– ರಾಜನ ರೀತಿಯ ಆಡಳಿತ ನೋಡಿ ಜನ ಬೇಸತ್ತಿದ್ದಾರೆ ಎಂದ ವಿಪಕ್ಷ ನಾಯಕ
ಬೆಂಗಳೂರು: ಅರವಿಂದ್ ಕೇಜ್ರಿವಾಲ್ (Arvind Kejriwal) ಸಾವಿರಾರು ವರ್ಷ ಇತಿಹಾಸ ಹೊಂದಿರುವ ಯುಮುನಾ ನದಿ ಮೇಲೆ ಕಳಂಕ ಹಾಕಿಬಿಟ್ರು. ಅಲ್ಲದೇ ಜೈಲಿನಲ್ಲಿದ್ದುಕೊಂಡು 2 ತಿಂಗಳು ಆಡಳಿತ ಸ್ಥಗಿತಗೊಳಿಸಿದ್ರು. ಇದರ ಶಾಪ ತಟ್ಟಿದೆ. ಹಾಗಾಗಿ ಬಿಜೆಪಿಗೆ ಗೆಲುವಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashoka ಹೇಳಿದ್ದಾರೆ.
Advertisement
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ಕಾರು, ಮಫ್ಲರ್, ನಿಮಿಷ ನಿಮಿಷಕ್ಕೂ ಕೆಮ್ಮೋದು, 2 ಬೆಡ್‌ರೂಮ್ ಫ್ಲ್ಯಾಟ್, ಈಗ ಶೀಷ್ ಮಹಲ್ ಅದರಲ್ಲಿ 25 ರೂಮ್‌ಗಳಿವೆ. ಕಾರು, ಎಸ್ಕಾರ್ಟ್ ಹೀಗೆ ರಾಜನ ರೀತಿಯ ಆಡಳಿತ ನೋಡಿ ಜನ ಬೇಸತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Delhi Election Results | ಒಂದು ಕ್ಷೇತ್ರದಲ್ಲೂ ಖಾತೆ ತೆರೆಯದ ಕಾಂಗ್ರೆಸ್ – `ಕೈʼ ನಾಯಕರಿಗೆ ಮುಖಭಂಗ
Advertisement
ಸಾವಿರಾರು ವರ್ಷ ಇತಿಹಾಸ ಹೊಂದಿರುವ ಯುಮುನಾ ನದಿ (Yamuna River) ಮೇಲೆ ಕೇಜ್ರಿವಾಲ್ ಕಳಂಕ ಹಾಕಿಬಿಟ್ರು. ಯಮುನಾ ನದಿ ಒಂದು ದಿನಕ್ಕೆ ಮಲಿನ ಆಗಿಲ್ಲ. ದೆಹಲಿ ಜನ ಪ್ರತಿದಿನ ಕುಡಿಯುತ್ತಿದ್ದ, ಗಂಗೆ ಅಂತ ಪೂಜೆ ಮಾಡ್ತಿದ್ದ ನೀರಿನ ಮೇಲೆಯೇ ಕಳಂಕ ತಂದರು. ಸ್ವಚ್ಛತೆ ಮಾಡುವ ಕೆಲಸ ನದಿಯದ್ದಲ್ಲ. ಕೇಜ್ರಿವಾಲ್ ಸರಿಯಾಗಿ ನಿರ್ವಹಣೆ ಮಾಡದೇ ನದಿ ಮೇಲೆ ಆಪಾದನೆ ಮಾಡಿಬಿಟ್ಟರು. ಇದೇ ಅವರ ಸೋಲಿಗೆ ಕಾರಣ ಎಂದು ನುಡಿದಿದ್ದಾರೆ.
Advertisement
Advertisement
ಯಾರೇ ಸಿಎಂ ಜೈಲಿಗೆ ಹೋದಾಗ ರಾಜೀನಾಮೆ ಕೊಟ್ಟು ಅವರದ್ದೇ ಪಕ್ಷದ ಮತ್ತೊಬ್ಬರಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕಿತ್ತು. ಆದ್ರೆ ಇವರು 2 ತಿಂಗಳು ಜೈಲಿನಲ್ಲಿದ್ದುಕೊಂಡು ಆಡಳಿತ ಸ್ಥಗಿತಗೊಳಿಸಿದ್ರು, ಅದರ ಶಾಪ ತಟ್ಟಿದೆ. ಜೊತೆಗೆ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟವೇ ಕೇಜ್ರಿವಾಲ್ ದೊಡ್ಡ ಕಳ್ಳ, ಭ್ರಷ್ಟಾಚಾರಿ ಎಂದು ಹೇಳಿದಾಗ ಜನರಿಗೆ ಅರ್ಥವಾಯ್ತು. ಮಳ್ಳಿತರ ಬಂದು ಕಳ್ಳತನ ತರ ಆಗಿದ್ದಾನೆ ಎಂದು ಕಾಂಗ್ರೆಸ್ ಆಪಾದನೆ ಮಾಡಿತು. ಜೊತೆಗೆ ಪ್ರಧಾನಿ ಮೋದಿ ಅವರ ಆಡಳಿತ ಬಿಜೆಪಿ ಗೆಲುವಿಗೆ ಕಾರಣ ಎಂದು ಅಶೋಕ್ ಹೇಳಿದ್ದಾರೆ. ಇದನ್ನೂ ಓದಿ: ಆರೋಗ್ಯ ಸಮಸ್ಯೆ ಇದೆ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಸೆಲೆಬ್ರಿಟಿಗಳಿಗೆ ದರ್ಶನ್ ಮನವಿ
ಇಂಡಿಯಾ ಒಕ್ಕೂಟ ಒಡೆದು ಛಿದ್ರವಾಗಿದೆ. ಅಖಿಲೇಶ್ ಯಾದವ್, ಒಮರ್ ಅಬ್ದುಲ್ಲಾ ಎಲ್ಲರೂ ಕಾಂಗ್ರೆಸ್ಸನ್ನ ಟೀಕೆ ಮಾಡ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಸಹ ಈಗ ಪಾರ್ಟಿಮೆಂಟ್ ಪ್ರವೇಶಿಸಿದ್ದು, ವಂಶಪಾರಂಪರ್ಯ ರಾಜಕಾರಣ ಮುಂದುವರಿಸಿದ್ದಾರೆ. ಮೋದಿ ಜನಕ್ಕೋಸ್ಕರ ಕೆಲಸ ಮಾಡಿದ್ರೆ ಸೋನಿಯಾ, ರಾಹುಲ್, ಪ್ರಿಯಾಂಕ ತಮ್ಮ ಕುಟುಂಬಕ್ಕಾಗಿ ಮಾಡ್ತಿದ್ದಾರೆ ಎನ್ನೋದು ಜಗಜ್ಜಾಹೀರಾಗಿದೆ. ಆದ್ದರಿಂದ ಜನ ಮೋದಿ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ದೆಹಲಿಯಲ್ಲಿ ಅಧಿಕಾರ ಕೊಟ್ಟಿದ್ದಾರೆ. ದೆಹಲಿ ಜನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2020 ರಲ್ಲಿ 14-1, 2025 ರಲ್ಲಿ 4-11: ರಾಜಧಾನಿ ಹೋರಾಟದಲ್ಲಿ ಎಎಪಿಗೆ ದಕ್ಷಿಣ ದೆಹಲಿ ದೊಡ್ಡ ಹಿನ್ನಡೆ