ನವದೆಹಲಿ: ಕಾಂಗ್ರೆಸ್ ತಮ್ಮ ಅಧಿಕಾರವಧಿಯಲ್ಲಿನ ಸ್ಥಿತಿಯನ್ನು ಮರೆತು ಈಗಿನ ತೈಲ ಬೆಲೆ ಏರಿಕೆಗೆ ಕೇಂದ್ರಸರ್ಕಾರವೇ ಕಾರಣ ಎಂದು ಆರೋಪಿಸುತ್ತಿದೆ ಎಂದು ಬಿಜೆಪಿ ಮುಖಂಡ ಜೆ ಮಿಶ್ರಾ ಆರೋಪಿಸಿದ್ದಾರೆ.
2004 ರಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 29 ರೂ. ಇತ್ತು. 2014 ರಲ್ಲಿ 74 ರೂ ಆಗಿತ್ತು. ಒಂದು ಕೆಜಿ ತುಪ್ಪಕ್ಕೆ 2004 ರಲ್ಲಿ 130 ರೂ ಇತ್ತು. 2014 ರಲ್ಲಿ 380 ರೂ ಆಗಿತ್ತು. ಮೊಬೈಲ್ ಡೆಟಾ ದರ 1 ಜಿಬಿ ಗೆ 300 ರೂ ಇತ್ತು. ಈಗ 300 ರೂ. ಗೆ 100 ಜಿಬಿ ಸಿಗುತ್ತೆ. ಕಾಂಗ್ರೆಸ್ ಇದ್ದಾಗ ಕಾಲ್ ದರಗಳು 1 ನಿಮಿಷಕ್ಕೆ 8 ರೂ. ಇತ್ತು. ಈಗ ಡೆಟಾ ಪ್ಯಾಕ್ ಜೊತೆ ಕಾಲ್ ಉಚಿತವಾಗಿದೆ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
Advertisement
ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 25 ರೂ. ಕಡಿಮೆ ಮಾಡಬಹುದು. ಆದರೆ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಬುಧವಾರ ಆರೋಪಿಸಿದ್ದರು.
Advertisement
ಈ ಸಂಬಂಧ ನಿರಂತರ ಟ್ವಿಟ್ ಮಾಡಿರುವ ಅವರು, ಪೆಟ್ರೋಲ್ ದರದಲ್ಲಿ ಕೇಂದ್ರ ಸರ್ಕಾರವು ಹೆಚ್ಚು ಹಣ ಉಳಿತಾಯ ಮಾಡುತ್ತಿದೆ. ಕಚ್ಚಾ ತೈಲದಲ್ಲಿ ಕೇಂದ್ರ ಸರ್ಕಾರವು ಪ್ರತಿ ಲೀಟರ್ ಗೆ 15 ರೂ. ಉಳಿತಾಯ ಮಾಡುತ್ತಿದೆ. ಅಲ್ಲದೇ 10 ರೂ. ಅಬಕಾರಿ ಸುಂಕ ಹಾಕುತ್ತಿದೆ ಎಂದು ಅವರು ಹೇಳಿದ್ದರು.
Advertisement
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರಿಂದ ಮೇ14ರವರೆಗೆ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಆಗಿರಲಿಲ್ಲ. ಈಗ ಪ್ರತಿ ದಿನ ಹೆಚ್ಚಾಗುತ್ತಿದ್ದು, ಗುರುವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 78.43 ರೂ ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 69.74 ರೂ ಇದೆ.
Advertisement
Congress talks about fuel price to criticise govt. Don't they remember their past? Petrol was Rs29/l in '04&Rs74/l in '14, Ghee Rs130/kg in '04&Rs380/kg in '14, data charges Rs300 for 1 GB,100 GB at Rs300 now, call rates Rs 8/min & free with data pack today: J Mishra, BJP (23.05) pic.twitter.com/BqSSuvSoko
— ANI (@ANI) May 24, 2018