ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಮತ್ತು ಬಿಜೆಪಿ ತಲಾ 14 ಸ್ಥಾನಗಳನ್ನು ಗೆಲ್ಲಲಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.
ಟೈಮ್ಸ್ ನೌ, ವಿಎಂಆರ್ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟಕ್ಕೆ ಮತ್ತು ಬಿಜೆಪಿಗೆ ತಲಾ 14 ಸ್ಥಾನಗಳು ಲಭಿಸಿದೆ. ಒಟ್ಟು 28 ಕ್ಷೇತ್ರಗಳು ಕರ್ನಾಟಕದಲ್ಲಿದ್ದು, 2014ರ ಚುನಾವಣೆಯಲ್ಲಿ ಬಿಜೆಪಿ 17 ರಲ್ಲಿ ಜಯಗಳಿಸಿದ್ದರೆ, ಕಾಂಗ್ರೆಸ್ 9 ಜೆಡಿಎಸ್ 2 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
Advertisement
.@RShivshankar and Psephologist Jai Mrug takes us through the Lok Sabha seats in Karnataka #2019OpinionPoll pic.twitter.com/IQrJ8ig0A0
— TIMES NOW (@TimesNow) January 30, 2019
Advertisement
ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ ಯುಪಿಎ 2, ಎನ್‍ಡಿಎ 27, ಎಸ್‍ಪಿ+ ಬಿಎಸ್‍ಪಿ ಮೈತ್ರಿಕೂಟ 51 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 71 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Advertisement
ತಮಿಳುನಾಡಿನ 39 ಕ್ಷೇತ್ರಗಳ ಪೈಕಿ ಯುಪಿಎ ಮೈತ್ರಿಕೂಟ 35 ರಲ್ಲಿ ಜಯಗಳಿಸಬಹುದು. ಕೇರಳದ 20 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 16 ರಲ್ಲಿ ಜಯಗಳಿಸಿದರೆ ಬಿಜೆಪಿ ಈ ಬಾರಿ ತನ್ನ ಖಾತೆಯನ್ನು ತೆರೆಯಬಹುದು ಎಂದು ಹೇಳಿದೆ.
Advertisement
ತೆಲಂಗಾಣದ ಒಟ್ಟು 17 ಕ್ಷೇತ್ರಗಳಲ್ಲಿ ಟಿಆರ್‍ಎಸ್ 10 ಸ್ಥಾನ ಪಡೆದುಕೊಳ್ಳಬಹುದು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಒಟ್ಟು 42 ಕ್ಷೇತ್ರಗಳ ಪೈಕಿ 32 ರಲ್ಲಿ ಜಯಗಳಿಸಬಹುದು. ಕಳೆದ ಬಾರಿ 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಬಿಜೆಪಿ ಈ ಬಾರಿ 9ರಲ್ಲಿ ಜಯಗಳಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.
'The time at which the survey is being done, is the honeymoon period of SP and BSP alliance', says @SudhanshuTrived National Spokesperson BJP #2019OpinionPoll pic.twitter.com/feD1FrF3SH
— TIMES NOW (@TimesNow) January 30, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv