ಭೋಪಾಲ್: ಬಿಜೆಪಿ ನಾಯಕಿ ಮತ್ತು ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತಂತೆ ಪ್ರಜ್ಞಾ ಸಿಂಗ್ ಠಾಕೂರ್ ತಮ್ಮ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದಾರೆ. ಇಂದು ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನಾನು ವೈದ್ಯರು ಸಲಹೆ ನೀಡಿದಂತೆ ಐಸೋಲೇಶನ್ನಲ್ಲಿದ್ದೇನೆ. ಕಳೆದ 2 ದಿನಗಳಿಂದ ನನ್ನೊಂದಿಗೆ ಸಂಪರ್ಕ ಬಂದಿದ್ದವರು ಮುನ್ನೆಚ್ಚರಿಕೆಯಿಂದ ಅಗತ್ಯವಿದ್ದರೆ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಕೋರಿಕೊಳ್ಳುತ್ತೇನೆ. ನೀವು ಆರೋಗ್ಯವಾಗಿರಲು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರುಂಡ, ಮುಂಡ ಕತ್ತರಿಸಿ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ – 7 ಮಂದಿ ಅರೆಸ್ಟ್
आज मेरी कोरोना रिपोर्ट पॉजिटिव आई है। मैं चिकित्सकों की देखरेख में हूं। 2 दिनों में जो भी मेरे संपर्क में आए हैं सभी से आग्रह है कि सचेत रहें और आवश्यकता पड़ने पर कोरोना टेस्ट भी करवा लें। हमें आपकी चिंता है। प्रभु से प्रार्थना है आप सभी स्वस्थ रहें।
— Sadhvi Pragya singh thakur (@SadhviPragya_MP) January 30, 2022
ಕಳೆದ ವರ್ಷ ಪ್ರಜ್ಞಾ ಸಿಂಗ್ ಠಾಕೂರ್ ಅವರು ಗೋಮೂತ್ರದ ಸಾರವು ಶ್ವಾಸಕೋಶದ ಸೋಂಕುಗಳು ಮತ್ತು ಕೊರೊನಾವೈರಸ್ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಹೇಳಿದ್ದರು. ದೇಶಿ ಹಸುವಿನ ಗೋಮೂತ್ರದ ಸಾರ (ಗೋಮೂತ್ರದ ಸಾರ) ಶ್ವಾಸಕೋಶದ ಸೋಂಕಿನಿಂದ ನಮ್ಮನ್ನು ದೂರವಿಡುತ್ತದೆ. ನನಗೆ ಬಹಳ ಆರೋಗ್ಯ ಸಮಸ್ಯೆಗಳಿದೆ. ಆದರೆ ನಾನು ಪ್ರತಿದಿನ ಗೌಮೂತ್ರ ಆರ್ಕ್ ತೆಗೆದುಕೊಳ್ಳುತ್ತೇನೆ. ಕೊರೊನಾ ವೈರಸ್ಗೆ ನಾನು ಯಾವುದೇ ಬೇರೆ ಔಷಧಿಯನ್ನು ತೆಗೆದುಕೊಳ್ಳಬೇಕಾಗಿಲ್ಲ ಎಂದಿದ್ದರು. ಇದನ್ನೂ ಓದಿ: ಯೂಟ್ಯೂಬ್ ಸ್ಟಾರ್ ಮಾಡುವ ಆಮಿಷವೊಡ್ಡಿ ಹುಡುಗಿ ಮೇಲೆ ಅತ್ಯಾಚಾರ