ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಇಂದಿಗೆ ಆರು ದಿನ ಕಳೆದಿವೆ. ಸಚಿವ ಸಂಪುಟ ರಚನೆಯನ್ನು ಶೀಘ್ರದಲ್ಲೇ ಮಾಡ್ತೀವಿ ಎಂದು ಹೇಳುತ್ತ ಬಿಜೆಪಿ ನಾಯಕರು ದಿನ ಮುಂದೂಡುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ದೆಹಲಿಯತ್ತ ಹೊರಡಲು ಸಿದ್ಧರಾಗಿದ್ದರು. ಇತ್ತ ಸಚಿವ ಸ್ಥಾನದ ಆಕಾಂಕ್ಷಿಗಳು ಸಹ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಲು ದೆಹಲಿಗೆ ಹೊರಡುವ ಪ್ಲಾನ್ ಮಾಡಿಕೊಂಡಿದ್ದರು. ದೆಹಲಿಯತ್ತ ರಾಜ್ಯ ಬಿಜೆಪಿ ನಾಯಕರ ಆಗಮನದ ವಿಷಯ ಅರಿತ ಹೈಕಮಾಂಡ್ ಸಿಎಂ ಸೇರಿದಂತೆ ಎಲ್ಲರಿಗೂ ಶಾಕಿಂಗ್ ನ್ಯೂಸ್ ರವಾನಿಸಿದೆ ಎಂದು ತಿಳಿದು ಬಂದಿದೆ.
ಆಗಸ್ಟ್ 7ರವರೆಗೂ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ರಾಜ್ಯ ನಾಯಕರು ದೆಹಲಿಗೆ ಬರೋದ ಬೇಡ ಎಂಬ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ. ಇತ್ತ ಅಮಿತ್ ಶಾ ಸಹ ಮುಖ್ಯಮಂತ್ರಿಗಳಿಗೂ ಇದೇ ಸಂದೇಶವನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಸಚಿವ ಸ್ಥಾನ ಅಲಂಕರಿಸಲು ತವಕಿಸುತ್ತಿದ್ದ ಆಕಾಂಕ್ಷಿಗಳಿಗೆ ಹೈಕಮಾಂಡ್ ಶಾಕ್ ನೀಡಿದೆ. ಆಗಸ್ಟ್ 8ರ ಬಳಿಕವೇ ಸಂಪುಟ ರಚನೆಯಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಸಿಎಂ ಯಡಿಯೂರಪ್ಪ ಅವರು ಡಜನ್ ಗಟ್ಟಲೆ ಸಂಕಟ ಎದುರಿಸುತ್ತಿದ್ದು, ತಮ್ಮದೇ ಸಮುದಾಯದ ಆಪ್ತರ ತಲೆನೋವಾಗಿದೆ. ಯಡಿಯೂರಪ್ಪ ಕ್ಯಾಬಿನೆಟ್ ಸೇರಲು ಲಿಂಗಾಯತ ಸಮುದಾಯದ ಡಜನ್ ಗಟ್ಟಲೆ ಆಂಕಾಕ್ಷಿಗಳು ಇದ್ದಾರೆ. ಹೀಗಾಗಿ ಯಾರಿಗೆ ಸಚಿವ ಸ್ಥಾನ ಕೊಡುವುದು, ಯಾರಿಗೆ ಬಿಡುವುದು ಅನ್ನೋ ಧರ್ಮ ಸಂಕಟದಲ್ಲಿ ಬಿಎಸ್‍ವೈ ಎದುರಾಗಿದೆ. ಇದನ್ನೂ ಓದಿ: ಎಲ್ಲಾ ಸಚಿವಸ್ಥಾನ ಲಿಂಗಾಯತರಿಗೆ ಕೊಟ್ರೆ ಅತೃಪ್ತರು ವಿಷ ಕುಡಿಬೇಕಾ: ಮುಖಂಡರಿಗೆ ಬಿಎಸ್‍ವೈ ಪ್ರಶ್ನೆ
Advertisement
ಸಚಿವ ಸ್ಥಾನ ಆಂಕಾಕ್ಷಿಗಳು: ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ಜೆ.ಸಿ.ಮಾಧುಸ್ವಾಮಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಬಸನಗೌಡಪಾಟೀಲ್ ಯತ್ನಾಳ್, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ದತ್ತಾತ್ರೇಯ ಪಾಟೀಲ್ ರೇವೂರ್.
Advertisement