ಮಂಡ್ಯ: ನಿರುದ್ಯೋಗ ಹೆಚ್ಚಿಸುವ, ಬೆಲೆ ಏರಿಕೆ ಮಾಡುವ ಸರ್ಕಾರ ಬೇಡ. ಈ ಬಿಜೆಪಿ (BJP) ಸರ್ಕಾರ ದಲಿತರ (Dalits) ವಿರೋಧಿ , ದ್ವೇಷ ಹಬ್ಬಿಸುವ ಸರ್ಕಾರ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಕಿಡಿಕಾರಿದ್ದಾರೆ.
ಭಾರತ್ ಜೋಡೋ ಪಾದಯಾತ್ರೆ (Bharat Jodo Yatra) ಹಿನ್ನೆಲೆ ಇಂದು ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಬ್ರಹ್ಮ ದೇವರಹಳ್ಳಿಗೆ ಬಂದು ತಲುಪಿದ ರಾಹುಲ್ ಗಾಂಧಿ ಜನರನ್ನುದ್ದೇಶಿಸಿ ಮಾತನಾಡಿರು. ಈ ವೇಳೆ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸುವುದು ಸುಲಭವಲ್ಲ. ದೇಶದಲ್ಲಿ ದ್ವೇಷ ಹಬ್ಬಿಸುವ ಪ್ರಯತ್ನಗಳು ನಡೆಯುತ್ತಿವೆ. ದ್ವೇಷ ಹಬ್ಬಿಸುವುದು ದೇಶಕ್ಕೆ ದ್ರೋಹ ಬಗೆದಂತೆ. ನಾವು ದ್ವೇಷ, ಹಿಂಸೆಯನ್ನು ಸಹಿಸಲ್ಲ ಎಂದರು.
Advertisement
Advertisement
ನಾನು ರೈತ ಮಹಿಳೆಯರ ಜತೆ ಸಂವಾದ ನಡೆಸಿದೆ. ಅವರ ಪುರುಷರು ಬೆಳೆ ಸಾಲ ಮಾಡಿ ಸಂಕಷ್ಟಕ್ಕೆ ಒಳಗಾದ ವ್ಯಥೆ ಹೇಳಿದರು. ಆ ರೈತ ಮಹಿಳೆಯರ ಪತಿಯಂದಿರು ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡರು. ರೈತರ ನೋವು ಎಂಥದ್ದು ಅಂತ ಯೋಚಿಸುತ್ತಿದ್ದೆ. ಕುಟುಂಬದವರ ಜೊತೆಗೂ ಸಾಲದ ಬಗ್ಗೆ ಹೇಳಲಾಗದ ಪರಿಸ್ಥಿತಿ ಅವರಿಗೆ ಇತ್ತು. ಆ ರೈತರು ಶೇ.24 ಬಡ್ಡಿಗೆ ಸಾಲ ಪಡೆದಿದ್ದರು. ನಮ್ಮ ದೇಶದಲ್ಲಿ ಶೇ.6 ಬಡ್ಡಿಯಲ್ಲಿ ಶ್ರೀಮಂತರಿಗೆ ಸಾಲ ಸಿಗುತ್ತಿದೆ. ಆದರೆ ರೈತರಿಗೆ ಶೇ.24 ರಷ್ಟು ಬಡ್ಡಿಯಲ್ಲಿ ಸಾಲ ಕೊಡಲಾಗುತ್ತಿದೆ. ಇದು ನಮ್ಮ ದೇಶದ ಈಗಿನ ಸ್ಥಿತಿ. 3 ರೈತ ವಿರೋಧಿ ಕಾಯ್ದೆಗಳನ್ನು ಇನ್ನೂ ರಾಜ್ಯದಲ್ಲಿ ವಜಾ ಮಾಡಿಲ್ಲ ಎಂದು ವಾಗ್ವಾದ ನಡೆಸಿದರು.
