ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರ (Basangouda Patil Yatnal) ಕಿರಿಕ್ ಹೇಳಿಕೆಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಹೋಗುತ್ತಿದೆ. ಎಲ್ಲಿಯವರೆಗೆ ಬಂದಿದೆ ಎಂದರೆ ಸದ್ಯದ ಹಂತದಲ್ಲಿ ಯತ್ನಾಳ್ ವರ್ಸಸ್ ಹೈಕಮಾಂಡ್ (High Command) ಅನ್ನೋ ರೀತಿ ಈಗಿನ ಚಿತ್ರಣ ಬಿಂಬಿತವಾಗುತ್ತಿದೆ. ಏಕೆಂದರೆ ಖುದ್ದು ಹೈಕಮಾಂಡ್‌ಗೆ ಯತ್ನಾಳ್ ಸುಮ್ಮನಿರಿಸೋದೇ ದೊಡ್ಡ ಸವಾಲಾಗಿದೆ.
Advertisement
ಬಿಎಸ್‌ವೈ ಸಿಎಂ ಆಗಿದ್ದಾಗಿಂದಲೂ ಹೈಕಮಾಂಡ್‌ಗೆ ಯತ್ನಾಳ್ ದೊಡ್ಡ ತಲೆನೋವಾಗಿದ್ದಾರೆ. ಇದೀಗ ಯತ್ನಾಳ್ ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಆಗಲ್ಲ, ತಮ್ಮನ್ನು ತುಳಿಯಲು ಆಗಲ್ಲ ಅಂತ ಓಪನ್ ಚಾಲೆಂಜ್ ಮಾಡಿದರೂ, ಹೈಕಮಾಂಡ್ ಸೈಲೆಂಟ್ ಆಗಿರೋದು ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿದೆ.
Advertisement
Advertisement
ಶಾಸಕ ಯತ್ನಾಳ್ ಬಂಡಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಸರಿಪಡಿಸುವುದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಯತ್ನಾಳ್ ಬಂಡಾಯಕ್ಕೆ ಪೂರ್ಣವಿರಾಮ ಹಾಕುವ ಪ್ರಯತ್ನ ಬಿಜೆಪಿಯಲ್ಲಿ ನಡೆಯುತ್ತಿಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ. ಇದು ಎಲ್ಲಿಗೆ ತಲುಪಲಿದೆ ಎಂಬುವುದು ಸದ್ಯದ ಕುತೂಹಲ.
Advertisement
ಯಾರ ಹಿಡಿತಕ್ಕೂ ಸಿಗದ ಯತ್ನಾಳ್‌ಗೆ ಮೂಗುದಾರ ಕಟ್ಟಲಾಗದೇ ವರಿಷ್ಠರು ಒದ್ದಾಡುತ್ತಿದ್ದಾರೆ. ಪಕ್ಷದ ಶಿಸ್ತು ಮೀರಿದ ಶಾಸಕನ ವಿರುದ್ಧ ಇದುವರೆಗೂ ಶಿಸ್ತು ಕ್ರಮವೇ ಆಗಿಲ್ಲ. ಯತ್ನಾಳ್ ವಿರುದ್ಧ ಯಾವುದೇ ಶಿಸ್ತು ಕ್ರಮಕ್ಕಾಗಲೀ ಅಥವಾ ಅವರ ಬಾಯಿಗೆ ಕಡಿವಾಣ ಹಾಕುವುದಕ್ಕಾಗಲಿ ವರಿಷ್ಠರು ಮುಂದಾಗದಿರುವುದು ದೊಡ್ಡ ಅಚ್ಚರಿ, ಅನುಮಾನ ಹುಟ್ಟಿಸಿದೆ. ಇದನ್ನೂ ಓದಿ: ನಿನ್ನ ಬ್ಯಾನರ್ ಇಲ್ಯಾಕೆ..?- ವಿಜಯನಗರ ವಿಧಾನಸಭೆ ಕ್ಷೇತ್ರದ ಕೈ ಆಕಾಂಕ್ಷಿಗಳ ಗಲಾಟೆ
ಯತ್ನಾಳ್‌ರ ಬಂಡಾಯ, ಮುಜುಗರದ ಹೇಳಿಕೆಗಳಿಗೆ ಪೂರ್ಣವಿರಾಮ ಯಾವಾಗ ಅನ್ನೋದು ಯಾರಿಗೂ ಸ್ಪಷ್ಟತೆ ಇಲ್ಲ. ಪೂರ್ಣ ವಿರಾಮ ಹಾಕುವ ಪ್ರಯತ್ನ ಬಿಜೆಪಿಯಲ್ಲಿ ನಡೆಯುತ್ತಿದೆಯಾ ಅನ್ನೋದೂ ಸ್ಪಷ್ಟವಿಲ್ಲ. ಒಬ್ಬ ಶಾಸಕನಿಗೆ ಕಡಿವಾಣ ಹಾಕೋದು ಅಷ್ಟೊಂದು ಕಷ್ಟನಾ, ಬಿಜೆಪಿ ಹೈಕಮಾಂಡ್ ಇಷ್ಟೊಂದು ವೀಕ್ ಆಗಿ ಹೋಯ್ತಾ ಎಂಬ ಪ್ರಶ್ನೆಗಳನ್ನು ಈಗ ಖುದ್ದು ಬಿಜೆಪಿಯವರೇ ಕೇಳಿಕೊಳ್ಳುತ್ತಿದ್ದಾರೆ.
ಹೈಕಮಾಂಡ್ ಮೌನ ಯಾರಿಗೂ ಅರ್ಥವಾಗುತ್ತಿಲ್ಲ. ಹೈಕಮಾಂಡ್‌ನದ್ದು ಮೌನನಾ, ಜಾಣ ನಡೆನಾ ಅಥವಾ ಕಾದು ಹೊಡೆಯಲು ಸಮಯ ಎದುರು ನೋಡುತ್ತಿರೋದಾ ಎನ್ನುವುದು ಸದ್ಯಕ್ಕೆ ಗೊತ್ತಾಗುತ್ತಿಲ್ಲ. ಏನೇ ಆದರೂ ಯತ್ನಾಳ್ ಹೈಡ್ರಾಮಾ ಮುಂದೆ ಎಲ್ಲಿಗೆ ತಲುಪಲಿದೆ, ಏನಾಗಲಿದೆ ಎಂಬ ಪ್ರಶ್ನೆಗಳು ಈಗ ಪಕ್ಷದೊಳಗೂ ಹೊರಗೂ ಎಲ್ಲರನ್ನೂ ಕಾಡುತ್ತಿವೆ. ಇದನ್ನೂ ಓದಿ: ಸ್ವಪಕ್ಷದವರ ವಿರುದ್ಧ ಯತ್ನಾಳ್ ಗದಾಪ್ರಹಾರ- ನಿರಾಣಿ, ಯತ್ನಾಳ್ ಕಚ್ಚಾಟಕ್ಕೆ ಡ್ರೈವರ್ ಕೊಲೆ ಥಳುಕು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k