ವಿಜಯಪುರ: ಲಾರಿ (Lorry) ಹಾಗೂ ಕಾರ್ (Car) ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬಿಜೆಪಿ (BJP) ಮುಖಂಡರೊಬ್ಬರು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬೆನ್ನಿಹಳ್ಳದ ಬಳಿ ನಡೆದಿದೆ.
ಲಾರಿ ಹಾಗೂ ಕಾರ್ ನಡುವೆ ಮೂಖಾಮುಖಿ ಡಿಕ್ಕಿಯಾದ ಪರಿಣಾಮ ಕಾರ್‌ನಲ್ಲಿದ್ದ ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ್ (Appugowda Patil Managuli) ಮನಗೂಳಿಗೆ ಗಾಯಗಳಾಗಿವೆ. ಗಾಯಾಳು ಅಪ್ಪುಗೌಡರನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವ್ಯರ್ಥವಾಯ್ತು 10 ಕೋಟಿ ಕೋವಿಶೀಲ್ಡ್ ಡೋಸ್
ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಕೊಲ್ಹಾರ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಾನು ಬದುಕಲು ಅರ್ಹನಲ್ಲ- ಮಂಡ್ಯದ ರೇಪ್ ಆರೋಪಿಗೆ ಈಗ ಪಶ್ಚಾತ್ತಾಪ