ಹೈದರಾಬಾದ್: ಲೋಕಸಭೆ ಚುನಾವಣೆಗೂ ಮುನ್ನ ದೇಶದಲ್ಲಿ ಯುದ್ಧ ಆಗಲಿದೆ ಎಂದು 2 ವರ್ಷಗಳ ಹಿಂದೆಯೇ ಮಾಹಿತಿ ಇತ್ತು ಎಂದಿದ್ದ ಆಂಧ್ರಪ್ರದೇಶ ಜನಸೇನಾ ಪಕ್ಷದ ಸಂಸ್ಥಾಪಕ, ನಟ ಪವನ್ ಕಲ್ಯಾಣ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಆಂಧ್ರದ ಕಡಪ ಜಿಲ್ಲೆಯ ಸಾರ್ವಜನಿಕ ಸಮಾರಂಭದ ವೇಳೆ ಪವನ್ ಕಲ್ಯಾಣ್ ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಂದಿಗ್ಧ ಸ್ಥಿತಿಯ ಬಗ್ಗೆ ಮಾತನಾಡಿದ್ದರು. ಈ ವೇಳೆ ಬಿಜೆಪಿ ನನಗೆ 2 ವರ್ಷದ ಹಿಂದೆಯೇ ಯುದ್ಧದ ಬಗ್ಗೆ ಹೇಳಿತ್ತು ಎಂದಿದ್ದರು. ಪವನ್‍ರ ಈ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಲು ಕಾರಣವಾಗಿತ್ತು.
ಈ ಹೇಳಿಕೆ ಬೆನಲ್ಲೇ ಸ್ಪಷ್ಟನೆ ನೀಡಿರುವ ಪವನ್ ಕಲ್ಯಾಣ್, ದೇಶದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂಬ ಬಗ್ಗೆ ಕೆಲ ತಜ್ಞರು ತಮ್ಮ ವರಿದಿಗಳ ಮೂಲಕ ತಿಳಿಸುತ್ತಾರೆ. ಇಂತಹದ್ದೇ ರಾಜಕೀಯ ವಿಶ್ಲೇಷಣೆ ವೇಳೆ ಮಾಹಿತಿ ನನಗೆ ಹೇಳಿದ್ದರು. ಅಲ್ಲದೇ ಆರ್ಥಿಕತೆಯ ಬಗ್ಗೆಯೂ ಇಂತಹದ್ದೇ ಮಾಹಿತಿ ನೀಡಲಾಗುತ್ತದೆ. ನನಗೆ ಬಿಜೆಪಿ ಈ ಮಾತು ಹೇಳಿಲ್ಲ ಎಂದಿದ್ದಾರೆ.
ಯುದ್ಧದ ಬಗ್ಗೆ ಕೆಲವರು ದೇಶದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ವಿಶ್ಲೇಷಣೆ ಮಾಡಿ ಭವಿಷ್ಯ ಹೇಳುತ್ತಾರೆ. 2 ವರ್ಷಗಳ ಹಿಂದೆಯೇ ಯುದ್ಧ ಬರುತ್ತದೆ ಎಂದು ಕೆಲ ವರದಿಗಳು ಬಂದಿದೆ. ನೀವು ಕೂಡ ಅವುಗಳನ್ನು ಓದಿದರೆ ತಿಳಿಯುತ್ತದೆ. ಯುದ್ಧದ ಬಗ್ಗೆ ನಾನು ಎಂದು ಭವಿಷ್ಯ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv