ಸರ್ಕಾರ ಉರುಳಿಸುವುದರಲ್ಲಿರುವ ಆಸಕ್ತಿ ಪಕ್ಷದ ಮೇಲಿಲ್ಲ – ಡಿಕೆ ಸುರೇಶ್ ಕಿಡಿ

Public TV
2 Min Read
dk suresh

-ಕೈಗೆ ಬಾವುಟ ಕೊಟ್ಟು, ಏನಾಗಿದೆ ಅಂತ ಬಿಎಸ್‍ವೈ ಕೇಳಲಿಲ್ಲ

ಬೆಂಗಳೂರು: ಚಂದ್ರಶೇಖರ್ ಅವರು ಮೂಲತಃ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ನಂಬಿ ಬೆಳೆದವರು. ಆದರೆ ಅವರಿಗೆ ಉಂಟಾದ ಕೆಲ ನಿರ್ಧಾರದಿಂದ ದುಡುಕಿದ್ದರು. ಆದರೆ ಇಂದು ಅವರು ತೆಗೆದುಕೊಂಡಿರುವ ನಿರ್ಣಯಕ್ಕೆ ಪಕ್ಷದ ಕಡೆಯಿಂದ ಸ್ವಾಗತ ಕೋರುತ್ತೇನೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ರಾಮನಗರದ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಚಂದ್ರಶೇಖರ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇಂದು ನಮ್ಮ ಪಕ್ಷದ ಪರವಾಗಿ ಹಾಗೂ ವೈಯಕಿಕ್ತವಾಗಿ ಚಂದ್ರಶೇಖರ್ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಚಂದ್ರಶೇಖರ್ ಮೂಲತಃ ಕಾಂಗ್ರೆಸ್ ಪಕ್ಷದವರಾಗಿದ್ದು, ಬಿಜೆಪಿ ಪಕ್ಷ ನಾಯಕರು ಧೋರಣೆಯಿಂದ ಬೇಸತ್ತಿದ್ದಾರೆ. ಈಗ 5 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಮಂಡ್ಯ ಚುನಾವಣೆಗೆ ಎಲ್ಲ ನಾಯಕರು ರಾಮನಗರದ ಮೇಲೆ ಹೋಗಬೇಕು. ಆದರೆ ರಾಮನಗರಕ್ಕೆ ಯಾವ ನಾಯಕರು ಪ್ರಚಾರಕ್ಕೆ ಬರುವುದಿಲ್ಲ. ಪ್ರಚಾರದ ವೇಳೆ ನಾಯಕರು ಬಾವುಟ ಕೊಟ್ಟು ಹೋದವರು, ಬಾವುಟ ಏನಾಯಿತು ಎಂದು ಕೇಳುವುದಿಲ್ಲ ಎಂದು ಡಿ.ಕೆ.ಸುರೇಶ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

dk suresh 2

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬಳಾರ್ಳಿ, ಮಂಡ್ಯ ಪ್ರತಿಷ್ಠೆಯ ಕಣವಾಗಿದ್ದು, ಶಿವಮೊಗ್ಗದಲ್ಲಿ ಮಗ ಬಿ.ವೈ ರಾಘವೇಂದ್ರ ಸ್ಪರ್ಧೆ ಮಾಡಿದ್ದಕ್ಕೆ ಅಲ್ಲಿಯೇ ಪ್ರಚಾರ ಮಾಡುತ್ತಿದ್ದಾರೆ. ಈಗ ಬೇರೆಯವರು ನಿಂತಿರುವ ಕ್ಷೇತ್ರದಲ್ಲಿ ಅಸಡ್ಡೆ ತೋರುತ್ತಿದ್ದಾರೆ. ಯಾವ ಆಧಾರದ ಮೇಲೆ ಅಭ್ಯರ್ಥಿಯಾಗಲು ಇಷ್ಟಪಡುತ್ತಾರೆ. ಇದರಿಂದ ಮನನೊಂದು ನಮ್ಮ ಮನೆಯಲ್ಲಿರುವುದೇ ವಾಸಿ ಎಂದು ಚಂದ್ರಶೇಖರ್ ಬಂದಿದ್ದು, ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದಾರೆ ಅಂತಾ ತಿಳಿಸಿದರು.

dk suresh 3

ನಾವು ಚಂದ್ರಶೇಖರ್ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ. ಈಗಾಗಲೇ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಚುನಾವಣೆ ಅಧಿಕಾರಿಗಳಿಗೂ ಕೂಡ ಮೇಲ್ ಕಳುಹಿಸಿದ್ದಾರೆ. ನಾನು ಚುನಾವಣೆ ಅಭ್ಯರ್ಥಿಯಾಗಿ ಹಿಂದೆ ಸರಿದಿದ್ದೇನೆ. ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ಸೂಚಿಸುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಮೇಲ್ ಮಾಡಿದ್ದು, ನಂತರ ಕಚೇರಿಗೆ ಹೋಗಿ ಪತ್ರ ನೀಡಲಿದ್ದಾರೆ. ಚಂದ್ರಶೇಖರ್ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರಿಗೆ ರಾಜಕೀಯದ ಅನುಭವಗಳು ಹಾಗೂ ಬೈ ಎಲೆಕ್ಷನ್ ಹೇಗೆ ನಡೆಯುವುದು ಎಂದು ಗೊತ್ತಿದೆ. ಬೈ ಎಲೆಕ್ಷನ್ ಮಾಡುವ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಶಿಸ್ತು ಇಲ್ಲ. ಕೇವಲ ಅಧಿಕಾರಕ್ಕಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯ ಕಾಲೆಳೆದರು.

dk suresh 4

ಸದ್ಯ ನಾವು ಈ ಚುನಾವಣೆಯಲ್ಲಿ 5ಕ್ಕೆ 5 ಸ್ಥಾನ ಗೆಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಬದಲಾವಣೆ ಕಾಣುತ್ತೀರಿ. ಅವರು ಮೂಲತಃ ಕಾಂಗ್ರೆಸ್‍ನವರು. ಅವರಿಗೆ ಕಾಂಗ್ರೆಸ್ ಸಂಸ್ಕøತಿ ಮತ್ತು ಇತಿಹಾಸ ಗೊತ್ತಿದೆ. ಅವರು ಈಗಾಗಲೇ ಹಿರಿಯ ನಾಯಕರಿಗೆ ಈ ಬಗ್ಗೆ ತಿಳಿಸಿ ನನಗೆ ನೋವಾಗಿದೆ ಎಂದು ಹೇಳಿದ್ದಾರೆ. ಆದರೆ ಅವರಿಗೆ ಇದೂವರೆಗೂ ರಾಜ್ಯಾಧ್ಯಕ್ಷ ಕರೆ ಮಾಡಿ ಏನು ನೋವಾಗಿದೆ ಎಂದು ಕೇಳಲಿಲ್ಲ. ಅವರು ಬಳ್ಳಾರಿ, ಶಿವಮೊಗ್ಗ, ಮಂಡ್ಯ ಕ್ಷೇತ್ರದಲ್ಲಿ ವಿಶೇಷ ತಂಡವನ್ನು ರಚಿಸಿದ್ದಾರೆ ಎಂದು ಕೇಳಿದ್ದೇನೆ. ಆದರೆ ರಾಮಗರ ಕ್ಷೇತ್ರಕ್ಕೆ ಯಾರು ಬಂದಿಲ್ಲ ಎಂದು ಡಿಕೆ. ಸುರೇಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *