ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ?: ಬಿಜೆಪಿ ವಾಗ್ದಾಳಿ

Public TV
1 Min Read
SIDDARAMAIAH 1

ಬೆಂಗಳೂರು: ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ ಎಂದು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವಿಟ್ಟರ್‍ ನಲ್ಲಿ ಸರಣಿ ಟ್ವೀಟ್ ದಾಳಿ ಮುಂದುವರೆಸಿ, ವಾಗ್ದಾಳಿ ನಡೆಸಿದೆ.  ಇದನ್ನೂ ಓದಿ:  ಬಿಟ್‌ಕಾಯಿನ್‌ ಹಗರಣದಲ್ಲಿ ಸಿಎಂ ತಲೆದಂಡ ಪಡೆಯಲಿದೆ: ಪ್ರಿಯಾಂಕ್ ಖರ್ಗೆ

bjp congress 1

ಟ್ವೀಟ್‍ನಲ್ಲಿ ಏನಿದೆ?
ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ? ತಲೆಗೆ ಟೋಪಿ ಹಾಕಿದಾಗ ಅಲ್ಪಸಂಖ್ಯಾತ. ಕಂಬಳಿ ಹೊದ್ದುಕೊಂಡರೆ ಒಂದು ಜಾತಿ. ಚುನಾವಣೆ ಬಂದಾಗ ನಾನೂ ಹಿಂದೂ. ಮುಖ್ಯಮಂತ್ರಿಯಾಗುವ ಆಸೆ ಬಂದಾಗ ದಲಿತ. ಅಧಿಕಾರಕ್ಕಾಗಿ ಎಷ್ಟೊಂದು ವೇಷ, ನಾಟಕ. ಇದನ್ನೂ ಓದಿ: ಬಿಟ್ ಕಾಯಿನ್ ಎಂದರೇನು? ನಮ್ಮಂತವರಿಗೆ ಸಿದ್ದರಾಮಯ್ಯನವರು ವಿವರಿಸಲಿ: ಪ್ರತಾಪ್ ಸಿಂಹ

ಸಿದ್ದರಾಮಯ್ಯ ಜೆಡಿಎಸ್ ಕಟ್ಟಿದರಾ? ಇಲ್ಲ, ಪಕ್ಷಾಂತರ ಮಾಡಿದರು. ಸಿದ್ದರಾಮಯ್ಯ ಕಾಂಗ್ರೆಸ್ ಕಟ್ಟಿದರಾ? ಇಲ್ಲ, ದಲಿತ ನಾಯಕರನ್ನು ತುಳಿದರು. ಸಿದ್ದರಾಮಯ್ಯ ರಾಜ್ಯ ಕಟ್ಟಿದರಾ? ಇಲ್ಲ, ಧರ್ಮ ವಿಭಜನೆ ಮಾಡಿದರು ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಕಿಡಿಕಾರಿದೆ. ಇದನ್ನೂ ಓದಿ: ಬೊಮ್ಮಾಯಿ ಮಾತಾಡೋದು ನೋಡಿದ್ರೆ ಅನುಮಾನ ಬರ್ತಿದೆ: ಸಿದ್ದರಾಮಯ್ಯ 

Share This Article
Leave a Comment

Leave a Reply

Your email address will not be published. Required fields are marked *