– ಅನೇಕ ‘ಕೈ’ ನಾಯಕರು ಸಿಎಂ ಹುದ್ದೆಗೆ ಟವಲ್ ಹಾಕಿದ್ದಾರೆ
ಹುಬ್ಬಳ್ಳಿ: ಕಾಂಗ್ರೆಸ್ಸಿಗರು ಬಿಜೆಪಿಗೆ ಬರುವ ಬಗ್ಗೆ ನನ್ನ ಬಳಿ ಯಾಕೆ ಕೇಳುತ್ತೀರಿ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಳಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ಮಾಧ್ಯಮಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಕುಂದಗೋಳ ತಾಲೂಕಿನ ಬುಡರಸಿಂಗಿಯಲ್ಲಿ ಪ್ರಚಾರದ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 20 ಜನ ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪನವರು ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ಸಿನ ಯಾವ ಶಾಸಕರೂ ನನ್ನ ಸಂಪರ್ಕದಲ್ಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರ ಸಂಪರ್ಕದಲ್ಲಿರಬಹುದು. ಕಾಂಗ್ರೆಸ್‍ನಲ್ಲಿರುವ ಅಸಮಾಧಾನ ಮೇ 23ರ ಬಳಿಕ ಸ್ಫೋಟವಾಗಲಿದೆ ಎಂದು ಹೇಳಿದರು.
Advertisement
Advertisement
ಕಾಂಗ್ರೆಸ್‍ನಲ್ಲಿ ಅನೇಕರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಸಿಎಂ ಹುದ್ದೆಗೆ ಈಗಾಗಲೇ ಟವಲ್ ಹಾಕಿದ್ದಾರೆ ಎಂದು ವ್ಯಂಗ್ಯವಾಡಿರು.
Advertisement
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಹೀಗಾಗಿ ಯಾವುದೇ ಭೇದ ಭಾವವಿಲ್ಲ. ಪಕ್ಷದ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧ ಎಂದು ಹೇಳಿದರು.
Advertisement
ಮುಖ್ಯಮಂತ್ರಿ ಗಳು Art of running ಅಲ್ಲಿ ಚಾಂಪಿಯನ್.
1.ಟೆಂಪಲ್ run
2.ರೆಸಾರ್ಟ್ run
3.ಪತ್ರಕರ್ತರನ್ನು ನೋಡಿದ್ರೆ run @BJP4Karnataka @BJP4Karnataka https://t.co/f7tkDQat0G
— K S Eshwarappa (@ikseshwarappa) May 10, 2019