– ದೋಸ್ತಿಗಳ ಕೋರ್ ಕಮಿಟಿ ಸಭೆಯಲ್ಲಿ ಹೆಚ್‌ಡಿಕೆ, ವಿಜಯೇಂದ್ರ ಸಮನ್ವಯದ ಪಾಠ
ಮೈಸೂರು: ಬಿಜೆಪಿ-ಜೆಡಿಎಸ್ (BJP-JDS Alliance) ದೋಸ್ತಿಗಳ ಕೋರ್ ಕಮಿಟಿ ಸಭೆಯಲ್ಲಿ ಎರಡೂ ಪಕ್ಷಗಳ ಮುಖಂಡರಿಗೆ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹಾಗೂ ಬಿ.ವೈ.ವಿಜಯೇಂದ್ರ (Vijayendra) ಸಮನ್ವಯದ ಪಾಠ ಮಾಡಿದ್ದಾರೆ.
Advertisement
ಹಳೆಯ ಕೇಸ್, ಹಳೆಯ ಜಗಳ ಅಂಥ ಯಾವುದು ಇರಕೂಡದು. ರಾಜಕೀಯವಾಗಿ ಬಿಜೆಪಿಯವರು ಜೆಡಿಎಸ್ ಮೇಲೆ ಹಾಗೂ ಜೆಡಿಎಸ್‌ನವರು ಬಿಜೆಪಿ ಮೇಲೆ ಕೇಸ್ ಹಾಕಿಸಿದ್ದರೆ ಅದನ್ನು ತೆಗೆಸೋಣ. ಆ ಕೇಸ್‌ಗಳ ಪಟ್ಟಿಯಿದ್ದರೆ ನಮ್ಮ ಕೈಗೆ ಕೊಡಿ. ತುರ್ತಾಗಿ ಅದನ್ನ ತೆಗೆಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಂಗೇರಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಬೃಹತ್ ಮೆರವಣಿಗೆ ಮೂಲಕ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ
Advertisement
Advertisement
ಜೆಡಿಎಸ್ ಹಾಗೂ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋದವರನ್ನು ಮರಳಿ ವಾಪಸ್ ಕರೆದುಕೊಂಡು ಬನ್ನಿ ಎನ್ನುವ ಮೂಲಕ ಅಪರೇಷನ್ ಕಾಂಗ್ರೆಸ್‌ಗೆ ಪರ್ಯಾಯವಾಗಿ ಅಪರೇಷನ್ ದೋಸ್ತಿ ಶುರುವಿಗೆ ದೋಸ್ತಿ ನಾಯಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Advertisement
ಸಿಎಂ, ಡಿಸಿಎಂ ಅಬ್ಬರಕ್ಕೆ ಹೆದರಬೇಡಿ. ನಾವು ನಿಮ್ಮ ಜೊತೆಯಲ್ಲಿದ್ದೇವೆ. ಅವರು ಅಬ್ಬರಿಸುವ ಕೆಲಸ ಮಾಡುತ್ತಾರೆ. ಸಿಎಂ ಮೈಸೂರಿನಲ್ಲಿದ್ದಾರೆ. ಮ್ಯಾಜಿಕ್ ಆಗುತ್ತೆ ಎಂದು ಬಿಂಬಿಸುತ್ತಾರೆ. ಯಾವ ಮ್ಯಾಜಿಕ್‌ಗಳು ನಡೆಯುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ನಲ್ಲಿ ಉಳಿದಿರೋ ನಿಷ್ಠಾವಂತರು ‘ಇಂಡಿಯಾ’ ಕೂಟಕ್ಕೆ ಬೆಂಬಲ ಕೊಡ್ತೀವಿ: ಸಿಎಂ ಇಬ್ರಾಹಿಂ
ನಮ್ಮ ಅಭ್ಯರ್ಥಿ ಜಾತಿ ಮೀರಿದ ವ್ಯಕ್ತಿ. ಅದು ನಮಗೆ ಬಹುದೊಡ್ಡ ಪ್ಲಸ್ ಪಾಯಿಂಟ್. ಇಂತಹ ಅವಕಾಶ ಯಾವ ಕ್ಷೇತ್ರದಲ್ಲಿಯೂ ಇರುವುದಿಲ್ಲ. ಮೈಸೂರಿನ ದೋಸ್ತಿ ಪಾಲಿಗೆ ಅಭ್ಯರ್ಥಿಯೇ ವರದಾನ. ಇದನ್ನ ಉಪಯೋಗಿಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ದೋಸ್ತಿ ನಾಯಕರು ಪಾಠ ಮಾಡಿದ್ದಾರೆ.