ಮಹಾರಾಷ್ಟ್ರದಲ್ಲಿ ಮೈತ್ರಿ ಮಾತುಕತೆ ಯಶಸ್ವಿ – 13 ಸೀಟು ಶಿಂಧೆ ಬಣಕ್ಕೆ, 4 ರಲ್ಲಿ ಎನ್‌ಸಿಪಿ ಸ್ಪರ್ಧೆ

Public TV
1 Min Read
ajit pawar maharashtra

ಮುಂಬೈ: ಹಲವು ದಿನಗಳ ತೀವ್ರ ಚರ್ಚೆಯ ನಂತರ ಮಹಾರಾಷ್ಟ್ರದಲ್ಲಿ (Maharashtra) ಬಿಜೆಪಿ, ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನೆ (Shiv Sena) ಮತ್ತು ಅಜಿತ್ ಪವಾರ್ (Ajit Pawar) ಅವರ ಎನ್‌ಸಿಪಿ ಒಳಗೊಂಡಿರುವ ಮೈತ್ರಿಯು ತಮ್ಮ ಸೀಟು ಹಂಚಿಕೆ ಮಾತುಕತೆ ಮುಗಿಸಿವೆ.

ಎನ್‌ಡಿಎ (NDA) ಮೈತ್ರಿಕೂಟದ ಅಜಿತ್ ಪವಾರ್ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸುವ ನಾಲ್ಕು ಕ್ಷೇತ್ರಗಳನ್ನು ಪಡೆದುಕೊಂಡಿದ್ದಾರೆ. ಶರದ್ ಪವಾರ್ ಅವರ ಸೋದರಳಿಯ ಮತ್ತು ನಿಜವಾದ ಎನ್‌ಸಿಪಿಯ ನಾಯಕ, ಬಾರಾಮತಿ, ರಾಯ್‌ಗಢ, ಶಿರೂರು ಮತ್ತು ಪರ್ಭಾನಿ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ 31 ಸ್ಥಾನಗಳನ್ನು ಪಡೆದರೆ, ಶಿವಸೇನೆ 13 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಇದನ್ನೂ ಓದಿ: ನೀರಿನ ಅಭಾವದ ಮಧ್ಯೆಯೂ ನೀರಿನ ನಿರ್ವಹಣೆಯಲ್ಲಿ ದೇಶದಲ್ಲೇ ಬೆಂಗಳೂರು ನಂ.2

NARENDRA MODI 1

ಬಾರಾಮತಿಯು ಪವಾರ್‌ ಅವರ ಭದ್ರಕೋಟೆಯಾಗಿದೆ. ಹತ್ತಾರು ವರ್ಷಗಳಿಂದ ಅವರ ಕುಟುಂಬದವರೇ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುತ್ತಿದ್ದರು. ಆದರೆ ಅಜಿತ್ ಪವಾರ್ ಬಂಡಾಯವೆದ್ದು ಪಕ್ಷ ಮತ್ತು ಅದರ ಬೆಂಬಲಿಗರನ್ನು ವಿಭಜಿಸಿದ್ದಾರೆ. ಈಗ ಕುಟುಂಬ ಸದಸ್ಯರ ನಡುವೆಯೇ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ಬಾರಾಮತಿಯಿಂದ ಹಾಲಿ ಸಂಸದೆ ಮತ್ತು ಅಜಿತ್ ಪವಾರ್ ಅವರ ಸೋದರ ಸಂಬಂಧಿ ಸುಪ್ರಿಯಾ ಸುಳೆ ಅವರು ತಮ್ಮ ಅತ್ತಿಗೆ ಮತ್ತು ಅಜಿತ್‌ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಕ್ಕೆ ಟಿಕೆಟ್ ಕೊಡ್ತಿಲ್ಲ: ಸಿದ್ದರಾಮಯ್ಯ

 

ಇದುವರೆಗಿನ ಸೀಟು ಹಂಚಿಕೆ ಮಾತುಕತೆಯಲ್ಲಿ ರಾಜ್ಯದ 48 ಸ್ಥಾನಗಳ ಪೈಕಿ 31ರಲ್ಲಿ ಬಿಜೆಪಿ, 13ರಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ನಾಲ್ಕರಲ್ಲಿ ಅಜಿತ್ ಪವಾರ್ ಅವರ ಎನ್‌ಸಿಪಿ ಸ್ಪರ್ಧಿಸಲಿದೆ.

Share This Article