ಬೆಂಗಳೂರು: ಕೊನೆಗೂ ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಶ್ವಥ್ ನಾರಾಯಣ ಆಯ್ಕೆಯಾಗಿದ್ದಾರೆ.
ಅಳೆದೂ ತೂಗಿ ಅಭ್ಯರ್ಥಿ ಹಾಕಿರುವ ಕೇಸರಿ ಪಾಳಯ ಮಗಳಿಗೆ ಟಿಕೆಟ್ ನೀಡುವಂತೆ ಕೇಳಿದ್ದ ಸಿ.ಪಿ ಯೋಗೇಶ್ವರ್ ಬೇಡಿಕೆಯನ್ನ ತಳ್ಳಿ ಹಾಕಿದೆ. ಅಷ್ಟೇ ಅಲ್ಲದೇ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಅವರಿಗೂ ಟಿಕೆಟ್ ನಿರಾಕರಿಸಿದೆ.
Advertisement
Advertisement
ಇಬ್ಬರ ನಡುವಿನ ಜಟಾಪಟಿಯಲ್ಲಿ ಮೂರನೇಯವನಿಗೆ ಲಾಭ ಎನ್ನುವಂತೆ ಅಶ್ವಥ್ ನಾರಾಯಣಗೆ ಬಿಜೆಪಿ ಮಣೆ ಹಾಕಿದೆ. ಇನ್ನೂ ಇಂದು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿರುವುದರಿಂದ ಮಧ್ಯಾಹ್ನ ಅಶ್ವಥ್ ನಾರಾಯಣ್ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.
Advertisement
ಈ ಹಿಂದೆಯೇ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರು ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಾವು ಸುತಾರಾಂ ಸಿದ್ಧವಿಲ್ಲ. ತಮಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಇಷ್ಟವಿಲ್ಲ. ಕ್ಷೇತ್ರದ ಟಿಕೆಟ್ ನೀಡುವುದಾದರೆ ನನ್ನ ಮಗಳಿಗೆ ಕೊಡಿ. ಇಲ್ಲವಾದರೆ ಬೇರೆ ಯಾರಿಗಾದ್ರೂ ಕೊಡಿ ತಮ್ಮ ಅಭ್ಯಂತರ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.
Advertisement