ಬೆಂಗಳೂರು: ಜಾತಿ ಹೆಸರೇಳಿ ಮತದಾರರ ಮೇಲೆ ಪ್ರಭಾವ ಹಾಗೂ ದುರ್ಬಳಕೆ ಆರೋಪ ಹೊರಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ವಿರುದ್ಧ ಚುನಾವಣಾಧಿಕಾರಿಗಳಿಗೆ ಬಿಜೆಪಿ (BJP) ದೂರು ನೀಡಿದೆ.
ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (Ashwath Narayan) ನೇತೃತ್ವದಲ್ಲಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ಇದೇ ವೇಳೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಹಂಚಿಕೆಯ ಬಗ್ಗೆಯೂ ದೂರು ನೀಡಲಾಗಿದೆ. ಇದನ್ನೂ ಓದಿ: ಮೈತ್ರಿ ಒಕ್ಕಲಿಗ ನಾಯಕರ ಶಕ್ತಿಪ್ರದರ್ಶನ- ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ ದೋಸ್ತಿ ನಾಯಕರು!
Advertisement
Advertisement
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡಿದ್ದರು. ಮೈತ್ರಿ ನಾಯಕರ ಭೇಟಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಒಕ್ಕಲಿಗ ಸ್ವಾಮೀಜಿ ದಡ್ಡರಲ್ಲ- ಮೈತ್ರಿ ನಾಯಕರು ನಿರ್ಮಲಾನಂದ ಶ್ರೀಗಳ ಭೇಟಿಗೆ ಡಿಕೆಶಿ ಆಕ್ಷೇಪ
Advertisement
Advertisement
ಒಕ್ಕಲಿಗರ ಸರ್ಕಾರವನ್ನು ಬಿಜೆಪಿಯವರೇ ಬೀಳಿಸಿದ್ದು, ಅದನ್ನು ಕೇಳುವ ಶಕ್ತಿ ಸ್ವಾಮೀಜಿ ಅವರಿಗೆ ಇದೆಯೋ ಇಲ್ವೊ ನನಗೆ ಗೊತ್ತಿಲ್ಲ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಡಿಸಿಎಂ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ. ಇದನ್ನೂ ಓದಿ: ಶ್ರೀಗಳ ಬಗ್ಗೆ ಮಾತಾಡೋಕೆ ಡಿಕೆಶಿಗೆ ನೈತಿಕತೆ ಇಲ್ಲ: ಅಶೋಕ್ ವಾಗ್ದಾಳಿ