ಜನ ಆಶೀರ್ವಾದ ಮಾಡಿದ್ದಾರೆ, ಕಾಂಗ್ರೆಸ್‌ ಸರ್ಕಾರ 5 ವರ್ಷ ನಡೆಯಲಿ – ಶ್ರೀರಾಮುಲು

Public TV
2 Min Read
Sriramulu 1

ಕೋಲಾರ: ರಾಜ್ಯದ ಜನ ಕಾಂಗ್ರೆಸ್‌ಗೆ (Congress) ಹೆಚ್ಚಿನ ಸಂಖ್ಯೆಯಲ್ಲಿ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ನಡೆಯಲಿ ಬಿಡಿ. ಸರ್ಕಾರಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದು ಬಿಜೆಪಿ ಮಾಜಿ ಸಚಿವ ಶ್ರೀರಾಮುಲು (Sriramulu) ಹೇಳಿದ್ದಾರೆ.

ಕೋಲಾರದ (Kolar) ಮುಳಬಾಗಿಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ (Lok Sabha Elections) ನಂತರ ಕಾಂಗ್ರೆಸ್‌ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸರ್ಕಾರ ಬೀಳುತ್ತೆ ಅನ್ನೋದನ್ನ ನಾನು ಒಪ್ಪಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ನಡಿಯಲಿ ಬಿಡಿ. ಇನ್ನೂ ಯಾವುದೇ ಆಪರೇಷನ್ ಕಮಲ ಮಾಡುವುದಕ್ಕೆ ಹೋಗುವುದಿಲ್ಲ, ಬಹುಮತದೊಂದಿಗೆ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದು ನುಡಿದಿದ್ದಾರೆ.

DK SHIVAKUMAR 1 1

ಡಿಕೆಶಿ ಸಿಬಿಐ ಕೇಸ್‌ ವಾಪಸ್‌ ವಿಚಾರ ಕುರಿತು ಮಾತನಾಡಿದ ಅವರು, ಸಿಬಿಐ ತನಿಖೆ (CBI Investigation) ಆಗಬೇಕಿದ್ದ ಡಿಕೆ ಶಿವಕುಮಾರ್ ಅವರ ಪ್ರಕರಣವನ್ನ ಕ್ಯಾಬಿನೆಟ್‌ ವಾಪಸ್ ಪಡೆಯಲು ಅನುಮತಿ ನೀಡಿರುವುದು ನಮಗೆ ಭಯವಾಗಿದೆ. ಸರ್ಕಾರವನ್ನ ಬೊಂಬೆಯಂತೆ ಅವರು ನಡೆಸಿಕೊಳ್ಳುತ್ತಿದ್ದು, ಸರ್ಕಾರವೇ ಅವರಿಗೆ ತಲೆಬಾಗಿದೆಯಾ ಅನ್ನೋ ಪ್ರಶ್ನೆ ಮೂಡಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ವೈರಸ್; ಆಸ್ಪತ್ರೆಗಳಲ್ಲಿ ತುರ್ತುಕ್ರಮ ಪರಿಶೀಲಿಸುವಂತೆ ರಾಜ್ಯಗಳಿಗೆ ಖಡಕ್‌ ವಾರ್ನಿಂಗ್‌

ಡಿಕೆಶಿ ಅವರಿಗೆ ಕಾನೂನಿನ ಬಗ್ಗೆ ಗೌರವ ಇದ್ದಿದ್ದರೇ, ಪ್ರಕರಣದಿಂದ ನ್ಯಾಯಯುತವಾಗಿ ಹೊರಬರುವ ವಿಶ್ವಾಸ ಇದ್ದಿದ್ದರೇ ಈ ರೀತಿಮಾಡುತ್ತಿರಲಿಲ್ಲ. ಕ್ಯಾಬಿನೆಟ್ ನಲ್ಲಿ ಈ ರೀತಿಯ ವಿಚಾರಗಳೇ ಚರ್ಚೆಗೆ ಬರುವುದಿಲ್ಲ. ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಇಂತಹ ವಿಷಯ ಚರ್ಚೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

BJP Congress

ಇದೇ ವೇಳೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ಬಗ್ಗೆ ಹಿರಿಯ ನಾಯಕರಲ್ಲಿ ಅಸಮಾಧಾನ ವ್ಯಕ್ತವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಹಿರಿಯರು ಸೇರಿ ವಿಜಯೇಂದ್ರ ಅವರಿಗೆ ಅಧಿಕಾರ ಕೊಟ್ಟಿದ್ದಾರೆ, ಹೀಗಾಗಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಪಕ್ಷ ಮುನ್ನಡೆಸುವ ಕೆಲಸ ಮಾಡುತ್ತೇವೆ. ಅಸಮಾಧಾನ ಆಗಿರುವ ಯತ್ನಾಳ್ ಸೋಮಣ್ಣ ಅವರೂ ಸಮಧಾನ ಆಗುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಲಕಿಯ ಅಚ್ಚರಿ ಬದುಕು- 14 ವರ್ಷದಿಂದ ಕೇವಲ ಬೆಲ್ಲ, ಹಾಲು ಸೇವಿಸ್ತಿದ್ದಾಳೆ ಈಕೆ!

ಇನ್ನೂ ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಸೇರುವ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ. ಅವರು ಪಕ್ಷಕ್ಕೆ ಬರುವುದರಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ನನ್ನ ಅವರ ಮಧ್ಯೆ ಇರುವುದು ವೈಯಕ್ತಿಕ. ಆದ್ರೆ ರಾಜಕೀಯವಾಗಿ ನನ್ನ ಅವರ ನಡುವೆ ಏನೂ ದ್ವೇಷವಿಲ್ಲ ಎಂದು ತಿಳಿಸಿದ್ದಾರೆ.

Share This Article