ಮುಂಬೈ: ಸಂಸದ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿರುವ ಮುಂಬೈ ಪೊಲೀಸರ ಹಾಗೂ ಸರ್ಕಾರದ ನಿರ್ಧಾರ ಮೂರ್ಖತನ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮಾನ್ ಚಾಲೀಸಾವನ್ನು ಪಠಿಸುವುದಕ್ಕಾಗಿ ಯಾರನ್ನಾದರೂ ಬಂಧಿಸುವುದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಇದು ಸರ್ಕಾರದ ಮೂರ್ಖತನವಾಗಿದೆ ಎಂದು ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
ಮುಂಬೈನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿದ್ದರಿಂದ ಉಂಟಾದ ಗದ್ದಲದ ನಡುವೆ ರಾಣಾ ದಂಪತಿಯನ್ನು ಏ.23ರಂದು ಬಂಧಿಸಲಾಗಿತ್ತು. ಇವರು ಇಂದು ಜಾಮೀನನ್ನು ಪಡೆದರು. ಇದನ್ನೂ ಓದಿ: 10 ದಿನಗಳ ಬಂಧನದ ಬಳಿಕ ರಾಣಾ ದಂಪತಿಗೆ ಜಾಮೀನು
Advertisement
Advertisement
ರಾಣಾ ದಂಪತಿ ಸರ್ಕಾರಕ್ಕೆ ಸವಾಲು ಹಾಕಿದ ಹಾಗೂ ಉದ್ಧವ್ ಠಾಕ್ರೆ ವಿರುದ್ಧ ಟೀಕೆ ಮಾಡಿದ್ದರಿಂದ ಅವರ ವಿರುದ್ಧ ಐಪಿಸಿ ಸೆಕ್ಷನ್ 124(ಎ)(ದೇಶದ್ರೋಹ) ಅಡಿಯಲ್ಲಿ ಆರೋಪ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಇದೀಗ ಬಂಧನದ 10 ದಿನಗಳ ಬಳಿಕ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಶಿವಸೇನೆಗೆ ಹಿಂದುತ್ವವನ್ನು ಕಲಿಸುವ ಅಗತ್ಯವಿಲ್ಲ: ಸಂಜಯ್ ರಾವತ್