Advertisement
Advertisement
ನೋಟು ಅಮಾನ್ಯೀಕರಣ, ಜಿಎಸ್‌ಟಿಯಿಂದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಇವತ್ತು 2 ಭಾರತಗಳನ್ನು ಸೃಷ್ಟಿಸಲಾಗಿದೆ. ಒಂದು ಭಾರತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಶಾಂತಿಯಿಂದ ಪಾದಯಾತ್ರೆ ಮಾಡುತ್ತಿದೆ. ಇನ್ನೊಂದು ಭಾರತ ಶ್ರೀಮಂತರಿಂದ ತುಂಬಿದೆ. ಶ್ರೀಮಂತರ, ಉದ್ಯಮಿಗಳ ಭಾರತಕ್ಕೆ ದೇಶದ ಯುವಕರಿಗೆ ಇನ್ನೂ ಉದ್ಯೋಗ ಕೊಡಲು ಆಗಿಲ್ಲ. ಅತ್ಯಂತ ಶ್ರೀಮಂತ ಉದ್ಯಮಿಯೂ ಭಾರತದವರೇ ಆಗಿದ್ದಾರೆ. ಅತ್ಯಂತ ಬಡತನವೂ ಭಾರತದಲ್ಲೇ ಇದೆ. ಬೆಲೆ ಏರಿಕೆ ದೇಶದ ಜನರನ್ನು ಕಿತ್ತು ತಿನ್ನುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಳೆ ಇಡಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡ್ತೀವಿ – ಡಿಕೆಶಿ
ನಮಗೆ ಬೇಕಾಗಿರುವುದು ದ್ವೇಷ ಹಬ್ಬಿಸುವ, ನಿರುದ್ಯೋಗ ಹೆಚ್ಚಿಸುವ, ಬೆಲೆ ಏರಿಕೆ ಇರುವ ದೇಶ ಅಲ್ಲ. ಬಿಜೆಪಿ ಸರ್ಕಾರ ದಲಿತರ ವಿರೋಧಿಯಾಗಿದೆ. ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗವನ್ನು ಸಿದ್ದರಾಮಯ್ಯ ಸಿಎಂ ಇದ್ದಾಗ ರಚಿಸಿದ್ದರು. ಎಸ್‌ಟಿ ಮೀಸಲಾತಿ ಶೇ.3 ರಿಂದ ಶೇ.7 ಹೆಚ್ಚಿಸುವ, ಎಸ್‌ಸಿ ಮೀಸಲಾತಿ ಶೇ.15 ರಿಂದ ಶೇ.17 ಕ್ಕೆ ಏರಿಸುವ ಶಿಫಾರಸು ಮಾಡಲಾಯ್ತು. ಮೂರೂವರೆ ವರ್ಷವಾದರೂ ನಾಗಮೋಹನ್ ದಾಸ್ ಆಯೋಗದ ವರದಿ ಜಾರಿ ಮಾಡಿಲ್ಲ. ಬಿಜೆಪಿ ಕೂಡಲೇ ಈ ವರದಿ ಜಾರಿ ಮಾಡಲು ನಾನು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ಪತ್ರಕರ್ತರ ಮೇಲೆ ಪೊಲೀಸರಿಂದ ಹಲ್ಲೆ
आसमां भी आज झुक गया,
इन हौसलों में इतनी ताक़त है!#BharatJodoWithSoniaGandhi #BharatJodoYatra pic.twitter.com/35zbWfFIHZ
— Bharat Jodo (@bharatjodo) October 6, 2022
ಇಂದು ಬೆಳಗ್ಗೆ ಪಾಂಡವಪುರದ ಬೆಳ್ಳಾಲೆಯಿಂದ ಆರಂಭವಾಗಿದ್ದ ಭಾರತ್ ಜೋಡೋ ಪಾದಯಾತ್ರೆ ಸುಮಾರು 18 ಕಿ.ಮೀ ಸಾಗಿ ಬಂದು, ನಾಗಮಂಗಲ ತಾಲೂಕಿನ ಬ್ರಹ್ಮ ದೇವರಹಳ್ಳಿಗೆ ಬಂದು ತಲುಪಿದೆ. ರಾಹುಲ್ ಗಾಂಧಿ ಅವರು ಇಂದು ರಾತ್ರಿ ಬ್ರಹ್ಮದೇವನಹಳ್ಳಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.