ಬೆಳಗಾವಿ: ಕಾಂಗ್ರೆಸ್ ಪ್ರತಿಭಟನೆಗೂ ಮೊದಲೇ ಸರ್ಕಾರ ಬೆದರಿತಾ ಎಂಬ ಪ್ರಶ್ನೆಯೊಂದು ಎದ್ದಿದೆ.
ಕಾಂಗ್ರೆಸ್ ಪ್ರತಿಭಟನೆ ಅಸ್ತ್ರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಕೊರೊನಾ ರೂಲ್ಸ್ ಬ್ರೇಕ್ ಮಾಡಿದ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ವಿರುದ್ಧ ಕೇಸ್ ದಾಖಲಿಸಿದೆ.
Advertisement
Advertisement
ವೀಕೆಂಡ್ ಕರ್ಫ್ಯೂ ಮಧ್ಯೆಯೂ ಧರ್ಮವೀರ ಸಂಭಾಜಿ ಪಟ್ಟಾಭಿಷೇಕ ದಿನಾಚರಣೆಯಲ್ಲಿ ಅನಿಲ್ ಬೆನಕೆ ಭಾಗಿಯಾಗಿದ್ದರು. ಜನವರಿ 16ರಂದು ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಮಾಸ್ಕ್ ಹಾಕದೇ ಒಂದೇ ಕಡೆ 20ಕ್ಕೂ ಹೆಚ್ಚು ಜನರು ಜಮಾವಣೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅನಿಲ್ ಬೆನಕೆ ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ನಾನು ಮಾಸ್ಕ್ ಹಾಕಲ್ಲ : ಸಚಿವ ಉಮೇಶ್ ಕತ್ತಿ
Advertisement
Advertisement
ಸಂಭಾಜಿ ಪಟ್ಟಾಭಿಷೇಕ ದಿನಾಚರಣೆಯಲ್ಲಿ ರೂಲ್ಸ್ ಬ್ರೇಕ್ ಮಾಡಿ ಭಾಗಿಯಾದ ಹಿನ್ನೆಲೆಯಲ್ಲಿ ಶಾಸಕರ ಮೇಲೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಎಮ್ಮೆ ಓಡಿಸುವ ಸ್ಪರ್ಧೆಯ ಆಯೋಜಕರ ವಿರುದ್ಧವೂ ಕೇಸ್ ದಾಖಲು ಮಾಡಲಾಗಿದೆ. ಶಾಸಕರು ಸ್ಪರ್ಧೆಗೆ ಚಾಲನೆ ನೀಡಿದ್ದರು.