ಚಿಕ್ಕೋಡಿ: ತನ್ನ ಜಮೀನಿನಲ್ಲಿ ಕಾಲುವೆ ನೀರು ಬರುತ್ತಿದೆ ಎನ್ನುವ ಕಾರಣಕ್ಕೆ ರಸ್ತೆಯನ್ನು ಅಗೆದು ಎರಡು ಗ್ರಾಮಗಳಿಗೆ ಸಂಚಾರ ಬಂದ್ ಮಾಡಿದ್ದ ಬಿಜೆಪಿ ಮುಖಂಡನೋರ್ವನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಶಿ – ಯಬರಟ್ಟಿ ರಸ್ತೆಯ ಪಕ್ಕದ ತನ್ನ ಗದ್ದೆಯಲ್ಲಿ ನೀರು ನಿಲ್ಲುತ್ತೆ ಎನ್ನುವ ಕಾರಣಕ್ಕೆ ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತಮ್ಮಣ್ಣ ತೇಲಿ ಎಂಬಾತ ಸರ್ಕಾರದ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ರಸ್ತೆಯನ್ನೆ ಅಗೆದು ಜನರಿಗೆ ತೊಂದರೆ ನೀಡುತ್ತಿದ್ದಾನೆ. ಇದರಿಂದ ರೋಸಿ ಹೋಗಿರುವ ಸಾರ್ವಜನಿಕರು ಬಿಜೆಪಿ ಮುಖಂಡನ ವಿರುದ್ಧ ಹರಿಹಾಯ್ದಿದ್ದಾರೆ.
Advertisement
Advertisement
ಅಥಣಿ ತಾಲೂಕಿನ ಶೇಗುಣಶಿ – ಯಬರಟ್ಟಿ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ನೀರು ಪಾಸ್ ಆಗಲೆಂದು ಕೆಳಗೆ ಪೈಪ್ ಲೈನ್ ಅವಳವಡಿಸಿ ಮೇಲೆ ರಸ್ತೆ ಮಾಡಲಾಗಿತ್ತು. ಆದರೆ ಯಾರೋ ಕಿಡಿಗೇಡಿಗಳು ಪೈಪ್ ಒಳಗೆ ಕಲ್ಲು ಹಾಕಿದ್ದರಿಂದ ಪೈಪ್ ಲೈನ್ ಬ್ಲಾಕ್ ಆಗಿದ್ದಕ್ಕೆ ಕಳೆದ ಒಂದು ವಾರದ ಹಿಂದೆ ರಸ್ತೆ ಅಗೆದು ತಮ್ಮಣ್ಣ ದರ್ಪ ಪ್ರದರ್ಶಿಸಿದ್ದಾನೆ. ಕಳೆದ ಒಂದು ವಾರದಿಂದ ಸಂಪರ್ಕ ಸಾಧ್ಯವಾಗದೆ ಜನರ ಪರದಾಡುತ್ತಿದ್ದು, ಮಾಜಿ ಜಿಪಂ ಸದಸ್ಯನ ಆಟಾಟೋಪಕ್ಕೆ ಜನ ಬೇಸತ್ತು ಹೋಗಿದ್ದಾರೆ. ಇದನ್ನೂ ಓದಿ: ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ. 2 ಮೀಸಲಾತಿ: ಬೊಮ್ಮಾಯಿ
Advertisement
Advertisement
ಒಟ್ಟಿನಲ್ಲಿ ಮಾಜಿ ಜಿಪಂ ಸದಸ್ಯನ ರಸ್ತೆ ಅಗೆದು ಒಂದು ವಾರ ಕಳೆದರೂ ಇದುವರೆಗೂ ಯಾವುದೇ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಬಿಜೆಪಿ ಮುಖಂಡ ಎಂಬ ಕಾರಣಕ್ಕೆ ಮುಖ್ಯ ರಸ್ತೆಯನ್ನು ಅಗೆದು ಒಂದು ವಾರ ಕಳೆದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಇನ್ನಾದರೂ ನಿದ್ರಾವಸ್ಥೆಯಲ್ಲಿರುವ ಅಧಿಕಾರಿಗಳು ಎಚ್ಚೆತ್ತು ಸಾರ್ವಜನಿಕರಿಗೆ ಅನಕೂಲ ಕಲ್ಪಿಸುವದರ ಜೊತೆಗೆ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗಣೇಶ ಹಬ್ಬ: KSRTC ಬಸ್‌ಗಳಿಗೆ ಫುಲ್ ಡಿಮ್ಯಾಂಡ್ – ಮೂರೇ ದಿನಕ್ಕೆ 22 ಸಾವಿರ ಸೀಟ್ ಬುಕ್ಕಿಂಗ್