ಭೋಪಾಲ್: ಪೌರ ಕಾರ್ಮಿಕರ (Civic Staff) ಗುಂಪೊಂದು ರಾವು (Rau) ಪುರಸಭೆಯ (Municipality) ಬಿಜೆಪಿ ಕಾರ್ಪೊರೇಟರ್ ಪತಿಗೆ ಪೊಲೀಸ್ ಠಾಣೆಯಲ್ಲಿ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ (MadhyaPradesh) ನಡೆದಿದೆ.
ಇದೀಗ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಧ್ಯಾಹ್ನ ಪೊಲೀಸ್ ಠಾಣೆಗೆ ಆಗಮಿಸಿದ ಪೌರಕಾರ್ಮಿಕರ ಗುಂಪು ಸಂದೀಪ್ ಚೋಹಾನ್ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳಾ ಪೌರ ಕಾರ್ಮಿಕರಿಗೆ ದೂರವಾಣಿಯಲ್ಲಿ ನಿಂದಿಸಿದ ಆರೋಪದಡಿ ಸಂದೀಪ್ ಚೋಹಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ರೇಪ್ ಮಾಡಿ ಬಾಲಕಿಯನ್ನು ಹತ್ಯೆಗೈದ – ಕಾಮುಕ ಕಾಂತರಾಜು ಗಲ್ಲಿಗೆ ಆಗ್ರಹ
Advertisement
Advertisement
ಸಂದೀಪ್ ಚೋಹನ್ ಅವರ ಪತ್ನಿ ಪುರಸಭೆಯ ವಾರ್ಡ್ ಸಂಖ್ಯೆ 13 ರಲ್ಲಿ ಕಾರ್ಪೊರೇಟರ್ ಆಗಿದ್ದಾರೆ. ಎರಡೂ ಗುಂಪುಗಳ ನಡುವೆ ರಾಜಿ ಸಂಧಾನ ಮಾಡಲು ಪೊಲೀಸರು ಸಂದೀಪ್ ಚೋಹನ್ ಹಾಗೂ ಪೌರ ಕಾರ್ಮಿಕರನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ಕೆಲವು ಮಂದಿ ಸಂದೀಪ್ ಚೋಹನ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಎರಡೂ ಕಡೆಯವರು ಪರಸ್ಪರ ಹಲ್ಲೆ ಮತ್ತು ಬೆದರಿಕೆಯ ದೂರುಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹರೀಶ್ ಪೂಂಜಾ ಕಾರನ್ನು ಅಡ್ಡಗಟ್ಟಿ ತಲವಾರು ಝಳಪಿಸಿ ದುಷ್ಕರ್ಮಿಯಿಂದ ಜೀವ ಬೆದರಿಕೆ