ಬೆಂಗಳೂರು: ಬಿಜೆಪಿಯವರು ನಕಲಿ ರಾಮನ ಭಕ್ತರು. ಓಟಿಗೋಸ್ಕರ, ಚುನಾವಣೆಗೋಸ್ಕರ ರಾಮ ಅಂತಾರೆ. ಕಾಂಗ್ರೆಸ್‌ನವರು (Congress) ನಿಜವಾದ ರಾಮನ ಭಕ್ತರು ಎಂದು ಬಿಜೆಪಿ ವಿರುದ್ದ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ವಾಗ್ದಾಳಿ ನಡೆಸಿದ್ದಾರೆ.
ನರೇಗಾ ಹೆಸರು ಬದಲಾವಣೆ ಮಾಡಿರುವ ಕೇಂದ್ರದ ನಿರ್ಧಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ನರೇಗಾ, ಗಾಂಧೀಜಿ ಹೆಸರು ಬದಲಾವಣೆ ಮಾಡಿದೆ. ಮೊದಲು ಕೇಂದ್ರವೇ 100% ಹಣ ನೀಡುತ್ತಿತ್ತು. ಈಗ 40% ಹಣ ರಾಜ್ಯ ಕೊಡಬೇಕು. ಹೊಸ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ಹೇಳಿದ ಕಡೆ ಮಾತ್ರ ಕೆಲಸ ಮಾಡಬೇಕು. ಹೊಸ ಕಾಯ್ದೆಯಿಂದ ಉದ್ಯೋಗ ಖಾತ್ರಿ ಎನ್ನುವುದು ಹೋಯ್ತು. ಕೇಂದ್ರ ಸರ್ಕಾರ ಬಡವರಿಗೆ ದ್ರೋಹ ಮಾಡುತ್ತಿದೆ. ಜಿ ರಾಮ್ ಜೀ ಎಂದು ಹೆಸರನ್ನು ಇಟ್ಟಿದ್ದಾರೆ ನರೇಗಾ ಬದಲಾವಣೆ ಮಾಡಿರುವುದು ಬಡ ಜನರಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅವರಿಗೆ ರಾಮನನ್ನು ಕಂಡರೆ ಆಗುವುದಿಲ್ಲ ಎಂಬ ಬಿಜೆಪಿ (BJP) ನಾಯಕರ ಆರೋಪಕ್ಕೆ ಕಿಡಿಕಾರಿದ ಅವರು, ಬಿಜೆಪಿ ಅವರು ನಕಲಿ ರಾಮನ ಭಕ್ತರು. ವೋಟಿಗಾಗಿ ರಾಮ ಎನ್ನುತ್ತಾರೆ. ಎಲ್ಲಾ ದೇವಸ್ಥಾನ ಕಟ್ಟಿದ್ದು ನಾವೇ ನಿಜವಾದ ರಾಮನ ಭಕ್ತರು. ಬಿಜೆಪಿಯವರು ನಕಲಿ ಹಿಂದೂಗಳು ಎಂದರು. ಇದನ್ನೂ ಓದಿ: ನಗರಸಭೆಗೆ ಬೆಂಕಿ ಹಾಕಿಸುತ್ತೇನೆ – ಶಿಡ್ಲಘಟ್ಟ ಪೌರಾಯುಕ್ತೆಗೆ ಕೈ ನಾಯಕನಿಂದ ಜೀವ ಬೆದರಿಕೆ
ಗಾಂಧಿಯವರ ಹೆಸರು ತೆಗೆಯಲು ಹೇಗೆ ಅವರಿಗೆ ಮನಸ್ಸು ಬಂತು. ಬೇರೆ ದೊಡ್ಡ ಯೋಜನೆ ಮಾಡಿ ಗಾಂಧಿಜೀ (Gandhiji) ಹೆಸರು ಇಡಬಹುದಿತ್ತು. ಗಾಂಧಿ ಹೆಸರು ಬದಲಾವಣೆ ಮಾಡಿರುವುದು ಗಾಂಧಿ ಬಗ್ಗೆ ಇಬ್ಬರಿಗೆ ಇರುವ ಅಸಹನೆ, ದ್ವೇಷ ಎದ್ದು ಕಾಣುತ್ತದೆ. ಗಾಂಧೀಜಿಯನ್ನು ಕೊಂದವರು ಆರ್‌ಎಸ್‌ಎಸ್‌ನವರು. ಕೇಂದ್ರ ಸರ್ಕಾರ ಗಾಂಧಿ ತತ್ವವನ್ನು ಇಡೀ ದೇಶಕ್ಕೆ ತರಲಿ. ಬಿಜೆಪಿ, ಆರ್‌ಎಸ್‌ಎಸ್, ಹಿಂದೂ ಮಹಾಸಭಾ, ಭಜರಂಗದಳವರು ಬಿಟ್ಟು ಎಲ್ಲರೂ ಗಾಂಧಿಜೀ ಅವರ ಅಭಿಮಾನಿಗಳೇ. ಅವರ ಹೆಸರು ತೆಗೆಯವುದು ಬಿಜೆಪಿ ದುರಳತನ ತೋರುತ್ತದೆ ಎಂದು ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸಿಎಂ-ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಮೈಸೂರಿಗೆ ಬಂದಿದ್ದರು. ರಾಜ್ಯಕ್ಕೆ ಬಂದಾಗ ಸಿಎಂ-ಡಿಸಿಎಂ ಸಹಜವಾಗಿ ಅವರನ್ನ ಮಾತಾಡಿಸಿದ್ದಾರೆ. ನಮ್ಮಲ್ಲಿ ಗೊಂದಲ ಯಾವುದು ಇಲ್ಲ. ನೀವು ಸೃಷ್ಟಿ ಮಾಡ್ತೀರಾ ಅಷ್ಟೇ. ರಾಜಕೀಯ ಚರ್ಚೆ ಬಗ್ಗೆ ಗೊತ್ತಿಲ್ಲ. ಗಹನವಾದ ವಿಚಾರ ಆಗಿದ್ದರೆ ವಿಮಾನ ನಿಲ್ದಾಣದ ಒಳಗಡೆ ಇರುವ ಕೊಠಡಿಯಲ್ಲಿ ಮಾಡುತ್ತಿದ್ದರು. ಗಹನವಾದ ವಿಚಾರ ಅಲ್ಲದ ಕಾರಣ ರನ್ ವೇನಲ್ಲಿ ಮಾತಾಡಿದ್ದಾರೆ ಅಷ್ಟೇ ಎಂದರು.

