ಲಕ್ನೋ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮವನ್ನು ಉತ್ತರ ಪದೇಶದ ಬಸ್ತಿ ಜಿಲ್ಲೆಯ ನದಿಗೆ ಬಿಡುವ ವೇಳೆ ಕೆಲವು ಬಿಜೆಪಿ ಮುಖಂಡರು ಬೋಟ್‍ನಿಂದ ಜಾರಿ ನೀರಿಗೆ ಬಿದ್ದಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ರಾಮಪತಿ ರಾಮ್ ತ್ರಿಪಾಟಿ, ಸಂಸದ ಹರೀಶ್ ದ್ವಿವೇದಿ, ಶಾಸಕ ರಾಮ್ ಚೌದರಿ, ಕೆಲವು ಹಿರಿಯ ಮುಖಂಡರು ಮತ್ತು ಪೊಲೀಸ್ ಅದೀಕ್ಷಕ ದಿಲಿಪ್ ಕುಮಾರ್ ಆಯತಪ್ಪಿ ಬೋಟ್‍ನಿಂದ ನೀರಿಗೆ ಬಿದ್ದಿದ್ದಾರೆ. ತಕ್ಷಣವೇ ಪೊಲೀಸರು ನೀರಿಗೆ ಹಾರಿ ಎಲ್ಲರನ್ನೂ ರಕ್ಷಿಸಿದ್ದಾರೆ.
Advertisement
ಬೋಟ್ ಮೇಲೆ ನಿಲ್ಲಲು ಮಾಡಿದ್ದ ವೇದಿಕೆ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದರಿಂದಾಗಿ ಬೋಟ್ ವಾಲಿ ಅನೇಕರು ನದಿಗೆ ಬಿದ್ದಿದ್ದಾರೆ. ನದಿಯ ದಂಡೆಯಲ್ಲಿಯೇ ಘಟನೆ ಸಂಭವಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ನದಿಗೆ ಕೆಲವರು ಬೀಳುತ್ತಿದ್ದಂತೆ ರಕ್ಷಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಬತ್ತಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ರಾಜಶೇಖರ್ ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv