ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯು (Women’s Reservation Bill) ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಬೆನ್ನಲ್ಲೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.
7 ಲೋಕಸಭೆ ಕ್ಷೇತ್ರಗಳ ಪೈಕಿ ಮೀನಾಕ್ಷಿ ಲೇಖಿ ಅವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದನ್ನು 2ಕ್ಕೆ ಏರಿಸಲು ಚರ್ಚೆಗಳು ಆರಂಭಗೊಂಡಿವೆ. ಕಳೆದ ವರ್ಷ ನಡೆದ ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿಯು 137 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆಮ್ ಆದ್ಮಿ ಪಕ್ಷ 140 ಮಹಿಳೆಯರಿಗೆ ಟಿಕೆಟ್ ನೀಡಿ ಕೌಂಟರ್ ಕೊಟ್ಟಿತ್ತು. ಇದನ್ನೂ ಓದಿ: Ind vs Pak ರೋಚಕ ಸಮರಕ್ಕೆ ಕ್ಷಣಗಣನೆ – ಮೋದಿ ಕ್ರೀಡಾಂಗಣದಲ್ಲಿ ಜನಸಾಗರ, ಭಾರತದ ಗೆಲುವಿಗೆ ಹೋಮ ಹವನ
Advertisement
Advertisement
ದೆಹಲಿಗೆ ಸಂಬಂಧಿಸಿದಂತೆ ಈಗಾಗಲೇ ಲೋಕಸಭೆ ಚುನಾವಣೆಗೆ ಕೆಲಸ ಆರಂಭವಾಗಿದೆ. ರಾಷ್ಟ್ರ ರಾಜಧಾನಿಯಿಂದ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಪಕ್ಷದ ನಾಯಕತ್ವ ಉತ್ಸುಕವಾಗಿದೆ. ಆದರೆ ಎಲ್ಲವೂ ಗೆಲುವಿನ ಮಾನದಂಡದ ಮೇಲೆ ಅವಲಂಬಿತವಾಗಿದೆ ಎಂದು ಬಿಜೆಪಿ (BJP) ಕಾರ್ಯಕಾರಿ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಹಂತದಲ್ಲಿ ನಾವು ಗಮನಾರ್ಹವಾದ ಅನುಯಾಯಿಗಳನ್ನು ಹೊಂದಿರುವ ದೆಹಲಿಯ ಸಕ್ರೀಯ ಪಕ್ಷದ ಕಾರ್ಯಕರ್ತರನ್ನು ಶಾರ್ಟ್‌ಲಿಸ್ಟ್ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೋಟಿ ಕೋಟಿ ಹಣ ಎಣಿಸುತ್ತಾ ಇರೋ ಅಧಿಕಾರಿಗಳು- ಅಂಬಿಕಾಪತಿ ಮನೆಯ Exclusive ಫೋಟೋ
Advertisement
Advertisement
ದೆಹಲಿಯಲ್ಲಿ 7 ಲೋಕಸಭೆ ಕ್ಷೇತ್ರಗಳಿದ್ದು, 7 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ನವದೆಹಲಿ ಕ್ಷೇತ್ರವನ್ನು ನಾಕ್ಷಿ ಲೇಖಿ, ಚಾಂದಿನಿ ಚೌಕ್ ಕ್ಷೇತ್ರವನ್ನು ಹರ್ಷವರ್ಧನ್, ಈಶಾನ್ಯ ದೆಹಲಿಯನ್ನು ನಟ-ರಾಜಕಾರಣಿ ಮನೋಜ್ ತಿವಾರಿ, ಪೂರ್ವದಿಂದ ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್, ವಾಯುವ್ಯ ದೆಹಲಿಯಿಂದ ಗಾಯಕ-ರಾಜಕಾರಣಿ ಹನ್ಸ್ ರಾಜ್ ಹನ್ಸ್, ಪಶ್ಚಿಮ ದೆಹಲಿಯಿಂದ ಜಾಟ್ ನಾಯಕ ಪರ್ವೆಸ್ ವರ್ಮಾ ಮತ್ತು ಗುಜ್ಜರ್ ನಾಯಕ ರಮೇಶ್ ಬಿಧುರಿ ದಕ್ಷಿಣ ದೆಹಲಿವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಪ್ರೊ. ಭಗವಾನ್ ಮನೆಗೆ ಮುತ್ತಿಗೆಗೆ ಯತ್ನ
ಮಹಿಳೆಯರಿಗೆ 2 ಸ್ಥಾನಗಳನ್ನು ಬಿಟ್ಟು ಕೊಡುವುದಾದರೆ ಓರ್ವ ಸಂಸದ ಕ್ಷೇತ್ರ ಬಿಟ್ಟುಕೋಡಬೇಕಾಗುತ್ತಿದೆ. ಕಳೆದ ಕ್ಯಾಬಿನೆಟ್ ಪುನರ್ ರಚನೆಯಲ್ಲಿ ಕೊವೀಡ್ ಸಂದರ್ಭದಲ್ಲಿ ಕೆಲಸ ಮಾಡಿದ್ದ ಆರೋಗ್ಯ ಸಚಿವ ಹರ್ಷವರ್ಧನ ರಾಜೀನಾಮೆ ನೀಡಿದ್ದರು. ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ರಮೇಶ್ ಬಿಧುರಿ ಅವರ ನಿರಂತರ ವಿವಾದಗಳು ಬಿಜೆಪಿಯನ್ನು ಮುಜುಗರಕ್ಕೀಡು ಮಾಡುತ್ತಿವೆ. ಹನ್ಸ್ ರಾಜ್ ಹನ್ಸ್ ಕೂಡ ತಮ್ಮ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ ಎಂಬ ದೂರು ಬಿಜೆಪಿ ನಾಯಕತ್ವದ ಕಿವಿಗೆ ತಲುಪಿದೆ ಎಂದು ವರದಿಯಾಗಿದೆ. ಯಾರ ಕ್ಷೇತ್ರ ಖಾಲಿಯಾಗಲಿದೆ ಎನ್ನುವ ಕುತೂಹಲ ಮೂಡಿದೆ.
Web Stories