ನವದೆಹಲಿ: ದೇಶದಲ್ಲೇ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪ್ರಕಾರ, 2019-20ರಲ್ಲಿ ಬಿಜೆಪಿ 4,847.78 ಕೋಟಿ ಆಸ್ತಿಯನ್ನು ಘೋಷಿಸಿ ದೇಶದ ಶ್ರೀಮಂತ ಪಕ್ಷ ಎನಿಸಿಕೊಂಡಿದೆ.
Advertisement
2018-19ರಲ್ಲಿ ಬಿಜೆಪಿ 2,904.18 ಕೋಟಿ ಆಸ್ತಿ ಘೋಷಿಸಿತ್ತು. 2019-2020ರಲ್ಲಿ 4,847.78 ಕೋಟಿ ಆಸ್ತಿಯನ್ನು ಘೋಷಿಸಿ ಶೇ.67ರಷ್ಟು ಆಸ್ತಿಯನ್ನು ಹೆಚ್ಚಳ ಮಾಡಿಕೊಂಡಿದೆ. ಎಡಿಆರ್ ಪ್ರಕಾರ, 7 ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿ 6,988.57 ಕೋಟಿ ಮತ್ತು 44 ಪ್ರಾದೇಶಿಕ ರಾಜಕೀಯ ಪಕ್ಷಗಳ ಒಟ್ಟು ಆಸ್ತಿ 2,129.38 ಕೋಟಿ ರೂಪಾಯಿ ಆಗಿದೆ. ಬಿಜೆಪಿ ಆಸ್ತಿ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಎರಡನೇಯ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಬಿಎಸ್‍ಪಿ ಬಳಿ 698.33 ಕೋಟಿ (9.99%) ಆಸ್ತಿ ಇರುವುದಾಗಿ ತಿಳಿಸಿದೆ. ಮೂರನೇ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವಿದ್ದು, 588.16 ಕೋಟಿ (8.42%) ಮೌಲ್ಯದ ಆಸ್ತಿಯನ್ನು ದಾಖಲಿಸಿಕೊಂಡಿದೆ. ಇದನ್ನೂ ಓದಿ: ಬಿಜೆಪಿಯವರು ಎಂಜಲು ಹಚ್ಚಿ ಮಾಡಿದ ಪ್ರಚಾರದಿಂದ ಕೊರೊನಾ ಹೆಚ್ಚಳ: ಅಖಿಲೇಶ್
Advertisement
Advertisement
ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರ:
ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ (SP) 563.47 ಕೋಟಿ (26.46%) ಆಸ್ತಿ ದಾಖಲಿಸಿಕೊಂಡು ಮೊದಲ ಸ್ಥಾನ ಪಡೆದುಕೊಂಡಿದೆ. ನಂತರ ತೆಲಂಗಾಣ ರಾಷ್ಟ್ರ ಸಮಿತಿ (TRS) 301.47 ಕೋಟಿ ಆಸ್ತಿ ಘೋಷಿಸಿ ಎರಡನೇ ಸ್ಥಾನ, ಮೂರನೇ ಸ್ಥಾನದಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) 267.61 ಕೋಟಿ ಎಂದು ಎಡಿಆರ್ ವರದಿ ಮಾಡಿದೆ. ಈ ವರದಿಯ ಪ್ರಕಾರ ಏಳು ಪಕ್ಷಗಳಾದ ಬಿಜೆಪಿ, ಬಿಎಸ್‍ಪಿ, ಕಾಂಗ್ರೆಸ್, ಸಿಪಿಎಂ, ಎಐಟಿಸಿ, ಸಿಪಿಐ ಮತ್ತು ಎನ್‍ಸಿಪಿ ಪಕ್ಷಗಳ ಆಸ್ತಿಯಲ್ಲಿ ಹೆಚ್ಚಳ ವಾಗಿದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ನಟ ಕಂ ನಿರ್ದೇಶಕನ ವಿರುದ್ಧ ಅತ್ಯಾಚಾರ ಪ್ರಕರಣ
Advertisement
ರಾಷ್ಟ್ರೀಯ ಪಕ್ಷಗಳ ವಾರ್ಷಿಕವಾಗಿ ಹೆಚ್ಚಳ ಪಟ್ಟಿ:
2018-19 ರಲ್ಲಿ ಬಿಜೆಪಿ 2,904.19 ಕೋಟಿ ಆಸ್ತಿಯನ್ನು ಘೋಷಿಸಿತ್ತು. ಇದು 2019-20ರ ಅವದಿಯಲ್ಲಿ ಶೇ.67ರಷ್ಟು ಏರಿಕೆ ಕಂಡು 4,847.78 ತಲುಪಿದೆ. ಇದೇ ಅವದಿಯಲ್ಲಿ ಕಾಂಗ್ರೆಸ್ ತನ್ನ ಆಸ್ತಿ 928.84 ಕೋಟಿಯಿಂದ 588.16ಕ್ಕೆ ಕುಸಿತ ಕಂಡಿದೆ. ಬಿಎಸ್‍ಪಿ 738 ಕೋಟಿಯಿಂದ 698.33 ಕೋಟಿಗೆ ಇಳಿಕೆ ಕಂಡಿದೆ. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್
ಆಸ್ತಿ ಲೆಕ್ಕಾಚಾರ ಮೂಲ:
ರಾಜಕೀಯ ಪಕ್ಷಗಳು ಪ್ರಮುಖ 6 ಅಂಶಗಳಿಂದ ತಮ್ಮ ಆಸ್ತಿಯ ಲೆಕ್ಕಾಚಾರ ಕೊಡುತ್ತದೆ. ಸ್ಥಿರ ಆಸ್ತಿ, ಸಾಲ, ಮುಂಗಡ ಸಾಲ, ಠೇವಣಿ, ಎಫ್‍ಡಿಆರ್, ಟಿಡಿಎಸ್ ಮತ್ತು ಇತರ ಮೂಲಗಳ ಪ್ರಕಾರ ಆಸ್ತಿ ಘೋಷಿಸುತ್ತದೆ. ರಾಷ್ಟ್ರೀಯ ಪಕ್ಷಗಳು ಘೋಷಿಸಿರುವ ಆಸ್ತಿಯಲ್ಲಿ ಠೇವಣಿ ಮೂಲಕ 5,970.59 ಕೋಟಿ ಆಸ್ತಿಯನ್ನು ಇಟ್ಟುಕೊಂಡಿವೆ ಎಂದು ವರದಿಯಲ್ಲಿ ಸ್ಪಷ್ಟವಾಗಿದೆ.