ಬೀದರ್: ಪೇ ಸಿಎಂ (Pay CM) ಅಭಿಯಾನದಲ್ಲಿ ಲಿಂಗಾಯತರಿಗೆ (Lingayats), ವೀರಶೈವರಿಗೆ ಹಾಗೂ ಬಿಜೆಪಿ (BJP) ಮುಖಂಡರಿಗೆ ಅವಮಾನವಾಗುತ್ತಿದೆ ಎಂದು ಬಿಂಬಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ (Eshwara Khandre) ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬೀದರ್‌ನಲ್ಲಿ (Bidar) ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಎಂದರೆ ಇದರಲ್ಲಿ ಜಾತೀಯತೆ ತರುತ್ತಿದ್ದಾರೆ. ಬಿಜೆಪಿಯಲ್ಲಿರುವ ಲಿಂಗಾಯತರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ಅವರೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
Advertisement
Advertisement
2011 ರಲ್ಲಿ ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿ, ಜೈಲಿಗೆ ಕಳುಹಿಸಿದವರು ಯಾರು? 2021 ರಲ್ಲಿ ಸರ್ಕಾರ ರಚನೆಯಾದ ಮೇಲೆ ವಯಸ್ಸಾಗಿದೆ ಎಂದು ಕಣ್ಣೀರು ಹಾಕಿಸಿ, ರಾಜೀನಾಮೆ ಕೊಡಿಸಿದ್ದು ಬಿಜೆಪಿಯವರೇ ಅಲ್ಲವೇ? ಆಗ ಲಿಂಗಾಯತ, ವೀರಶೈವರಿಗೆ ಅವಮಾನ ಆಗಿದ್ದು, ಬಿಜೆಪಿ ಕಣ್ಣಿಗೆ ಕಾಣಿಸಲಿಲ್ಲವೇ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಆ ಭಾಗ್ಯ ಈ ಭಾಗ್ಯ ಅಂತಾ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟರು: ಸಿದ್ದುಗೆ ಬೊಮ್ಮಾಯಿ ಟಾಂಗ್
Advertisement
Advertisement
ಇಂದು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಲಿಂಗಾಯತ, ವೀರಶೈವರಿಗೆ ಅವಮಾನ ಎಂದು ಹೇಳುತ್ತಿರುವುದು ಖಂಡನೀಯವಾಗಿದೆ. ಪೇ ಸಿಎಂ ಅಭಿಯಾನ ಜಾತಿ, ಧರ್ಮ, ಮತದ ಹೋರಾಟ ಅಲ್ಲ. ಪಿಎಸ್‌ಐ, ಉಪನ್ಯಾಸಕರು, ಶಿಕ್ಷಕರ ನೇಮಕಾತಿ ಸೇರಿದಂತೆ ರಾಜ್ಯದ ಯಾವುದೇ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಅದರ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಹೋರಾಟ ಎಂದು ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅವರೆಲ್ಲಾ ಸಿಎಂ ಆಗಿದ್ದಾಗ ಬೀಗರ ಊಟ, ಮದುವೆಗೆ ಬರ್ತಿದ್ರು, ಬೊಮ್ಮಾಯಿ ಅಭಿವೃದ್ಧಿ ಕೆಲಸಕ್ಕೆ ಬರ್ತಿದ್ದಾರೆ: ಪ್ರತಾಪ್ ಸಿಂಹ