ಬೆಂಗಳೂರು: ಬಿಜೆಪಿಯೊಳಗಿನ (BJP) ಬಣ ಕಿತ್ತಾಟ ಜೋರಾಗಿದ್ದು, ಕೊನೆಗೂ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ (Basanagouda Patil Yatnal) ಹೈಕಮಾಂಡ್ ನೋಟಿಸ್ ನೀಡಿದೆ.
ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ಯತ್ನಾಳ್‌ಗೆ ನೋಟಿಸ್ ಹೊರಡಿಸಲಾಗಿದೆ. ಯತ್ನಾಳ್ ತಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಹೈಕಮಾಂಡ್ ಕೇಳಿದೆ. ಕೊನೆಗೂ ಭಿನ್ನಮತಕ್ಕೆ ತೆರೆ ಎಳೆಯಲು ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ. ಇದನ್ನೂ ಓದಿ: ಒಂದು ಕ್ಷಣವೂ ಯೋಚಿಸದೇ ದಾಖಲೆ, ವೀಡಿಯೋ ರಿಲೀಸ್ ಮಾಡ್ಲಿ – ಯತ್ನಾಳ್‌ಗೆ ವಿಜಯೇಂದ್ರ ಸವಾಲ್
ವಕ್ಫ್ ವಿರುದ್ಧ ಹೋರಾಟ ನಡೆಸುತ್ತಿರುವ ಯತ್ನಾಳ್ ಬಣ ವಿಜಯೇಂದ್ರ ಪದಚ್ಯುತಿಗೆ ಒತ್ತಾಯಿಸಿದೆ. ಇತ್ತ ವಿಜಯೇಂದ್ರ ಬೆಂಬಲಕ್ಕೆ ನಿಂತಿರುವ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ ಬಣ, ಯತ್ನಾಳ್ ವಿರುದ್ಧ ಗುಡುಗಿದೆ. ಪಕ್ಷದಿಂದ ಉಚ್ಚಾಟನೆಗೆ ಪಟ್ಟು ಹಿಡಿದಿದೆ.
ಯತ್ನಾಳ್ ತಂಡದ ವಿರುದ್ಧ ಕ್ರಮ ಜರುಗಿಸುವಂತೆ ವಿಜಯೇಂದ್ರ ಬಣ ಆಗ್ರಹಿಸಿದೆ. ಕೋಲಾರ ಜಿಲ್ಲೆಯ ಕುರುಡುಮಲೆ ಗಣಪತಿ ದೇವಸ್ಥಾನದಿಂದ ಪ್ರವಾಸ ಹೊರಟಿರುವ ಈ ಬಣ ಹೋರಾಟದ ಹಾದಿ ಹಿಡಿದಿದೆ. ಇದನ್ನೂ ಓದಿ: ಬಿಎಸ್‌ವೈ ಕುಟುಂಬ ದೇಶದಲ್ಲಿಯೇ ಪ್ರಾಮಾಣಿಕ ಕುಟುಂಬ, ವಿಜಯೇಂದ್ರ ಅಪ್ಪಟ ಚಿನ್ನ – ಯತ್ನಾಳ್ ವ್ಯಂಗ್ಯ
ವಿಜಯೇಂದ್ರ ಬಣ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಂಡಿದೆ. 50 ಮಾಜಿ ಶಾಸಕರು ನಮ್ಮ ಬಣದಲ್ಲಿದ್ದಾರೆಂದು ವಿಜಯೇಂದ್ರ ಬಣದ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.