– ಕಾಂಗ್ರೆಸ್ ಸಚಿವರಿಗೆ ಬಿಜೆಪಿ ಮಾಜಿ ಶಾಸಕ ತಿರುಗೇಟು
ಕಲಬುರಗಿ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತಲ್ವಾರ್ (Talwar Fight) ಪಾಲಿಟಿಕ್ಸ್ ಜೋರಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಲ್ವಾರ್ ಹಿಡಿದಿರುವ ಫೋಟೊ ಹಂಚಿಕೊಂಡು ಬಿಜೆಪಿ ಮಾಜಿ ಶಾಸಕ ಟಾಂಗ್ ಕೊಟ್ಟಿದ್ದಾರೆ.
ನಿನ್ನೆ ಬಿಜೆಪಿ ಕಲಬುರಗಿಯ ಸೇಡಂ ಮಾಜಿ ಶಾಸಕರ ಸಹೋದರ ಕಾರ್ಯಕರ್ತನ ಹುಟ್ಟುಹಬ್ಬದಲ್ಲಿ ತಲ್ವಾರ್ ಪ್ರದರ್ಶನ ಬಗ್ಗೆ ಸಚಿವ್ ಪ್ರಿಯಾಂಕ್ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಇದಕ್ಕೆ ಕೌಂಟರ್ ಎಂಬಂತೆ ಸೇಡಂ ಮಾಜಿ ಶಾಸಕ ರಾಜಕುಮಾರ್ ತೇಲ್ಕೂರ್, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಡಾ.ಅಜಯ್ ಸಿಂಗ್ ತಲ್ವಾರ್ ಹಿಡಿದ ಫೋಟೊ ಬಿಡುಗಡೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ದೇಶದಲ್ಲೇ 3ನೇ ಶ್ರೀಮಂತ ಸಿಎಂ – ನಂಬರ್ ಒನ್ ಯಾರು?
ಬಿಜೆಪಿಯ ಮಾಜಿ ಶಾಸಕ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ ಅವರ ಸಹೋದರ ಜಿ ಬಿ ಪಾಟೀಲ್ ತಲ್ವಾರ್ ನಿಂದ ಕೇಕ್ ಕತ್ತರಿಸಿ ವಿಜೃಂಭಣೆ ನಡೆಸಿದ್ದಾರೆ, ಇದು “ಕಲಬುರಗಿ ರಿಪಬ್ಲಿಕ್“ ಮಾಡುವ ಪ್ರಯತ್ನವೇ?
ಬಿಜೆಪಿಗರ ಪ್ರಕಾರ ಇದು ಗೂಂಡಾಗಿರಿಯ ವ್ಯಾಪ್ತಿಗೆ ಬರುವುದಿಲ್ಲವೇ?
ಕಲಬುರಗಿ ರಿಪಬ್ಲಿಕ್ ಎನ್ನುತ್ತಿದ್ದ ಬೆಂಗಳೂರಿನ ಬಿಜೆಪಿ ನಾಯಕರು ತಮ್ಮದೇ… pic.twitter.com/3tESNb2hOA
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 30, 2024
‘ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ. ಇವರು ಏನು ಮಾಡಿದ್ರು ನಡೆಯುತ್ತೆ. ಬೇರೆಯವರು ಮಾಡಿದ್ರೆ ಮಾತ್ರ ಸಂವಿಧಾನ, ಕಾನೂನು ಬೊಗಳೆ ಬಿಡೋದು’ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಯ ಮಾಜಿ ಶಾಸಕ ರಾಜ್‌ಕುಮಾರ್ ಪಾಟೀಲ್ ತೇಲ್ಕೂರ್ ಅವರ ಸಹೋದರ ಜಿ.ಬಿ.ಪಾಟೀಲ್ ತಲ್ವಾರ್‌ನಿಂದ ಕೇಕ್ ಕತ್ತರಿಸಿ ವಿಜೃಂಭಣೆ ನಡೆಸಿದ್ದಾರೆ. ಇದು ‘ಕಲಬುರಗಿ ರಿಪಬ್ಲಿಕ್’ ಮಾಡುವ ಪ್ರಯತ್ನವೇ? ಬಿಜೆಪಿಗರ ಪ್ರಕಾರ ಇದು ಗೂಂಡಾಗಿರಿಯ ವ್ಯಾಪ್ತಿಗೆ ಬರುವುದಿಲ್ಲವೇ? ಕಲಬುರಗಿ ರಿಪಬ್ಲಿಕ್ ಎನ್ನುತ್ತಿದ್ದ ಬೆಂಗಳೂರಿನ ಬಿಜೆಪಿ ನಾಯಕರು ತಮ್ಮದೇ ಪಕ್ಷದವರ ಈ ಕುಕೃತ್ಯಕ್ಕೆ ಯಾವ ಸಮಜಾಯಿಷಿ ನೀಡುತ್ತಾರೆ? ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರವನ್ನು ಕಾಲಿನ ಸಮದಲ್ಲಿಟ್ಟು ಅಂಬೇಡ್ಕರ್ ವಿರೋಧಿ ಅಮಿತ್ ಶಾ ಅವರನ್ನು ಮೆಚ್ಚಿಸುವ ಪ್ರಯತ್ನವೇ? ಇದನ್ನೂ ಓದಿ: ಪಿಎಂ ಮೋದಿ ಪ್ರಧಾನ ಕಾರ್ಯದರ್ಶಿಯ ಅಳಿಯ, ಮಗಳ ಸೋಗಿನಲ್ಲಿ ವಂಚನೆ – ಓಡಿಶಾ ದಂಪತಿ ಅರೆಸ್ಟ್
ಡಾ. ಅಂಬೇಡ್ಕರ್ ಅವರ ಫೋಟೋ ಕಾಲ ಕೆಳಗಿಟ್ಟುಕೊಂಡು ತಲ್ವಾರ್ ಹಿಡಿದು ಕೇಕೆ ಹಾಕುತ್ತಿರುವ ಬಿಜೆಪಿಗರು ಗೂಂಡಾಗಿರಿ ಪ್ರದರ್ಶಿಸಿರುವುದಲ್ಲದೆ ಬಾಬಾ ಸಾಹೇಬರ ಘನತೆಗೆ ಚ್ಯುತಿ ತಂದಿದ್ದಾರೆ. ಈ ಕೃತ್ಯಕ್ಕೆ ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಾರಾ ಅಥವಾ ಇಂತಹ ಘೋರ ಅಪರಾಧ ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತಾರಾ? ಇದಕ್ಕಾಗಿ ಒಂದು ಸತ್ಯ ಶೋಧನ ಸಮಿತಿ ರಚಿಸಿಕೊಂಡು, ನಕಲಿ ಅಂಬೇಡ್ಕರ್ ವಾದಿಗಳಾದ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರ ಜೊತೆಗೆ ಯಾವಾಗ ಕಲಬುರ್ಗಿಗೆ ಬರುತ್ತೀರಿ ಬಿ.ವೈ.ವಿಜಯೇಂದ್ರ ಅವರೇ ಎಂದು ಟೀಕಿಸಿದ್ದರು.