ಬೆಂಗಳೂರು: ಕಾವೇರಿ (Cauvery) ರಾಜಕೀಯ ಜೋರಾಗಿದೆ. ತಮಿಳುನಾಡಿಗೆ ನೀರು ಹರಿಸೋದನ್ನು ಖಂಡಿಸಿ ಸೋಮವಾರ ಮಂಡ್ಯ ಬಂದ್‍ಗೆ ಬಿಜೆಪಿ (BJP) ಕರೆ ನೀಡಿದೆ. ಮಂಡ್ಯದಲ್ಲಿ ಸಭೆ ನಡೆಸಿದ ಹಳೆ ಮೈಸೂರು ಭಾಗದ ಬಿಜೆಪಿ ನಾಯಕರು ಹೋರಾಟಕ್ಕೆ ಮುಂದಾಗಿದ್ದಾರೆ.
ಸೋಮವಾರ ತಮಿಳುನಾಡು (Tamilnadu) ಸಲ್ಲಿಸಿರೋ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿ (Supreme Court) ಬರಲಿದೆ. ಹೀಗಾಗಿ ಅದೇ ದಿನ ರಾಜ್ಯದ ಜಲಾಶಯಗಳ ವಸ್ತುಸ್ಥಿತಿ ಬಗ್ಗೆ ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಇಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
Advertisement
Advertisement
ಸದ್ಯ ಕೆಆರ್ ಎಸ್‍ನಲ್ಲಿ (KRS) ನೀರಿನ ಮಟ್ಟ 29 ಟಿಎಂಸಿಗೆ ಇಳಿದಿದೆ. ತಮಿಳುನಾಡಿಗೆ 12,960 ಕ್ಯೂಸೆಕ್ ನೀರು ಹರಿಯುತ್ತಿದೆ. ಈ ಮಧ್ಯೆ, ಬಾಗಿನಕ್ಕೆ ಮುನ್ನವೇ ಕಬಿನಿ ಜಲಾಶಯದಲ್ಲಿ 5.5 ಅಡಿಯಷ್ಟು ನೀರು ಖಾಲಿಯಾಗಿದೆ. ರಾಜ್ಯವನ್ನು ಬರಪೀಡಿತ ಎಂದು ಘೋಷಿಸುವಂತೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ತಂಪೆರೆದ ಮಳೆರಾಯ
Advertisement
Advertisement
ಇತ್ತ 18 ದಿನಗಳ ಬಳಿಕ ರಾಜ್ಯದಲ್ಲಿ ಮಳೆ ದರ್ಶನವಾಗಿದೆ. ಕರಾವಳಿ, ಮಲೆನಾಡು, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಉತ್ತಮ ಮಳೆಯಾಗಿದೆ. ಉಡುಪಿ, ದಕ್ಷಿಣ ಕನ್ನಡದಲ್ಲಿ ನೂರು ಮಿಲಿಮೀಟರ್‌ಗೂ ಹೆಚ್ಚು ಮಳೆ ಬಿದ್ದಿದೆ. ದಾವಣಗೆರೆ, ಕೊಡಗು, ಚಿಕ್ಕಮಗಳೂರಲ್ಲಿ ಮಳೆ ಆಗಿದೆ. ಬೆಂಗಳೂರು, ಮೈಸೂರಿನಲ್ಲಿ ದಟ್ಟ ಮೋಡಗಳು ಆವರಿಸಿದ್ದವು. ಮಧ್ಯಾಹ್ನದ ನಂತ್ರ ಮಳೆ ಬಿದ್ದು ನೆಲತಂಪಾಯ್ತು. ಮುಂದಿನ 48 ಗಂಟೆಯಲ್ಲಿ ವ್ಯಾಪಕ ಮಳೆ ಆಗಲಿದೆ ಎಂದು ಕೆಎಸ್‍ಎನ್‍ಡಿಎಂಸಿ ಮುನ್ಸೂಚನೆ ನೀಡಿದೆ.
Web Stories