ಬಿಜೆಪಿ ಈ ದೇಶದ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ: ಎ.ನಾರಾಯಣಸ್ವಾಮಿ

Public TV
3 Min Read
Narayanaswamy1

ಆನೇಕಲ್: ಬಿಜೆಪಿ ಈ ದೇಶದ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ.

ಭಾನುವಾರ ಅತ್ತಿಬೆಲೆ ಮಂಡಲದ ವತಿಯಿಂದ ಆಯೋಜಿಸಿದ್ದ ಜನಾಶಿರ್ವಾದ ಯಾತ್ರೆಯ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಈ ದೇಶದಲ್ಲಿ ಯಾವ ರೀತಿ ಆಡಳಿತ ನಡೆಸಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. 60 ವರ್ಷ ಅವರ ಆಡಳಿತ ವೈಖರಿಯಿಂದಾಗಿ ಹಾಗೂ ಕೊರೊನಾ ಸಂಕಷ್ಟದಿಂದ ಬೆಲೆ ಏರಿಕೆ ಆಗಿದೆ ಹೊರತು ಬಿಜೆಪಿಯಾಗಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಗಲಿ ಜನರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಎಂದು ಕೂಡ ನಡೆದುಕೊಳ್ಳುವುದಿಲ್ಲ. ಬಿಜೆಪಿ ಈ ದೇಶದ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ ಎಂದರು.

Narayanaswamy

ಅಧಿಕಾರ ಸಿಕ್ಕಾಗ ನಾವು ಜನಪರ ಯೋಜನೆಗಳನ್ನು ಜಾರಿಗೆ ತರಬೇಕು. ಜನ ನಮಗೆ ಅಧಿಕಾರ ನೀಡುವುದು ಸ್ಥಳೀಯವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಎನ್ನುವ ಕಾರಣಕ್ಕೆ ಆದರೆ ಕೆಲವರು ಅಧಿಕಾರ ಸಿಕ್ಕಾಗ ಅದರ ಅಮಲಿನಲ್ಲಿ ಇರುತ್ತಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನು ನಾನು ಎಂದು ಕೂಡ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ಯಾದಗಿರಿಯಲ್ಲಿ ವರುಣಾರ್ಭಟ – ವೀರಾಂಜನೇಯ, ಕಂಗಳೇಶ್ವರ ದೇವಾಲಯ ಜಲಾವೃತ್ತ

Narayanaswamy1 1

ನನ್ನ ಸೋಲಿಗೆ ಕಾರಣರಾದವರನ್ನು ನಾನು ಕ್ಷಮಿಸುತ್ತೇನೆ!

ಚುನಾವಣೆ ಸಂದರ್ಭದಲ್ಲಿ ಯಾರು ಬಿಜೆಪಿ ಪಕ್ಷದಲ್ಲೇ ಇದ್ದು, ಬೇರೆ ಪಕ್ಷದವರ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಾರೋ ಅವರನ್ನು ನಾನು ಎಂದು ಕೂಡ ಸಹಿಸುವುದಿಲ್ಲ. ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರನ್ನು ನಾನು ಕ್ಷಮಿಸುತ್ತೇನೆ. ಆದರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸೋಲಿಗೆ ಯಾರು ಕೆಲಸ ಮಾಡುತ್ತಾರೆ ಅವರನ್ನು ಯಾರೂ ಕೂಡ ಕ್ಷಮಿಸುವ ಮಾತೇ ಇಲ್ಲ ಎಂದು ಹೇಳುವ ಮೂಲಕ ವೇದಿಕೆಯಲ್ಲಿ ಹಾಜರಿದ್ದ ಕೆಲವು ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಕಿವಿಮಾತು ಹೇಳಿದರು.

BJP CONGRESS FLAG

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಮಾತ್ರ ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸಲಾಗುತ್ತಿದೆ. ಆದರೆ ಈ ಹಿಂದೆ ದೇಶವನ್ನು ಆಳಿದವರು ಎಷ್ಟು ಲೂಟಿ ಹೊಡೆದಿದ್ದಾರೆ ಎನ್ನುವ ಮಾಹಿತಿ ಜನರಿಗೂ ಕೂಡ ಇದೆ. ಈ ನಿಟ್ಟಿನಲ್ಲಿ ಇದೆಲ್ಲವನ್ನು ಅರಿತು ಸುಭದ್ರ ದೇಶ ಕಟ್ಟಬೇಕಾದರೆ ಬಿಜೆಪಿಯಿಂದ ಮಾತ್ರ ಸಾಧ್ಯ. ಬಿಜೆಪಿಯಿಂದ ಗೆದ್ದು ಬಂದವರು ಪಕ್ಷ ನಿಷ್ಠೆಯಿಂದ ಕೆಲಸ ಮಾಡಬೇಕು. ನಮಗೆ ಅಧಿಕಾರ ನೀಡಿದ ಪಕ್ಷ ತಾಯಿಗೆ ಸಮಾನ. ಈ ನಿಟ್ಟಿನಲ್ಲಿ ನಾವು ತಾಯಿಗೆ ದ್ರೋಹ ಮಾಡದಂತೆ ಕೆಲಸ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ:ಬೆಲೆ ಏರಿಕೆ, ಜನ ಸಾಮಾನ್ಯರ ದುಸ್ಥಿಗೆ ಸರ್ಕಾರ ಹೊಣೆ: ನಾರಾಯಣಸ್ವಾಮಿ

ಆನೇಕಲ್ ತಾಲೂಕಿಗೆ ಶಿಂಶಾ ನದಿ ನೀರನ್ನು ತರುವ ಬಗ್ಗೆ ನಾನೇ ಹೇಳಿದ್ದೆ. ಇದಕ್ಕೆ ಕೆಲವು ಕಾಂಗ್ರೆಸ್ ಸದಸ್ಯರು ಮಾತನಾಡಿರುವುದು ನನ್ನ ಕಿವಿಗೆ ಬಿದ್ದಿದೆ. ನನ್ನ ಮನದಲ್ಲಿರುವ ಅನಿಸಿಕೆಯನ್ನು ಹೇಳಿಕೊಳ್ಳುವುದು, ಅಂತಹ ಕಾರ್ಯಕ್ರಮಗಳನ್ನು ರೂಪಿಸುವುದು ನನಗೆ ಬಿಟ್ಟ ವಿಚಾರವಾಗಿದೆ. ಇದಕ್ಕೆ ಮೂಗು ತೂರಿಸಲು ಅವರ್ಯಾರು ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ಸಿನ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ ಸುರೇಶ್ ಅವರಿಗೆ ತಿರುಗೇಟು ನೀಡಿದರು.

ಬಿಜೆಪಿ ಭದ್ರಕೋಟೆ!

ಆನೇಕಲ್ ತಾಲೂಕು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಎನ್.ಬಸವರಾಜು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಆನೇಕಲ್ ತಾಲೂಕು ಎಂದಿಗೂ ಕೂಡ ಬಿಜೆಪಿ ಭದ್ರಕೋಟೆ, ತಾಲೂಕಿನಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಸಾಕಷ್ಟು ಜನ ಇದ್ದು, ಅವರೆಲ್ಲರನ್ನೂ ಇಂತಹ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕು. ನಾಲ್ಕು ಬಾರಿ ಆನೇಕಲ್ಲಿನಲ್ಲಿ ಶಾಸಕರಾಗಿ ಸೋತ ಬಳಿಕ ಚಿತ್ರದುರ್ಗ ಲೋಕಸಭಾ ಸಂಸದರಾಗಿ ಕೇಂದ್ರ ಸಚಿವರಾಗಿರುವ ನಾರಾಯಣಸ್ವಾಮಿ ಅವರು ರೂಢಿಸಿಕೊಂಡ ಸರಳತೆ ಪಕ್ಷದ ಸಿದ್ಧಾಂತದಿಂದಾಗಿ ಕೇಂದ್ರದಲ್ಲಿ ಉನ್ನತ ಸ್ಥಾನವನ್ನು ಕಲ್ಪಿಸಿಕೊಂಡಿದ್ದಾರೆ. ಇಂತಹ ಹುದ್ದೆಗಳನ್ನು ಪಡೆಯಲು ಬಿಜೆಪಿ ಪಕ್ಷದಲ್ಲಿ ಇರುವ ಕಾರ್ಯಕರ್ತರು ಹಾಗೂ ಮುಖಂಡರಿಗೆ ಮಾತ್ರ ಸಾಧ್ಯ ಎಂದು ಪ್ರಶಂಸಿದ್ದಾರೆ. ಇದನ್ನೂ ಓದಿ:ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಎಫೆಕ್ಟ್ – ಹೊಸ ಸಂಶೋಧನೆ ವರದಿ ಆತಂಕ

narendra modi
narendra Modi

ಅತ್ತಿಬೆಲೆ ವೃತ್ತದಿಂದ ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರು ಬಿದರಗುಪ್ಪೆಯವರೆಗೆ ಮೆರವಣಿಗೆ ನಡೆಸಿ ನಂತರ ಅತ್ತಿಬೆಲೆಯ ಕಲ್ಯಾಣ ಮಂಟಪವೊಂದರಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನಾರಾಯಣಸ್ವಾಮಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಿದರು. ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಸ್ವಸಹಾಯ ಸಂಘ ಸ್ಥಾಪನೆಗಳಿಗೆ ಸಹಕಾರ ನೀಡಿತು: ರಾಮಲಿಂಗಾರೆಡ್ಡಿ

ಹಿರಿಯ ಬಿಜೆಪಿ ಮುಖಂಡ ಯಂಗಾ ರೆಡ್ಡಿ, ಬಿ.ಜಿ.ಆಂಜಿನಪ್ಪ, ಅತ್ತಿಬೆಲೆ ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಆರ್.ಟಿ. ಅಶೋಕ್, ಎನ್.ಶಂಕರ್, ಬಿದರಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್, ಅತ್ತಿಬೆಲೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ್ ರೆಡ್ಡಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *