ಬಿಜೆಪಿ ಯುವ ಮುಖಂಡನನ್ನು ಚಾಕುವಿನಿಂದ ಇರಿದು ಕೊಂದ್ರು!

Public TV
1 Min Read
bjp

ರಾಂಚಿ: ಚಾಕುವಿನಿಂದ ಇರಿದು ಬಿಜೆಪಿ ಯುವ ಮುಖಂಡರೊಬ್ಬರನ್ನು ಕೊಲೆ ಮಾಡಿದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರಜ್ ಕುಮಾರ್ ಸಿಂಗ್ (26) ಮೃತ ವ್ಯಕ್ತಿ. ಸೂರಜ್ ಕುಮಾರ್ ಸಿಂಗ್ ಅವರು ಮನೆಗೆ ಹಿಂದಿರುಗುತ್ತಿದ್ದ ವೇಳೆ ಹರಹರಗುತ್ತು ಎಂಬಲ್ಲಿ ಈ ಘಟನೆ ನಡೆದಿದೆ.

Police Jeep

ಸೋನು ಸಿಂಗ್ ಹಾಗೂ ಆತನ ಸಹಚರರು ಸೂರಜ್ ಕುಮಾರ್ ಅವರನ್ನು ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ಸೂರಜ್ ಕುಮಾರ್ ಅವರು ತೀವ್ರ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಟಾಟಾ ಮುಖ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ-ಬೊಮ್ಮಾಯಿ

ಸೂರಜ್ ಮತ್ತು ಸೋನುಗೆ ಜಮೀನಿನ ವಿವಾದ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸೂರಜ್ ಕುಮಾರ್ ಸಿಂಗ್ ಮೇಲೆ ದಾಳಿ ನಡೆದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಂ ತಮಿಳು ವನನ್ ಹೇಳಿದ್ದಾರೆ. ಘಟನೆ ಕುರಿತು ಬಾಗ್ಬೆರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಸೋನು ಮತ್ತು ಬಾಲಾಪರಾಧಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇದನ್ನೂ ಓದಿ:  ಕುಡಿಯುವ ನೀರಿನ ಟ್ಯಾಂಕಿಯಲ್ಲಿ ಕೊಳೆತ ಶವ ಪತ್ತೆ

police web

ಸಹೋದರಿಯ ವಿವಾಹಕ್ಕೆ ಮೂರು ದಿನಗಳ ಮೊದಲು ಸಿಂಗ್ ಅವರ ಅವರ ಸಾವಿನ ಸುದ್ದಿಯಿಂದ ಕುಟುಂಬ ಕಂಗೆಟ್ಟಿದೆ. ಮೃತರ ಕುಟುಂಬದ ಸದಸ್ಯರಿಗೆ ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಬೇಕು ಎಂದು ಕುಟಂಬಸ್ಥರು ಒತ್ತಾಯಿಸಿದರು.

Share This Article