ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ನಾಯಕನಲ್ಲ, ನಾನ್ ಸೆನ್ಸ್ ಎಂದು ಬಿಜೆಪಿ (BJP) ನಾಯಕ ಮಣಿಕಂಠ ರಾಠೋಡ್ (Manikanta Rathod) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಚಿತ್ತಾಪೂರದ ಕೋಲಿ ಸಮಾಜದ ಯುವಕ ದೇವಾನಂದ ಆತ್ಮಹತ್ಯೆ ಪ್ರಕರಣದ ಆರೋಪಿ ಬಂಧನಕ್ಕೆ ಆಗ್ರಹಿಸಿ ತಿಂಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕೊಡುವುದು ಒತ್ತಟ್ಟಿಗಿರಲಿ. ಮನವಿ ಪಡೆಯುವ ಸೌಜನ್ಯವೂ ಸಚಿವರಿಗಿಲ್ಲ. ಆರೋಪಿ ಬಂಧನಕ್ಕೆ ರಸ್ತೆ ಮೇಲೆ ಉರುಳಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಕಡೆ ಗಮನ ಹರಿಸದೇ ಪ್ರಿಯಾಂಕ್ ಖರ್ಗೆ ಹೋಗ್ತಾರೆ. ಹೀಗಾಗಿ ಇವರು ನಾಯಕರಲ್ಲ ನಾನ್ ಸೆನ್ಸ್ ಎನ್ನಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ‘ಮೈ ಲಾರ್ಡ್’ ಹೇಳೋದು ಬಿಟ್ರೆ ನನ್ನ ಸಂಬಳದಲ್ಲಿ ಅರ್ಧ ಕೊಡ್ತೀನಿ: ಸುಪ್ರೀಂ ಜಡ್ಜ್
ಹಿಂದೂ ಪರ ಹೋರಾಟಗಾರರಾದ ಆಂದೋಲಾ ಸ್ವಾಮಿಜಿಗೆ ಬೆದರಿಕೆ ಹಾಕಲಾಗುತ್ತಿದೆ. ವ್ಯಕ್ತಿಯೊಬ್ಬ ಅವರಿಗೆ ಕರೆ ಮಾಡಿ ಹಲ್ಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಕಾಂಗ್ರೆಸ್‍ನಲ್ಲಿರುವ (Congress) ಲಿಂಗಾಯತ ನಾಯಕರೇ ಎಲ್ಲಿದ್ದೀರಿ? ಧರ್ಮ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸ್ವಾಮಿಜಿಗೆ ಅವಾಚ್ಯವಾಗಿ ನಿಂದಿಸಲಾಗಿದೆ. ಧರ್ಮ ರಕ್ಷಣೆಗಾಗಿ ಆಂದೋಲಾ ಸ್ವಾಮಿಜಿ ಪರವಾಗಿ ನಿಲ್ಲಿ. ಕೇವಲ ಕುರ್ಚಿ ಆಸೆಗಾಗಿ ಸುಮ್ಮನಿದ್ದಿರಾ? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹೊಸದು ಬೇಡ, ಬೊಮ್ಮಾಯಿ ಮಂಜೂರುಗೊಳಿಸಿದ ಯೋಜನೆಯ ಅನುದಾನ ನೀಡಲಿ: ವೇದವ್ಯಾಸ ಕಾಮತ್
Web Stories