ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ – ಈಶ್ವರಪ್ಪಗೆ ಹೈಕಮಾಂಡ್‌ ಶಾಕ್‌

Public TV
1 Min Read
KS Eshwarappa BJP 3X2

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ (BJP) ಕೊನೆವರೆಗೂ ಉಳಿಸಿಕೊಂಡಿದ್ದ ಎರಡು ಕ್ಷೇತ್ರಗಳಿಗೆ ಕೊನೆಗೂ ಅಭ್ಯರ್ಥಿಗಳನ್ನು ಘೋಷಿಸಿದೆ.

ಶಿವಮೊಗ್ಗ (Shivamogga) ಕ್ಷೇತ್ರಕ್ಕೆ ಚನ್ನಬಸಪ್ಪ ಹಾಗೂ ಮಾನ್ವಿ ಕ್ಷೇತ್ರಕ್ಕೆ ಬಿ.ವಿ.ನಾಯಕ್‌ ಅವರನ್ನು ಹುರಿಯಾಳುಗಳನ್ನಾಗಿಸಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್‌ ಚನ್ನಬಸಪ್ಪಗೆ ಬಿಜೆಪಿ ಈ ಬಾರಿ ಟಿಕೆಟ್‌ ನೀಡಿದೆ. ಇದನ್ನೂ ಓದಿ: ಕಾಂಗ್ರೆಸ್ 5ನೇ ಪಟ್ಟಿ ರಿಲೀಸ್ – ಸಿಎಂ ಕ್ಷೇತ್ರದಲ್ಲಿ ʻಕೈʼ ಅಭ್ಯರ್ಥಿ ಚೇಂಜ್‌

channabasappa bjp

ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ್ದು, ಪುತ್ರನಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಈಶ್ವರಪ್ಪಗೆ (Eshwarappa) ಹೈಕಮಾಂಡ್ ಶಾಕ್ ನೀಡಿದೆ. ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್‌ ಕೈತಪ್ಪಿದ್ದು, ಚನ್ನಬಸಪ್ಪಗೆ ಮಣೆ ಹಾಕಲಾಗಿದೆ.

ಬಿ.ವಿ.ನಾಯಕ್ ಅವರು ನಿನ್ನೆಯಷ್ಟೇ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ನಾಯಕ್‌ಗೆ ಟಿಕೆಟ್‌ ಗಿಟ್ಟಿಸಿಕೊಡುವಲ್ಲಿ ಸಚಿವ ಶ್ರೀರಾಮುಲು ಯಶಸ್ವಿಯಾಗಿದ್ದಾರೆ.

ನಾಲ್ಕು ಹಂತಗಳಲ್ಲಿ 224 ಅಭ್ಯರ್ಥಿಗಳ ಘೋಷಿಸಿದ ಬಿಜೆಪಿ
ಮೊದಲ ಪಟ್ಟಿ – 189
ಎರಡನೇ ಪಟ್ಟಿ – 23
ಮೂರನೇ‌ ಪಟ್ಟಿ – 10
ನಾಲ್ಕನೇ ‌ಪಟ್ಟಿ – 02

ಈ ಸಲ ಬಿಜೆಪಿ 73 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. 20 ಕುಟುಂಬಗಳ ಸದಸ್ಯರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸುವ ಮೂಲಕ ಕುಟುಂಬ ರಾಜಕಾರಣಕ್ಕೂ ಮಣೆ ಹಾಕಿದೆ. ಅಲ್ಲದೇ 12 ಮಹಿಳೆಯರಿಗೆ ಬಿಜೆಪಿ ಟಿಕೆಟ್‌ ಕೊಟ್ಟಿದೆ. ಇದನ್ನೂ ಓದಿ: JDS ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್ – 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಬದಲಾವಣೆ

 

Share This Article