ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಬಿಜೆಪಿ (BJP) ಇಂದು (ಶನಿವಾರ) ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಬೃಹತ್ ಪ್ರತಿಭಟನೆ (Protest) ಹಮ್ಮಿಕೊಂಡಿತ್ತು. ಬೆಂಗಳೂರಿನಲ್ಲೂ (Bengaluru) ಫ್ರೀಡಂಪಾರ್ಕ್‌ನಲ್ಲಿ (Freedom Park) ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಕೂಡಾ ಬಿಜೆಪಿ ತನ್ನ ಹೋರಾಟ ಮುಂದುವರೆಸಿತ್ತು. ಅಧಿವೇಶನದಲ್ಲಿ (Session) ಶಾಸಕರು ಆರಂಭಿಸಿದ್ದ ಪ್ರತಿಭಟನೆ ಇಂದು ಜಿಲ್ಲಾ ಮಟ್ಟದಲ್ಲೂ ಪ್ರತಿಧ್ವನಿಸಿತು. ಬೆಂಗಳೂರಿನಲ್ಲೂ ಉತ್ತರ ಮತ್ತು ಕೇಂದ್ರ ಜಿಲ್ಲೆಗಳ ಬಿಜೆಪಿ ಘಟಕಗಳ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನಾಕಾರರು ಧಿಕ್ಕಾರ ಘೋಷಣೆಗಳನ್ನು ಮೊಳಗಿಸಿದರು. ಇದನ್ನೂ ಓದಿ: ಆಲ್ಕೋಹಾಲಾದರೇನು? ಹಾಲಾದರೇನು? ಖಜಾನೆ ತುಂಬಬೇಕಷ್ಟೇ – ಬೆಲೆ ಏರಿಕೆ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ
Advertisement
Advertisement
ಶಿಷ್ಟಾಚಾರ ಉಲ್ಲಂಘನೆ, ಶಾಸಕರ ಅಮಾನತು ಕ್ರಮ, ಅಸಮರ್ಪಕ ಕಾನೂನು ಸುವ್ಯವಸ್ಥೆ, ವರ್ಗಾವಣೆ ದಂಧೆಗಳ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದರು. ಸ್ಪೀಕರ್ ವಿರುದ್ಧ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್ (C.N.Ashwath Narayan), ಖಾದರ್ (U.T.Khader) ಅವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸದಸ್ಯರ ಹಕ್ಕಗಳನ್ನು ದಮನ ಮಾಡಿ, ಶಾಸಕರನ್ನು ಅಮಾನತು ಮಾಡಿ ತಮ್ಮ ಮೊದಲ ಅಧಿವೇಶನದಲ್ಲಿ ಸದನದ ಗೌರವ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಆ.1 ರಿಂದ ಹಾಲಿನ ದರ 3 ರೂ. ಹೆಚ್ಚಳ- ಯಾವುದಕ್ಕೆ ಎಷ್ಟು?
Advertisement
ಅವರು ನಮ್ಮ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನವರು ವಚನ ಭ್ರಷ್ಟರು. ರಾಜ್ಯದ ಜನತೆಗೆ ಮೋಸ ಮಾಡಿದವರು ಕಾಂಗ್ರೆಸ್‌ನವರು. ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ್ ಕೊಲೆ ಪ್ರಕರಣದಲ್ಲಿ ಸುನೀಲ್ ಬೋಸ್ ಬೆಂಬಲಿಗರ ಕೈವಾಡ ಇದೆ. ತನಿಖೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ನನಗೆ ಸಿಎಂ ಆಯ್ಕೆ ಮಾಡೋದು, ಇಳಿಸೋದು ಬಹಳ ಚೆನ್ನಾಗಿ ಗೊತ್ತಿದೆ: ಹರಿಪ್ರಸಾದ್ ಪರೋಕ್ಷ ವಾಗ್ದಾಳಿ
Advertisement
ಮತ್ತೊಬ್ಬ ಎಮ್‌ಎಲ್‌ಸಿ ಛಲವಾದಿ ನಾರಾಯಣಸ್ವಾಮಿ (Chalavadi Nrayanaswami) ಮಾತನಾಡಿ, ಸ್ಪೀಕರ್ ಖಾದರ್ ಒಬ್ಬ ಅವಿವೇಕಿ. ಅವರ ಅವಿವೇಕತನದಿಂದ ಸದನದಲ್ಲಿ ಗಲಾಟೆ ಆಯಿತು. ಇದೊಂದು ಬದನೇಕಾಯಿ ಸರ್ಕಾರ. ಸ್ಪೀಕರ್ ಹುದ್ದೆಯಲ್ಲಿ ಖಾದರ್ ಅವರನ್ನು ಕೂರಿಸಿ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ ಆಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ನಂದೂ, ಸಿದ್ದರಾಮಯ್ಯದೂ ಫೋಟೋ ಜೊತೆಲೇ ಬರೋ ಹಾಗೆ ಮಾಡ್ರಯ್ಯ: ಡಿಸಿಎಂ
ಎಮ್‌ಎಲ್‌ಸಿ ರವಿಕುಮಾರ್ (Ravikumar) ಮಾತನಾಡಿ, ಸಿದ್ದರಾಮಯ್ಯರಿಗೆ (Siddaramaiah) ನಿಜವಾಗಿಯೂ ದಲಿತರ ಮೇಲೆ ಪ್ರೀತಿ, ಪ್ರೇಮ ಇದ್ರೆ ಜಿ.ಪರಮೇಶ್ವರ್ (G.Parameshwara) ಅಥವಾ ಮಲ್ಲಿಕಾರ್ಜುನ ಖರ್ಗೆಗೆ (Mallikarjun Kharge) ಸಿಎಂ ಪೋಸ್ಟ್ ಬಿಟ್ಟುಕೊಡಲಿ ನೋಡೋಣ ಎಂದು ತಿವಿದರು. ಪ್ರತಿಭಟನೆಯಲ್ಲಿ ಶಾಸಕ ಸಿ.ಕೆ ರಾಮಮೂರ್ತಿ, ಪ್ರತಾಪ್ ಸಿಂಹ ನಾಯಕ್, ಕೇಶವ ಪ್ರಸಾದ್ ಸೇರಿದಂತೆ ಹಲವು ನಾಯಕರು, ಮಾಜಿ ಕಾರ್ಪೋರೇಟರ್‌ಗಳು ಭಾಗವಹಿಸಿದ್ದರು. ಇದನ್ನೂ ಓದಿ: ಮಹಿಳೆಯರ ಭದ್ರತೆ ಬಗ್ಗೆ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಕ್ಕೆ ಸಚಿವ ರಾಜೇಂದ್ರ ಗುಧಾ ವಜಾ
Web Stories