ಮಂಡ್ಯ: ಲೋಕಸಭಾ ಚುನಾವಣೆ (Loksabha Election) ಸನಿಹದಲ್ಲಿ ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಶುರುವಾಗಿದೆ. ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ವಿವಾದ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ಮಾಡಿದೆ. ಅದ್ರಲ್ಲೂ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟದ ತೀವ್ರತೆ ಹೆಚ್ಚಿತ್ತು.
Advertisement
ಸಿಟಿ ರವಿ (CT Ravi) ನೇತೃತ್ವದಲ್ಲಿ ಕೆರಗೋಡಿನಿಂದ ಮಂಡ್ಯವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಸಾವಿರಾರು ಮಂದಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ಹನುಮ ಧ್ವಜ ಹಿಡಿದು ಹಿಂದೂ ಪರ ಘೋಷಣೆಗಳನ್ನು ಮಾಡಿದ್ರು. ಕಂಡ ಕಂಡ ಕಟ್ಟಡಗಳ ಮೇಲೆಲ್ಲಾ ಹನುಮ ಧ್ವಜ ಹಾರಿಸಿದ್ರು. ಮಾರ್ಗಮಧ್ಯೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಕಾಂಗ್ರೆಸ್ ಪಕ್ಷದ ಫ್ಲೆಕ್ಸ್, ಬ್ಯಾನರ್ ಗಳು ಹರಿದೆಸೆದು, ಕಲ್ಲು-ಚಪ್ಪಲಿ ತೂರಿ ಆಕ್ರೋಶ ಹೊರಹಾಕಿದ್ರು.
Advertisement
Advertisement
ಪೊಲೀಸ್ ಬಲದ ಮೂಲಕ ಈ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೀತು. ಮಂಡ್ಯದಲ್ಲಿ ಫ್ಲೆಕ್ಸ್ ಕಿತ್ತೆಸೆಯುವ ಸಂದರ್ಭದಲ್ಲಿ ಪೊಲೀಸರು ಲಾಠಿ ಬೀಸಿದ್ರು. ಪೊಲೀಸ್ ಬಲಪ್ರಯೋಗ ಮಾಡ್ತಿದ್ದಂತೆ ಆಕ್ರೋಶಿತರು ಚಲ್ಲಾಪಿಲ್ಲಿಯಾಗಿ ಓಡಿದ್ರು. ಬಿಜೆಪಿ ಕಾರ್ಯಕರ್ತರೊಬ್ಬರ ಕಣ್ಣಿಗೆ ಗಾಯವಾಯ್ತು. ಇಷ್ಟೆಲ್ಲಾ ಆದ್ಮೇಲೆ ಕೇಸರಿಧಾರಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಎಂಟ್ರಿ ಕೊಟ್ರು. ಲಾಠಿಚಾರ್ಜ್ ಖಂಡಿಸಿ ರಸ್ತೆ ಮೇಲೆ ಧರಣಿ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್ ವಿರುದ್ಧ ಫತ್ವಾ
Advertisement
ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ: ಕೆರಗೋಡು ಧ್ವಜ (Keragodu Hanuman Flag) ಪ್ರಕರಣ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಮುಗಿಬಿದ್ದಿವೆ. ತುಷ್ಟೀಕರಣದ ಆಧುನಿಕ ಪಿತಾಮಹ ಸಿದ್ದರಾಮಯ್ಯ ಎಂದು ಬಿಜೆಪಿ ಜರೆದಿದೆ. ಒಂದು ಸಮುದಾಯದ ಓಲೈಕೆಗಾಗಿ ಸಂವಿಧಾನವನ್ನೇ ಬುಡಮೇಲು ಮಾಡುವ ಸೊಕ್ಕನ್ನು ಪ್ರದರ್ಶಿಸಿ ನಾನೇ ತುಘಲಕ್ ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ ಎಂದು ಕಿಡಿಕಾರಿದೆ. ಮತಾಂಧ ಜಿಹಾದಿಗಳು ಬಹಿರಂಗವಾಗಿ ತಲ್ವಾರ್ ಹಿಡಿಯಬಹುದು, ಮತಾಂಧರ ಕಟೌಟ್ ಹಾಕಬಹುದು.ಆದರೆ ಹಿಂದೂಗಳು ಮಾತ್ರ ಏನೂ ಮಾಡುವಂತಿಲ್ಲ. ಅದಕ್ಕೆ ಕಾರಣ ರಾಜ್ಯದಲ್ಲಿ ಇರುವುದು ಐಸಿಸ್ ಮಾದರಿಯ ಸರ್ವಾಧಿಕಾರದ ಅಡಳಿತ ಎಂದು ಟ್ವೀಟ್ ಮೂಲಕ ಕಿಡಿಕಾರಿದೆ. ಬಿಜೆಪಿಯ ಅಶೋಕ್, ಅಶ್ವಥ್‍ನಾರಾಯಣ್, ಸಿಟಿ ರವಿ ಸೇರಿ ಹಲವರು ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವ್ರಂತೂ ಧ್ವಜಸ್ತಂಭದ ವಿಚಾರವಾಗಿ ಸುಳ್ಳು ದಾಖಲೆ ಸೃಷ್ಟಿಯಾಗಿದೆ. ಲಾಠಿ ಚಾರ್ಜ್ ಮಾಡಿರೋದು ರಾಕ್ಷಸಿ ಪ್ರವೃತ್ತಿ ಎಂದು ಕಿಡಿಕಾರಿದ್ದಾರೆ. ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ ಕೊಡಲಾಗಿದೆ.
