ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೂಕಬಳಿಕೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಎಂಎಲ್‌ಸಿ ಅಶ್ವಥ್ ನಾರಾಯಣ್‌ಗೆ (Ashwath Narayan) 1 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರಿನಲ್ಲಿ ಅಕ್ರಮ ಲೇಔಟ್ ಮಾಡಿದ್ದ ಆರೋಪ ಮಾಜಿ ಎಂಎಲ್‌ಸಿ ಮೇಲಿತ್ತು. 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಇದನ್ನೂ ಓದಿ: GST ಕೌನ್ಸಿಲ್ ಸಭೆಗೆ ಸಿದ್ದರಾಮಯ್ಯ ಹೋಗದ್ದಕ್ಕೆ ವಿಶ್ವನಾಥ್ ಕಿಡಿ
ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೆ ಖಾಲಿ ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಿದ ಆರೋಪ ಹೊತ್ತಿದ್ದಾರೆ. ಈ ಸಂಬಂಧ ಮೈಸೂರಿನ ಡಾ. ಕಾವ್ಯಶ್ರೀ ದೂರು ನೀಡಿದ್ದರು. ಅದರನ್ವಯ ತೀರ್ಪು ಹೊರಬಿದ್ದಿದೆ.
ಕೆಂಗೇರಿ ಹೋಬಳಿ ವ್ಯಾಪ್ತಿಯ ರಾಮಸಂದ್ರ ಗ್ರಾಮದ ಸರ್ವೆ ನಂಬರ್ 100/2ರಲ್ಲಿನ ರೈತರ 4 ಎಕರೆ 30 ಗುಂಟೆ ಕೃಷಿ ಜಮೀನನ್ನು ಕ್ರಯಕ್ಕೆ ಪಡೆದಿದ್ದರು. ಭೂ ಪರಿವರ್ತನೆ ಮಾಡದೆ ಸೈಟ್ ಮಾಡಿ ಮಾರಾಟ ಆರೋಪ ಇದೆ. ಕಾವ್ಯಶ್ರೀ ಅವರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ. ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಭೆ; ಸದನದಲ್ಲಿ ಶಾಸಕ ನಾಗೇಂದ್ರ – ಜನಾರ್ದನ ರೆಡ್ಡಿ ನಡುವೆ ಮಾತಿನ ʻಫೈರಿಂಗ್ʼ

