ಬೆಳಗಾವಿ: ಬಿಜೆಪಿ (BJP) ಅಧಿಕಾರದಲ್ಲಿದ್ದಾಗ ಗುಂಡಿ ಮುಚ್ಚುವಂತೆ ಹೈಕೋರ್ಟ್ ಉಗಿಯುತ್ತಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಿಜೆಪಿ ವಿರುದ್ಧ ಕಿಡಿಕಾರಿದರು.
ಬೆಳಗಾವಿ (Belagavi) ವಿಮಾನ ನಿಲ್ದಾಣದಲ್ಲಿ ಬ್ರ್ಯಾಂಡ್ ಬೆಂಗಳೂರು ವಿಚಾರಕ್ಕೆ ಬಿಜೆಪಿ ವಿರುದ್ದ ಹರಿಹಾಯ್ದ ಸಿಎಂ, ಬಿಜೆಪಿ ಕಾಲದಲ್ಲಿ ಗುಂಡಿ ಮುಚ್ಚುವುದಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಬಿಜೆಪಿ ಅವರು ಬೆಂಗಳೂರಿಗೆ ಏನು ಮಾಡಿದ್ದಾರೆ? ಗುಂಡಿ ಮುಚ್ಚಲಿಕ್ಕೆ ಆಗಿಲ್ಲ ಅವರಿಗೆ. ಹೈಕೋರ್ಟ್ ಅವರ ವಿರುದ್ಧ ಟೀಕೆ ಮಾಡಿತ್ತು. ಬ್ರ್ಯಾಂಡ್ ಬೆಂಗಳೂರು (Brand Bengaluru) ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿ ಅವರಿಗಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿಎಂ ಐಸಿಸ್ ಸಂಪರ್ಕಿತ ಮೌಲ್ವಿಗಳ ಸಭೆಗೆ ಹೋಗಿದ್ರೆ ಮಿಲಿಟರಿಗೆ ಮಾಹಿತಿ ಕೊಡಲಿ – ಪ್ರಿಯಾಂಕ್ ಖರ್ಗೆ
ಸದನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಎಲ್ಲರೂ ಹೋಗಿ ತೆಲಂಗಾಣದಲ್ಲಿ ಕೂತಿಲ್ಲ. ಇಬ್ಬರೂ ಮಾತ್ರ ಹೋಗಿದ್ದಾರೆ. ಮುನಿಯಪ್ಪ, ಜಾರ್ಜ್ ಸೇರಿ ಎಲ್ಲ ವಾಪಸ್ ಬಂದಿದ್ದಾರೆ. ಸರ್ಕಾರದ ಜೊತೆಗೆ ರಾಜಕೀಯನೂ ಮಾಡಬೇಕಲ್ಲ ಎಂದರು.
ಒಲೈಕೆ ಭಾಷಣ ಎಂದು ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿ, ನಾನು ಎಲ್ಲ ಸಮುದಾಯಕ್ಕೆ ಕೊಡುತ್ತೇನೆ ಎಂದು ಹೇಳಿದ್ದೆ. ಕುಮಾರಸ್ವಾಮಿ ಹೇಳಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಇಬ್ಬರು ಸಿಂಗ್‍ಗಳಿಂದ ರಾಜ್ಯ ಹಾಳು, ದೆಹಲಿಗೆ ಹೋಗೋದು ನಿಶ್ಚಿತ: ಯತ್ನಾಳ್