ಧಾರವಾಡ: ಬಿಜೆಪಿ (BJP) ಪಕ್ಷ ಕಾಂಗ್ರೆಸ್ (Congress) ಶಾಸಕರಿಗೆ 50 ಕೋಟಿ ಆಫರ್ ನೀಡುತ್ತಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad) ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ (Dharwad) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಹಜವಾಗಿಯೇ ದುಡ್ಡು ಇರುವ ಪಕ್ಷ. ಕಳೆದ 10 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ 2,500 ಶಾಸಕರನ್ನು ಖರೀದಿ ಮಾಡಿದೆ. ಬಿಜೆಪಿ ಅಧಿಕೃತವಾಗಿಯೇ ತನ್ನ ಬಳಿ 7,500 ಕೋಟಿ ಹಣ ಇದೆ ಎಂದು ಹೇಳಿಕೊಂಡಿದೆ ಎಂದರು. ಇದನ್ನೂ ಓದಿ: ಹರೀಶ್ ಪೂಂಜಾ ಇನ್ನೂ ರಾಜಕೀಯದಲ್ಲಿ ಬಚ್ಚಾ: ಸಿದ್ದರಾಮಯ್ಯ
Advertisement
Advertisement
ಪ್ರಧಾನಮಂತ್ರಿ ಪರಿಹಾರ ನಿಧಿಗೆ 30 ಸಾವಿರ ಕೋಟಿ ರೂ. ಜಮಾ ಆಗಿದೆ. ಆ ದುಡ್ಡಲ್ಲಿ ಇದುವರೆಗೆ ಒಂದೂ ಆಸ್ಪತ್ರೆ ಕಟ್ಟಿಸಿಲ್ಲ ಎಂದು ಹರಿಹಾಯ್ದರು. ಸಚಿವ ಸತೀಶ್ ಜಾರಕಿಹೊಳಿ ಅವರು ಅಸಮಾಧಾನಿತರಾಗಿಲ್ಲ. ಅವರು ಬೇರೆ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿರಬಹುದು. ಅದು ರಾಜಕೀಯ ಉದ್ದೇಶಕ್ಕಲ್ಲ. ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವದ ಮೇಲೆ ಕೆಲಸ ಮಾಡುತ್ತಿದ್ದಾರೆ. ಬೇರೆ ಯಾವುದಾದರೂ ಕಾರಣಕ್ಕೆ ಅವರು ಅಸಮಾಧಾನಗೊಂಡಿದ್ದರೆ ಅವರನ್ನೇ ಕೇಳಿ ತಿಳಿದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಸಿಎಂಗೆ ಮಂತ್ರಿಗಳ ಮನೆ ಮನೆಗೆ ಓಡಾಡುವ ಪರಿಸ್ಥಿತಿ ಬಂದಿದೆ: ಗೋವಿಂದ ಕಾರಜೋಳ
Advertisement
ಮುಂಬರುವ ಸರ್ಕಾರಗಳು ಸಣ್ಣ ಕೈಗಾರಿಕೋದ್ಯಮಗಳ ಬಗ್ಗೆ ಕಾಳಜಿ ವಹಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಎಲ್ಲರ ಸಾಲವನ್ನೂ ಮನ್ನಾ ಮಾಡಬೇಕಂತೇನಿಲ್ಲ. ಅದಕ್ಕಾಗಿಯೇ ಕೆಲವೊಂದಿಷ್ಟು ಮಾನದಂಡಗಳನ್ನಿಟ್ಟುಕೊಳ್ಳಬೇಕು. ರೈತರು ಪಡೆದ ಸಾಲವನ್ನು ಬ್ಯಾಂಕ್‌ಗಳು ಒತ್ತಾಯದ ಮೂಲಕ ಮರುಪಾವತಿ ಮಾಡಿಸಿಕೊಳ್ಳುವುದು ಸರಿಯಲ್ಲ ಎಂದರು. ಇದನ್ನೂ ಓದಿ: Rozgar Mela: 51,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ
Advertisement
ಸಾಲ ಪಡೆದುಕೊಂಡ ರೈತರು (Farmers) ಸಾಲವನ್ನು ನಿಯತ್ತಾಗಿ ಮರುಪಾವತಿ ಮಾಡುತ್ತಾರೆ. ಈ ವಿಚಾರದಲ್ಲಿ ನಮ್ಮ ದೇಶದಲ್ಲಿ ಬೇರೆ ವ್ಯವಸ್ಥೆಯಲ್ಲಿ ನಾವಿದ್ದೇವೆ. ಕಳೆದ 30 ವರ್ಷಗಳಿಂದ ಇದೇ ರೀತಿ ಮುನ್ನಡೆದುಕೊಂಡು ಬಂದಿದೆ. ಇದರ ಬಗ್ಗೆ ಹೆಚ್ಚಿಗೆ ಮಾತನಾಡಿದರೆ ಅದು ರಾಜಕೀಯವಾಗುತ್ತದೆ. ಬಹಳಷ್ಟು ಜನ ರೈತರು ಸಾಲ ಪಡೆದುಕೊಂಡಿದ್ದಾರೆ. ಕೆಲವರಿಗೆ ಮರುಪಾವತಿ ಮಾಡಲು ಆಗಿಲ್ಲ. ಅಂತವರ ಬಗ್ಗೆ ಸರ್ಕಾರಗಳು ಮಾನವೀಯತೆ ದೃಷ್ಟಿಯಿಂದ ವಿಚಾರ ಮಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: 50 ಅಲ್ಲ 100 ಕೋಟಿ ಕೊಟ್ರೂ ಕಾಂಗ್ರೆಸ್ ಶಾಸಕರು ಬಿಜೆಪಿ ಗಾಳಕ್ಕೆ ಬೀಳಲ್ಲ: ಗಣಿಗ ರವಿ
Web Stories