ಬಾಗಲಕೋಟೆ: ಗುಜರಾತ್ ಚುನಾವಣೆಯಲ್ಲಿ ನಾವು ಸೋತಿಲ್ಲ ಅದು ನಮ್ಮ ಗೆಲುವು, ತವರು ಚುನಾವಣೆ ಫಲಿತಾಂಶ ಮೋದಿ ಸೋಲಿನ ಆರಂಭ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲೆಯ ಜಮಖಂಡಿ ನಗರದಲ್ಲಿ ಮಾತನಾಡಿದ ಅವರು, ಮೋದಿ ಅಲೆ, ಪ್ರಭಾವ ಇದೆ ಅಂತಿದ್ದರಲ್ಲ, ಅದು ಕಡಿಮೆಯಾಗ್ತಾ ಇದೆ ಎಂದ್ರಲ್ಲದೇ, ಗುಜರಾತ್ ಚುನಾವಣೆಯಲ್ಲಿ ನಾವು ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆದ್ದಿದ್ದೇವೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಗುಜರಾತ್ ನವರು. ರಾಜ್ಯ ಹಾಗೂ ಕೇಂದ್ರ ಸರಕಾರ ಅವರ ಕೈಯಲ್ಲಿದ್ದು ಸಾಕಷ್ಟು ಅನುಕೂಲಗಳಿದ್ರೂ ಅವರ ಗೆಲುವಿನ ಅಂತರ ಕಡಿಮೆಯಾಗಿದೆ. ಈ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ ಎಂದರು.
Advertisement
Advertisement
ಎರಡು ರಾಜ್ಯದ ಚುನಾವಣೆ ಫಲಿತಾಂಶದಿಂದ ನಾವು ಮಂಕಾಗಿಲ್ಲ, ಮತ್ತಷ್ಟು ಅಗ್ರೆಸಿವ್ ಆಗಿದ್ದೇವೆ ಎಂದ ಸಿಎಂ, ಬಿಜೆಪಿ ಇಸ್ ಎ ಸಿಂಕಿಂಗ್ ಬೋಟ್, ಮುಳುಗುವ ಹಡಗು ಎಂದು ವ್ಯಂಗ್ಯವಾಡಿದ್ರು. ಪಕ್ಷಾಂತರ ಬಗ್ಗೆ ಮಾತನಾಡಿ, ನಮ್ಮ ಪಕ್ಷದಿಂದ ಯಾರು ಬೇರೆ ಪಕ್ಷಕ್ಕೆ ಹೋಗೋದಿಲ್ಲ. ಬೇರೆ ಪಕ್ಷದವ್ರೇ ನಮ್ಮ ಪಕ್ಷಕ್ಕೆ ಬರುತ್ತಾರೆ. ಕೆಲವರು ಈಗಾಗಲೇ ಸಂಪರ್ಕದಲ್ಲಿದ್ದಾರೆ ಅಂದ್ರು.
Advertisement
ಸಿಎಂ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ, ನನ್ನ ರಾಜಕೀಯವಾಗಿ ಮುಗಿಸಲು ಎಸಿಬಿ ದಾಳಿ ಮಾಡಿಸುತ್ತಿದ್ದಾರೆ ಎಂಬ ಜೆಡಿಎಸ್ ಶಾಸಕ ಜಿಟಿ ದೇವೆಗೌಡ ಬಗ್ಗೆ ಪ್ರತಿಕ್ರಿಯಿಸಿ, ಇದ್ರರಲ್ಲಿ ಯಾವುದೇ ದುರುದ್ದೇಶವಿಲ್ಲ, ಕಾನೂನು ಪ್ರಕಾರ ಲೋಕಾಯುಕ್ತ ವರದಿ ಆಧರಿಸಿ ಕೇಸ್ ದಾಖಲಿಸಿಕೊಂಡು ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಜಿಟಿ ದೇವೇಗೌಡ ವಿರುದ್ಧ ಎಸಿಬಿ ಬ್ರಹ್ಮಾಸ್ತ್ರ – ಚಾಮುಂಡೇಶ್ವರಿ ಕ್ಷೇತ್ರ ಗೆಲ್ಲಲು ಸಿಎಂ ಸೇಡಿನ ತಂತ್ರನಾ?
Advertisement
ಮಹಾದಾಯಿ ಬಗ್ಗೆ ಮಾತನಾಡಿ, ಚುನಾವಣೆ ಉದ್ದೇಶ ಇಟ್ಟುಕೊಂಡು ಬಿಜೆಪಿಯವರು ವಿವಾದ ಬಗೆಹರಿಸೋದಾಗಿ ಹೇಳುತ್ತಿದ್ದಾರೆ. ಬಿಜೆಪಿಯವರು ಸಮಸ್ಯೆ ಬಗೆಹರಿಸಿದರೆ ಸಂತೋಷ. ನಾನು ಈ ಹಿಂದೆ ಎರಡು ಬಾರಿ ಪತ್ರ ಬರೆದಿದ್ದೆ, ಆಗ ಬಗೆಹರಿಸದವರು ಈ ವಿವಾದ ಪರಿಹರಿಸೋದಕ್ಕೆ ಮುಂದಾಗಿದ್ದಾರೆ. ಇದು ಚುನಾವಣೆ ಪ್ರಚಾರಕ್ಕಾಗಿ ಮಾಡುತ್ತಿರೋದು ಎಂದರು.
ಪಕ್ಷ ನಿಷ್ಟೆ ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಮಾರ್ಚ್ ತಿಂಗಳಲ್ಲಿ ಅಭ್ಯರ್ಥಿಗಳ ಗೋಷಣೆ ಮಾಡಲಾಗುವುದು. ಇನ್ನು ಸಿಎಂ ಮಾತನಾಡುವ ವೇಳೆ ಜನರ ಕೇಕೆ ಕಂಡು ಗರಂ ಆದ ಸಿಎಂ… ಹೇ ತೂ ಯಾರಿ ಅವರು ಸುಮ್ನಿರಪ್ಪಾ ಎಂದು ಗರಂ ಆಗಿದ್ದು ಇದೇ ವೇಳೆ ಕಂಡುಬಂದಿತು.