ಬೆಂಗಳೂರು: ಇಸ್ರೇಲ್ (Isreal) ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಇದೀಗ ಇಸ್ರೇಲ್ ಮೇಲಿನ ದಾಳಿಕೋರರನ್ನು ಬಿಜೆಪಿಯು ಶಿವಮೊಗ್ಗ (Shivamogga) ಗಲಭೆಕೋರರಿಗೆ ಹೋಲಿಸಿದೆ.
ಇಂದು ಯಹೂದಿಗಳ ದೇಶ ಇಸ್ರೇಲ್ ಮೇಲೆ ಗನ್ನು-ಗುಂಡುಗಳಿಂದ ದಾಳಿ ಮಾಡುತ್ತಿರುವ ದಾಳಿಕೋರರಿಗೂ ಮೊನ್ನೆ ಶಿವಮೊಗ್ಗದಲ್ಲಿ ತಲ್ವಾರ್ ಮೆರವಣಿಗೆ ಮಾಡುತ್ತಾ, ಭಯದ ವಾತಾವರಣ ಸೃಷ್ಟಿಸುತ್ತಾ ಅಲ್ಪಸಂಖ್ಯಾತ ಬಾಹುಳ್ಯವುಳ್ಳ ಸ್ಥಳಗಳಿಂದ ಹಿಂದೂಗಳನ್ನು ಓಡಿಸಲೆತ್ನಿಸಿದ ಮತಾಂಧರಿಗೂ ಏನೇನೂ ವ್ಯತ್ಯಾಸವಿಲ್ಲ!
????️ ಅವರ ಸ್ಫೂರ್ತಿ ಒಂದೇ!
????️ ಅವರ ಉದ್ದೇಶ…
— BJP Karnataka (@BJP4Karnataka) October 8, 2023
Advertisement
ಈ ಸಂಬಂಧ ‘ಎಕ್ಸ್’ ನಲ್ಲಿ ಬರೆದುಕೊಂಡಿರುವ ಬಿಜೆಪಿ (BJP), ಇಂದು ಯಹೂದಿಗಳ ದೇಶ ಇಸ್ರೇಲ್ ಮೇಲೆ ಗನ್ನು-ಗುಂಡುಗಳಿಂದ ದಾಳಿ ಮಾಡುತ್ತಿರುವ ದಾಳಿಕೋರರಿಗೂ ಮೊನ್ನೆ ಶಿವಮೊಗ್ಗದಲ್ಲಿ ತಲ್ವಾರ್ ಮೆರವಣಿಗೆ ಮಾಡುತ್ತಾ, ಭಯದ ವಾತಾವರಣ ಸೃಷ್ಟಿಸುತ್ತಾ, ಅಲ್ಪಸಂಖ್ಯಾತ ಬಾಹುಳ್ಯವುಳ್ಳ ಸ್ಥಳಗಳಿಂದ ಹಿಂದೂಗಳನ್ನು ಓಡಿಸಲೆತ್ನಿಸಿದ ಮತಾಂಧರಿಗೂ ಏನೇನೂ ವ್ಯತ್ಯಾಸವಿಲ್ಲ!
Advertisement
ಖಡ್ಗವೇ ಅವರ ಸ್ಫೂರ್ತಿ ಒಂದೇ!
ಖಡ್ಗವೇ ಅವರ ಉದ್ದೇಶ ಒಂದೇ!
ಖಡ್ಗವೇ ಅವರ ಘೋಷ ಒಂದೇ!
Advertisement
Advertisement
ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ‘ಹಮಾಸ್’ ದಾಳಿಗೆ ಪ್ರತ್ಯುತ್ತರವಾಗಿ ಇದೀಗ ಆರಂಭವಾಗಿರುವ ಯುದ್ಧವು ಆದಷ್ಟು ಶೀಘ್ರದಲ್ಲಿ ಅಂತ್ಯ ಕಂಡು ಶಾಂತಿ ನೆಲಸುವಂತಾಗಲಿ ಎಂದು ಬಿಜೆಪಿ ತಿಳಿಸಿದೆ. ಇದನ್ನೂ ಓದಿ: ಇಸ್ರೇಲ್ ಒಳಗೆ ನುಗ್ಗಿದ ಉಗ್ರರು – ಸಾರ್ವಜನಿಕರ ಮೇಲೆ ಗುಂಡಿನ ಮಳೆ
ಹಮಾಸ್ ಉಗ್ರರು 5ಂಕ್ಕೂ ಹೆಚ್ಚು ಇಸ್ರೇಲ್ ಸೈನಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ. ಅಲ್ಲದೇ ದೇಶದ ಒಳಗೆ ನುಗ್ಗಿ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕರ ಕಗ್ಗೊಲೆ ಮಾಡುತ್ತಿದ್ದಾರೆ. ಅವರ ವಿರುದ್ಧ ಸೇನೆ ಹೋರಾಡುತ್ತಿದೆ ಎಂದು ಸೇನಾ ವಕ್ತಾರ ರಿಚರ್ಡ್ ಹೆಚ್ಟ್ ಹೇಳಿದ್ದಾರೆ.
ಯುದ್ಧ ಘೋಷಣೆಯ ಬಳಿಕ ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರನ್ನು ಜಾಗರೂಕರಾಗಿರುವಂತೆ ಎಚ್ಚರಿಸಿದೆ. ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ. ಅನಗತ್ಯವಾಗಿ ಮನೆಯಿಂದ ಹೊರಗೆ ಬರದಿರುವಂತೆ ಸಲಹೆ ನೀಡಲಾಗಿದೆ.
Web Stories