ತುಮಕೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಅಭ್ಯರ್ಥಿಯಾಗಿ ಹೆಚ್.ಡಿ.ದೇವೇಗೌಡರು (H.D.Deve Gowda) ತುಮಕೂರು (Tumakuru) ಕ್ಷೇತ್ರದಿಂದ ಸ್ಪರ್ಧಿಸಿದರೆ ಜಿಲ್ಲೆಯ ಜನರು ವೋಟು ಹಾಕುವುದಿಲ್ಲ ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು (G.S.Basavaraj) ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಿಂದ ದೇವೇಗೌಡರ ಸ್ಪರ್ಧೆ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದರು. ನಮ್ಮ ಪಕ್ಷದವರು ಮೈತ್ರಿ ಮಾಡಿಕೊಂಡು ಜಿಲ್ಲೆಯಿಂದ ದೇವೇಗೌಡರನ್ನು ನಿಲ್ಲಿಸಲು ಹೊರಟಿದ್ದಾರೆ. ಹೇಮಾವತಿ ನೀರಿನ ವಿಚಾರದಲ್ಲಿ ಜಿಲ್ಲೆಗೆ ಗೌಡರು ಕಂಡರಿಯದಷ್ಟು ಮೋಸ ಮಾಡಿದ್ದಾರೆ. ಯಾರಿಗಾದರೂ ವೋಟ್ ಹಾಕಲಿ. ಗೌಡರಿಗೆ ವೋಟ್ ಹಾಕಬಾರದು. ಅವರಿಗೆ ವೋಟ್ ಹಾಕಿದರೆ ಜಿಲ್ಲೆಯ ಜನತೆ ಪಾಪ ಮಾಡಿದಂತಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: BJPಯ 25 ಮಂದಿ ಸಂಸದರು ದಂಡಪಿಂಡಗಳು: ಬಿ.ವಿ.ಶ್ರೀನಿವಾಸ್
Advertisement
Advertisement
ಲೋಕಸಭೆಗೆ ಜೆಡಿಎಸ್ನವರು ಐದು ಕ್ಷೇತ್ರ ಕೇಳಿದ್ದು, ತುಮಕೂರನ್ನು ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ರಕ್ತ ಕೊಟ್ಟರೂ ಜಿಲ್ಲೆಗೆ ಹೇಮಾವತಿ ನೀರು ಕೊಡಲ್ಲ ಎಂದು ಹೇಳಿದ್ದ ದೇವೇಗೌಡರನ್ನು ಇಲ್ಲಿನ ಜನರು ಒಮ್ಮೆ ಸೋಲಿಸಿದ್ದಾರೆ. ಅವರ ಸಂಬಂಧಿಗಳೂ ವೋಟ್ ಹಾಕಲ್ಲ. ಒಕ್ಕಲಿಗ ಸಮುದಾಯದ ಒಬ್ಬರೂ ಮತ ಹಾಕಲ್ಲ ಎಂದರು. ಇದನ್ನೂ ಓದಿ: ರಾಜ್ಯದ ಮೊದಲ ಹೆಲ್ತ್ ಎಟಿಎಂ ಕಲಬುರಗಿಯಲ್ಲಿ ಆರಂಭ – ಕ್ಷಣಾರ್ಧದಲ್ಲಿ ಸಿಗುತ್ತೆ ಬಿಪಿ, ಶುಗರ್, ಮಲೇರಿಯಾ ರಿಪೋರ್ಟ್
Advertisement
Advertisement
ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ವಿ.ಸೋಮಣ್ಣ ಅವರನ್ನು ನಾನು ಕರೆದಿಲ್ಲ. ಆದರೆ ಅವರ ಭವಿಷ್ಯಕ್ಕೆ ಅಡ್ಡಿಯಾಗುವುದಿಲ್ಲ. ಎಲ್ಲಿ ನಿಂತರೂ ಬೆಂಬಲಿಸುತ್ತೇನೆ ಎಂದು ಹೇಳಿದ್ದೇನೆ. ಕಳೆದ ಚುನಾವಣೆಯಲ್ಲಿ ನಾನು ಗೆಲ್ಲಲು ಸೋಮಣ್ಣ ಕಾರಣ. ಚುನಾವಣೆ ಖರ್ಚಿಗೆ ಅವರೇ ದುಡ್ಡು ಕೊಟ್ಟಿದ್ದು ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ
Web Stories