ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸುವಂತೆ ಸುಪ್ರೀಂಕೊರ್ಟ್ ನೀಡಿರುವ ಆದೇಶ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಗೆ ಭಯ ಶುರುವಾಗಿದೆ ಎನ್ನಲಾಗಿದೆ. ಕಾವೇರಿ ನಿರ್ವಹಣಾ ಮಂಡಳಿಗೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಿಂದೇಟು ಹಾಕ್ತಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಕಾವೇರಿ ನಿರ್ವಹಣಾ ಮಂಡಳಿಯನ್ನು ಕೇಂದ್ರ ಸರ್ಕಾರ ರಚನೆ ಮಾಡಿದ್ದಲ್ಲಿ, ಅದು ಕರ್ನಾಟಕ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಚುನಾವಣೆಯ ಕಾರಣದಿಂದಾಗಿ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚಿಸದಿರಲು ಚಿಂತನೆ ನಡೆಸಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಹೆಚ್ಚಿನ ಕಾಲಾವಕಾಶಕ್ಕೆ ಮನವಿ ಮಾಡಲು ಕೇಂದ್ರ ನಿರ್ಧಾರ ಮಾಡಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
Advertisement
ಸುಪ್ರೀಂ ಕೋರ್ಟ್ ಆರು ವಾರಗಳಲ್ಲಿ ನೀರು ಹಂಚಿಕೆಗೆ ವ್ಯವಸ್ಥೆ ರೂಪಿಸಲು ಸೂಚನೆಯನ್ನು ನೀಡಿತ್ತು. ಮಾರ್ಚ್ ಅಂತ್ಯಕ್ಕೆ ಸುಪ್ರಿಂಕೊರ್ಟ್ ನೀಡಿರುವ ಕಾಲವಾಶ ಮುಗಿಯಲಿದೆ. ಏಪ್ರಿಲ್ ಅಂತ್ಯ ಅಥವಾ ಮೇ ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಚುನಾವಣೆ ಹೊತ್ತಲ್ಲಿ ನೀತಿ ಸಂಹಿತೆ ನೆಪ ಮುಂದಿಟ್ಟುಕೊಂಡು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ಲಾನ್ ಮಾಡುತ್ತಿದೆ ಅಂತಾ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
Advertisement
ಸದ್ಯ ಕಾವೇರಿ ಮೇಲುಸ್ತುವಾರಿ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಚುನಾವಣೆವರೆಗೂ ಈ ಸಮಿತಿ ಕಾರ್ಯ ನಿರ್ವಸುವ ಬಗ್ಗೆ ಕೊರ್ಟ್ ಗೆ ಮನವರಿಕೆ ಮಾಡಲು ಕೇಂದ್ರ ಚಿಂತಿಸಿದ್ದು, ಮಂಡಳಿ ಸ್ಥಾಪನೆ ಕಷ್ಟದ ಕೆಲಸ ಅಂತಾ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ.