ಚಿಕ್ಕಮಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಹುಕ್ಕಾ ಬಾರ್ ತೆರೆಯಿರಿ, ನೆಹರೂ ಹುಕ್ಕಾ ಸೇದುತ್ತಿದ್ದರು, ಅದರ ನೂರಾರು ಫೋಟೋಗಳಿವೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಯಿಂದ ಕೆಂಡವಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಇಂದು ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
Advertisement
ಸಿ.ಟಿ.ರವಿ ಮನೆ ಸುತ್ತಲೂ ಎಲ್ಲಾ ರಸ್ತೆಗಳಲ್ಲೂ ಬ್ಯಾರಿಕೇಡ್ ನಿರ್ಮಿಸಿದ್ದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯಿಂದ ಹೊರಬರುತ್ತಿದ್ದಂತೆ ಬಂಧಿಸಿದರು. ಕಳೆದ ಎಂಟತ್ತು ದಿನಗಳಿಂದ ದಿವಂಗತ ರಾಷ್ಟ್ರೀಯ ನಾಯಕರ ಹೆಸರಿನಿಂದ ಕಾಂಗ್ರೆಸ್-ಬಿಜೆಪಿ ಮಧ್ಯೆ ಮಾತಿನ ಸಮರ ನಡೆಯುತ್ತಿತ್ತು. ಕಾಂಗ್ರೆಸ್ ಕಚೇರಿಯಲ್ಲಿ ಹುಕ್ಕಾ ಬಾರ್ ತೆರೆಯಿರಿ, ನೆಹರೂ ಹುಕ್ಕಾ ಸೇದುತ್ತಿರುವ ನೂರಾರು ಫೋಟೋಗಳಿವೆ. ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡಿ ಎಂದು ಸಿ.ಟಿ.ರವಿ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ತಂದೆ ಯಾರೆಂದು ಅನುಮಾನ ಇರೋರು ಸಾವರ್ಕರ್ ಯಾರೆಂದು ಕೇಳುತ್ತಾರೆ: ಸಿ.ಟಿ.ರವಿ
Advertisement
Advertisement
ವೀರ ಸಾವರ್ಕರ್ ವೀರನೇ ಅಲ್ಲ. ವಾಜಪೇಯಿಗೆ ಡೈಲಿ ಎರಡು ಪೆಗ್ ಬೇಕಿತ್ತಂತೆ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿದ್ದರು. ಇದರಿಂದಾಗಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ದಿವಂಗತ ರಾಷ್ಟ್ರೀಯ ನಾಯಕರ ಹೆಸರಲ್ಲಿ ರಾಜಕೀಯ ಕೆಸರೆರಚಾಟ ನಡೆಯುತ್ತಿತ್ತು. ಸಿ.ಟಿ.ರವಿ ಹೇಳಿಕೆಯಿಂದ ಕೆಂಡವಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದ ಬಸವನಹಳ್ಳಿಯಲ್ಲಿರುವ ಸಿ.ಟಿ.ರವಿ ನಿವಾಸಕ್ಕೆ ಮುತ್ತಿಗೆ ಹಾಕಲು ರೆಡಿಯಾಗಿದ್ದರು. ಕಾಂಗ್ರೆಸ್ ಕಾರ್ಯಕ್ರಮಕ್ಕೆ ಪ್ರತಿಯಾಗಿ ಬಿಜೆಪಿಗರು ಕೂಡ ಬರಲಿ ಅದು ಹೇಗೆ ಬರುತ್ತಾರೆ ನೋಡುತ್ತೇವೆ ಎಂದು ಬೆಳಗ್ಗೆಯಿಂದಲೂ ಸಿ.ಟಿ.ರವಿ ಮನೆ ಮುಂದೆ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಸಿಗರ ದಾರಿ ಕಾದಿದ್ದರು.
Advertisement
ಕಾಂಗ್ರೆಸ್ಸಿಗರ ಈ ಹೋರಾಟಕ್ಕೆ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ ಬರಬೇಕಿತ್ತು. ಆದರೆ ಕೊನೆ ಘಳಿಗೆಯಲ್ಲಿ ಅವರು ಬರಲಿಲ್ಲ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದಂತೆ ನಗರದ ಐ.ಜಿ.ರಸ್ತೆ ಬಳಿಯೇ ಪೊಲೀಸರು ಎಲ್ಲರನ್ನೂ ಬಂಧಿಸಿದರು. ಈ ವೇಳೆ ಪೊಲೀಸರು-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ, ನೂಕಾಟ, ತಳ್ಳಾಟವೂ ನಡೆಯಿತು. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ಬಂದಿದ್ದರಿಂದ ಪೊಲೀಸರು ಸುಮಾರು 150 ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದರು. ಇತ್ತ ಬಿಜೆಪಿ ಕಾರ್ಯಕರ್ತರು ಬರಲಿ ನೋಡೋಣ. ಸಾರ್ವಜನಿಕ ಪ್ರದೇಶದಲ್ಲಿ ಹೇಗೆ ಪ್ರತಿಭಟನೆ ಮಾಡುತ್ತಾರೆ, ಸಿ.ಟಿ.ರವಿಯವರ ಮನೆ ಬಳಿ ಬರಲಿ ನಾವು ಕಾಂಗ್ರೆಸ್ ಕಚೇರಿಗೆಗೆ ಮುತ್ತಿಗೆ ಹಾಕುತ್ತೇವೆ ಎಂದು ಕಾದುಕೂತಿದ್ದರು. ಆದರೆ ಪೊಲೀಸರು ಸರ್ಪಗಾವಲಿನಿಂದ ಕಾಂಗ್ರೆಸ್ಸಿಗರು ಸಿ.ಟಿ.ರವಿ ಮನೆಗೂ ಮುತ್ತಿಗೆ ಹಾಕಲಿಲ್ಲ. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮೇಲೂ ಮುತ್ತಿಗೆ ಹಾಕಲಿಲ್ಲ. ಈ ಇಬ್ಬರ ನಡುವಿನ ಕೆಸರೆರಚಾಟದಿಂದ ಹೈರಾಣಾಗಿದ್ದು ಮಾತ್ರ ಜನಸಾಮಾನ್ಯರು ಮತ್ತು ಪೊಲೀಸರು. ಇದನ್ನೂ ಓದಿ: ಸಿದ್ದರಾಮಯ್ಯ ಕಾಲಜ್ಞಾನಿಯಲ್ಲ, ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ: ಸಿ.ಟಿ.ರವಿ ವ್ಯಂಗ್ಯ