ ವಿಚಾರವಾಗಿವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಇಂತಹ ವಿಷಯವನ್ನೇ ಮಾತಾಡೋದು. ಪಾಕಿಸ್ತಾನದ ಜೊತೆ ಮ್ಯಾಚ್ ಆಡಿದ ಬಗ್ಗೆ ಬಿಜೆಪಿ ಅವರು ವಿರೋಧ ಮಾಡಲಿ ನೋಡೋಣ. ಜಾತಿ, ಧರ್ಮ ಬಂದರೆ ಮಾತ್ರ ಇವರು ವಿರೋಧ ಮಾಡೋದು. ನಾಚಿಕೆ, ಮಾನ-ಮರ್ಯಾದೆ ಇದೆಯಾ ಇವರಿಗೆ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಯಶ್ ತಾಯಿ ಪುಷ್ಪ ಅವರಿಗೂ ಈ ವೀಡಿಯೋ ತಲುಪಬೇಕು: ಪೇಮೆಂಟ್ ಆಗಿಲ್ಲ ಅಂತ ಕೊತ್ತಲವಾಡಿ ಸಿನಿಮಾ ಕಲಾವಿದ ಆರೋಪ
ಆಪರೇಷನ್ ಸಿಂಧೂರ (Operation Sindoor) ಅಂತ ಭಾರೀ ದೊಡ್ಡ ದೊಡ್ಡ ಭಾಷಣ ಮಾಡಿದರು. ಅಮಿತ್ ಶಾ ಮಗ ಜೈ ಶಾ ಐಸಿಸಿ ಅಧ್ಯಕ್ಷ ನೀವು ಯಾಕೆ ಪಾಕಿಸ್ತಾನದ ಜೊತೆ ಮ್ಯಾಚ್ ಆಡಿದ್ರಿ. ಬಿಜೆಪಿಯವರಿಗೆ ಪಾಕಿಸ್ತಾನ, ಮುಸ್ಲಿಮರು ಇಲ್ಲದೆ ವ್ಯವಹಾರ ಇಲ್ಲ. ಇದನ್ನು ಇಟ್ಟುಕೊಂಡು ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದರಿಂದಲೇ ಬಿಜೆಪಿ ಅವರು ಜೀವನ ಮಾಡ್ತಿರೋದು ಎಂದು ಕಿಡಿಕಾರಿದರು.
ಇನ್ನು ಸಮೀಕ್ಷೆಯಲ್ಲಿ ನಾಸ್ತಿಕ ಕಾಲಂ ಇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅನೇಕರು ದೇವರನ್ನು ನಂಬಲ್ಲ. ಧರ್ಮ, ನಂಬಿಕೆ ಅವರಿಗೆ ಬಿಟ್ಟ ವಿಚಾರ. ನಾವು ಅವರ ಭಾವನೆಯನ್ನು ಗೌರವಿಸಬೇಕು. ಧರ್ಮ ಅನ್ನೋದು ಅವರ ಇಚ್ಛೆ. ನಾವು ಅದನ್ನ ಗೌರವಿಸಬೇಕು. ಬಿಜೆಪಿ ಅವರು ರಾಜಕೀಯ ಬಿಟ್ಟು ಇನ್ನೇನು ಮಾಡಲ್ಲ ಎಂದು ಹೇಳಿದರು.ಇದನ್ನೂ ಓದಿ: ಬೆಂಗ್ಳೂರು | ಮನೆ ಬಾಡಿಗೆ ಪಡೆದು ಲೀಸ್‍ಗೆ ಕೊಟ್ಟು ಕೋಟಿ ಕೋಟಿ ವಂಚನೆ – ಹಣ ಕೊಟ್ಟವ್ರು ಬೀದಿಪಾಲು