ಕಾಂಗ್ರೆಸ್ ಕೌಂಟರ್: ಬಿಜೆಪಿ-ಜೆಡಿಎಸ್ (BJP_ JDS) ಜಂಟಿ ಹೋರಾಟಕ್ಕೆ ಕಾಂಗ್ರೆಸ್ ಡೋಂಟ್ ಕೇರ್ ಎಂದಿದೆ. ಬಿಜೆಪಿಯ ಲೋಕಸಭೆ ಚುನಾವಣೆ ತಾಲೀಮು ಮಂಡ್ಯದಲ್ಲಿ ಶುರುವಾಗಿದೆ. ಇದಕ್ಕೆ ಸೋಕಾಲ್ಡ್ ಜಾತ್ಯಾತೀತ ಜನತಾದಳ ಪೂರ್ಣ ಸಹಕಾರ ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಬ್ರಿಟಿಷರನ್ನೇ ಎದುರಿಸಿದ ಕಾಂಗ್ರೆಸ್, ಈ ಬಿಜೆಪಿ ಮತ್ತು ಆರ್ ಎಸ್‍ಎಸ್ ಎಂಬ ದೇಶದ್ರೋಹಿಗಳಿಗೆ ಹೆದರುವುದುಂಟೆ ಎಂದು ಕೆಣಕಿದೆ. ಬ್ರಿಟಿಷರ ಗುಂಡಿಗೆ ಎದೆಗೊಟ್ಟು ತಿರಂಗಾ ಹಾರಿಸಿದ ಪರಂಪರೆ ನಮ್ಮದು. ಈ ಸಂಘಿ, ಕ್ರಿಮಿಕೀಟಗಳು ನಮ್ಮನ್ನು ತಡೆಯಲು ಸಾಧ್ಯವೇ. ನಾವು ದೇಶದ ಘನತೆ, ಗೌರವವನ್ನು ಎತ್ತಿ ಹಿಡಿದಿದ್ದೇವೆ. ದೇಶದ್ರೋಹಿ ಬಿಜೆಪಿಗೆ ದಮ್ಮು ತಾಕತ್ತಿದ್ದರೆ ಈ ರಾಷ್ಟ್ರ ಧ್ವಜವನ್ನು ಕಿತ್ತು ಹಾಕುವ ಧೈರ್ಯ ತೋರಲಿ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಸವಾಲ್ ಹಾಕಿದೆ.
ಎಲೆಕ್ಷನ್‍ಗಾಗಿ ಬಿಜೆಪಿ ಹೀಗೆಲ್ಲಾ ಕುತಂತ್ರ ಮಾಡ್ತಿದೆ. ಇದಕ್ಕೆ ಕುಮಾರಸ್ವಾಮಿ ತುಪ್ಪ ಸುರಿಯುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ. ಬಿಜೆಪಿಯವರು ಅಶಾಂತಿ ಸೃಷ್ಟಿಸಲು ಹೀಗೆ ಮಾಡ್ತಿದ್ದಾರೆ ಎಂದು ಡಿಸಿಎಂ ಕಿಡಿಕಾರಿದ್ದಾರೆ. ಸ್ಥಳೀಯ ಶಾಸಕ ಗಣಿಗ ರವಿ ಕೂಡ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆರ್‍ಎಸ್‍ಎಸ್‍ನವರು ಹೊರಗಿನಿಂದ ಬಂದು ಗಲಾಟೆ ಮಾಡಿದ್ದಾರೆ. ಈ ಗಲಾಟೆ ಜೆಡಿಎಸ್-ಆರ್ ಎಸ್‍ಎಸ್ ಕ್ರಿಮಿನಲ್ ಮೈಂಡ್‍ಗಳಿವೆ.. ನಮ್ಮ ಇಂಟೆಲಿಜೆನ್ಸ್ ಫೇಲ್ ಆಗಿದೆ.. ಎಂದು ಗಣಿಗ ರವಿ ಆಪಾದಿಸಿದ್ದಾರೆ. ನಾವು 1 ಲಕ್ಷ ಧ್ವಜ ಹಾರಿಸ್ತೇವೆ.. ಅದ್ಯಾರು ತಡೀತಾರೋ ನೋಡೋಣ ಎಂದು ಸವಾಲ್ ಹಾಕಿದ್ದಾರೆ.