ಬೆಂಗಳೂರು: ತನ್ನ ವಿರುದ್ಧ ಧ್ವನಿ ಎತ್ತುವವರ ಮೇಲೆ ಬಿಜೆಪಿ ಐಟಿ ದಾಳಿ ಎಂಬ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಅಧಿಕಾರಿಗಳು ನಡೆಸಿರುವ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ. ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇರುವುದು ಜಗಜ್ಜಾಹೀರಾಗಿದೆ ಎಂದಿದ್ದಾರೆ.
Advertisement
ರಾಜಕೀಯ ದ್ವೇಷ ಸಾಧನೆಗಾಗಿ ಕೇಂದ್ರ ಐಟಿ ದಾಳಿ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ. ಇದು ಅಧಿಕಾರ ದುರುಪಯೋಗವಷ್ಟೇ ಅಲ್ಲ, ಪ್ರಜಾಪ್ರಭುತ್ವದ ಕೊಲೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
ತನ್ನ ರಾಜಕೀಯ ಷಡ್ಯಂತ್ರಕ್ಕೆ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳುವುದು ಕೇಂದ್ರ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಇಂಥಹ ಬೆದರಿಕೆ ತಂತ್ರಗಳಿಗೆ ಬಗ್ಗುವುದೂ ಇಲ್ಲ. ದಾಳಿ ಸಂದರ್ಭದಲ್ಲಿ ನಿಯಮಾನುಸಾರ ಐಟಿ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವು ಪಡೆದುಕೊಳ್ಳಬೇಕು. ಆದರೆ ನಿಯಮ ಉಲ್ಲಂಘಿಸಿ ಸಿಆರ್‍ಪಿಎಫ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ ಅಂತ ಕಿಡಿ ಕಾರಿದ್ದಾರೆ.
Advertisement
ಐಟಿ ಅಧಿಕಾರಿಗಳು ನಿಯಮಾನುಸಾರ ದಾಳಿ ಮಾಡಿ ತನಿಖೆ ನಡೆಸಲಿ. ಇದರಿಂದ ಜನತೆಗೆ ಸತ್ಯ ತಿಳಿಯಲಿ. ಆದರೆ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿಯ ದಾಳಿ ನಡೆಸಿದರೆ ಮುಂದೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಅಂತ ಸಿಎಂ ಹೇಳಿದ್ದಾರೆ.
Advertisement
ಸಚಿವ ಡಿ.ಕೆ.ಶಿವಕುಮಾರ್ ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿ ರಾಜಕೀಯ ಪ್ರೇರಿತ. ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ.#ದ್ವೇಷದ ರಾಜಕಾರಣ
— CM of Karnataka (@CMofKarnataka) August 2, 2017
ರಾಜಕೀಯ ಷಡ್ಯಂತ್ರಕ್ಕೆ ಆದಾಯ ತೆರಿಗೆ ಇಲಾಖೆಯ ದುರ್ಬಳಕೆ. ಇಂತಹ ಬೆದರಿಕೆ ತಂತ್ರಗಳಿಗೆ ಕಾಂಗ್ರೆಸ್ ಬಗ್ಗುವುದಿಲ್ಲ.#ದ್ವೇಷದರಾಜಕಾರಣ
— CM of Karnataka (@CMofKarnataka) August 2, 2017
ಐಟಿ ದಾಳಿ ಸಂದರ್ಭದಲ್ಲಿ ನಿಯಮದಂತೆ ಸ್ಥಳೀಯ ಪೊಲೀಸ್ ನೆರವು ಪಡೆಯಬೇಕು. ಆದರೆ ನಿಯಮ ಉಲ್ಲಂಘಿಸಿ ಸಿಆರ್ ಪಿಎಫ್ ಸಿಬ್ಬಂದಿಯ ದುರ್ಬಳಕೆ. ಇದು ಖಂಡನೀಯ.#ದ್ವೇಷದರಾಜಕಾರಣ
— CM of Karnataka (@CMofKarnataka) August 2, 2017
ರಾಜಕೀಯ ದ್ವೇಷ ಸಾಧನೆಗಾಗಿ ಕೇಂದ್ರ ಐಟಿ ದಾಳಿ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ. ಇದು ಅಧಿಕಾರ ದುರುಪಯೋಗವಷ್ಟೇ ಅಲ್ಲ, ಪ್ರಜಾಪ್ರಭುತ್ವದ ಕೊಲೆ.#ದ್ವೇಷದರಾಜಕಾರಣ
— CM of Karnataka (@CMofKarnataka) August 2, 2017
ಐಟಿ ಇಲಾಖೆ ನಿಯಮಾನುಸಾರ ತನಿಖೆ ನಡೆಸಲಿ. ಇದರಿಂದ ಜನತೆಗೆ ಸತ್ಯ ತಿಳಿಯುತ್ತದೆ. ರಾಜಕೀಯ ದ್ವೇಷದಿಂದ ದಾಳಿ ನಡೆಸಿದರೆ ಜನತೆ ಪಾಠ ಕಲಿಸುತ್ತಾರೆ.#ದ್ವೇಷದರಾಜಕಾರಣ
— CM of Karnataka (@CMofKarnataka) August 2, 2017
ರಾಜ್ಯಸರ್ಕಾರವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ, ಐಟಿ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ಇದು ಬಿಜೆಪಿಯ ಹತಾಶ ಮನಸ್ಥಿತಿ.#ದ್ವೇಷದರಾಜಕಾರಣ
— CM of Karnataka (@CMofKarnataka) August 2, 2017