ಚಿಕ್ಕಬಳ್ಳಾಪುರ: ಬಿಜೆಪಿ ಸರ್ಕಾರ ರೌಡಿಗಳು ಸತ್ರೆ 25 ಲಕ್ಷ ರೂ. ಪರಿಹಾರ ಕೊಡುತ್ತೆ. ಆದರೆ ಪಾಪ ಗುತ್ತಿಗೆದಾರ ಸಂತೋಷ್ ಪಾಟೀಲ್‍ಗೆ ಯಾಕೆ ಪರಿಹಾರ ಕೊಟ್ಟಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದರು.
Advertisement
ಚಿಕ್ಕಬಳ್ಳಾಪುರ ತಾಲೂಕು ಪೆರೇಸಂದ್ರ ಗ್ರಾಮದಲ್ಲಿ ಜನತಾ ಜಲಧಾರೆ ಯಾತ್ರೆಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ ರಾಜೀನಾಮೆ ತಗೊಂಡು ಸಿಎಂ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡಿದ್ದೀರಿ. ಆದ್ರೆ ಸತ್ತ ಸಂತೋಷ್ ಪಾಟೀಲ್‍ಗೆ ಯಾಕೆ ಪರಿಹಾರ ಕೊಟ್ಟಿಲ್ಲ. ರೌಡಿಗಳು ಸತ್ರೆ 25 ಲಕ್ಷ ರೂ. ಕೊಡ್ತೀರಿ. ಸಂತೋಷ್ ಪಾಟೀಲ್ ಅವರಿಗೆ ಕೂಡಲೇ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗೃಹ ಸಚಿವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ: ಆರ್.ಧ್ರುವನಾರಾಯಣ್
Advertisement
Advertisement
ಕಂಟ್ರಾಕ್ಟರ್ ವಿಷ ಸೇವಿಸಿ ಸತ್ತಿದ್ದಾನೆ. ಅವನಿಗ್ಯಾಕೆ ಪರಿಹಾರ ಕೊಡಲಿಲ್ಲ. ಆದಷ್ಟು ಬೇಗ ಪರಿಹಾರ ಕೊಡಿ. ಇನ್ನೂ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸ್ ಕಮೀಷನರ್ ಬಹಳ ತಾಳ್ಮೆಯಿಂದ ಉತ್ತಮ ಕೆಲಸ ಮಾಡಿದ್ದಾರೆ. ತಪ್ಪಿತಸ್ಥರು ಯಾರೇ ಇದ್ರೂ ಪೊಲೀಸರು ಅವರ ಮೇಲೆ ಕ್ರಮಕೈಗೊಳ್ಳಬೇಕು. ನಿರಪರಾಧಿಗಳನ್ನ ವಿಚಾರಣೆ ಮಾಡಿ ಆದಷ್ಟು ಬೇಗ ಬಿಟ್ಟು ಕಳುಹಿಸಿ ಎಂದು ತಿಳಿಸಿದರು.