ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ದೂರ ಇಟ್ಟು ಓಲ್ಡ್ ಮೈಸೂರು ಆಪರೇಷನ್ ಕಮಲ ನಡೆಯುತ್ತಿದೆ. ಡಿಸಿಎಂ ಆಗಿ ಅಶ್ವತ್ಥನಾರಾಯಣ ಪ್ರಯೋಗ ಮಾಡಿ ಹೈಕಮಾಂಡ್ ಫೇಲ್ಯೂರ್ ಆಗಿದೆ ಎಂಬ ಚರ್ಚೆ ಬಿಜೆಪಿಯಲ್ಲಿ ಜೋರಾಗಿದೆ.
ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಸಂಘಟನೆ ಮಾಡಲು ಅಶ್ವತ್ಥನಾರಾಯಣ ವಿಫಲ ಎಂಬ ವರದಿ ರವಾನೆಯಾಗಿದ್ದು, ಹೈಕಮಾಂಡ್ ಅಸಮಾಧಾನಗೊಂಡಿದೆ ಎನ್ನಲಾಗಿದೆ. ಹಾಗಾಗಿಯೇ ಅಶ್ವತ್ಥನಾರಾಯಣ ಬಿಟ್ಟು ಹಳೇ ಮೈಸೂರು ಭಾಗದಲ್ಲಿ ಅನ್ಯ ಪಕ್ಷಗಳ ನಾಯಕರ ಸೇರ್ಪಡೆಗೆ ಕಾರ್ಯತಂತ್ರ ನಡೆಯುತ್ತಿದೆ ಅಂತಾ ಮೂಲಗಳು ತಿಳಿಸಿವೆ.
ಮೊನ್ನೆ ಸಿಎಂ ನೇತೃತ್ವದಲ್ಲಿ ನಡೆದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲೂ ಅಶ್ವತ್ಥನಾರಾಯಣ ದೂರ ಇಟ್ಟಿದ್ದರು. ಬಹಿರಂಗವಾಗಿ ಅಬ್ಬರಿಸುವುದನ್ನು ಬಿಟ್ಟರೆ ಸಂಘಟನೆಗೆ ಶಕ್ತಿ ತರಲು ಸಾಧ್ಯ ಆಗಿಲ್ಲ ಎಂಬ ಅಸಮಾಧಾನ ಬಿಜೆಪಿ ಹೈಕಮಾಂಡ್ ಇದೆ ಎನ್ನಲಾಗಿದೆ. ಹೈಕಮಾಂಡ್ ಅಸಮಾಧಾನದ ಬೆನ್ನಲ್ಲೇ ಮೈಸೂರು ಭಾಗಗಳ ಪ್ರವಾಸಕ್ಕೆ ಅಶ್ವತ್ಥನಾರಾಯಣ ಕಸರತ್ತು ನಡೆಸುತ್ತಿದ್ದಾರೆ. ಹಾಗಾದರೆ ಇದ್ದಕ್ಕಿದ್ದಂತೆ ಸ್ಟಾರ್ ಆಗಿ ಡಿಸಿಎಂ ಪಟ್ಟ ಪಡೆದಿದ್ದ ಅಶ್ವತ್ಥನಾರಾಯಣ ಹೈಕಮಾಂಡ್ ಕಣ್ಣಲ್ಲಿ ಫೇಲ್ಯೂರ್ ಆಗಿದ್ದಾರಾ ಎಂಬ ಬಗ್ಗೆ ಬಿಜೆಪಿ ವಲಯದಲ್ಲಿ ಬಿಸಿ, ಬಿಸಿ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಕಿತ್ತಾಟ ಶುರು ಆಗಿದೆಯಾ? ಅಶ್ವತ್ಥನಾರಾಯಣ ಒಂಟಿಯಾದಾರಾ ಎಂಬ ಪ್ರಶ್ನೆ ಹರಿದಾಡುತ್ತಿದೆ. ಅಶೋಕ್, ಸುಧಾಕರ್, ಯೋಗೇಶ್ವರ್ ಒಂದು ಗುಂಪು ಸೇರಿದ್ದು, ಹಳೇ ಮೈಸೂರು ಭಾಗದ ಸಂಘಟನೆಯಲ್ಲಿ ತ್ರಿಮೂರ್ತಿಗಳದ್ದೇ ಕಾರುಬಾರು ನಡೆಯುತ್ತಿದ್ದು, ಅಶ್ವತ್ಥನಾರಾಯಣ ಹೊರಗಿಟ್ಟು ಆಪರೇಷನ್ ಚಟುವಟಿಕೆಗಳು ಜೋರಾಗಿದೆ ಮತ್ತು ತ್ರಿಮೂರ್ತಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಾಥ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್
ಹಾಗಾದರೆ ಅಶ್ವತ್ಥನಾರಾಯಣ್ ಓವರ್ ಸ್ಮಾರ್ಟ್ ಬಿಜೆಪಿಯ ಇತರೆ ಒಕ್ಕಲಿಗ ನಾಯಕರನ್ನು ಕೆರಳಿಸುತ್ತಾರಾ? ಚೊಚ್ಚಲ ಬಾರಿಗೆ ಕ್ಯಾಬಿನೆಟ್ ಸೇರ್ಪಡೆ ಬೆನ್ನಲ್ಲೇ ಡಿಸಿಎಂ ಪಟ್ಟ ಗಿಟ್ಟಿಸಿದ ಅಶ್ವತ್ಥನಾರಾಯಣ ಈಗ ಒಂಟಿಯಾಗಿ ಏನು ಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.